ಮೈಸೂರಿನ ಮಹೇಶ, ಶಿವಮೊಗ್ಗದಲ್ಲಿ ಆಟೋ ಕಳುವು, ಪತ್ತೆಯಾಗಿದ್ದು ಚಿಕ್ಕಜಾಜೂರಿನಲ್ಲಿ


ರೋಚಕವಾಗಿ ಆಟೋ ಕಳುವಿನ ಘಟನೆಯನ್ನ ತುಂಗ ನಗರ ಪೊಲೀಸರು ಲೀಲಾಜಾಣವಾಗಿ ಪತ್ತೆಮಾಡಿದ್ದಾರೆ. ಘಟನೆ ನಡೆದ 24 ಗಂಟೆಯಲ್ಲಿ ಆರೋಪಿಯನ್ನ ಪತ್ತೆ ಮಾಡಿ ಆತನಿಗೆ ನ್ಯಾಯಾಂಗ ಬಂಧನ ಕ್ಕೊಳಪಡಿಸಲಾಗಿದೆ.  


ಮೈಸೂರಿನಿಂದ ಬಂದ ವ್ಯಕ್ತಿಯೋರ್ವ ಹಣಗೆರೆಕಟ್ಟೆಗೆ ಹೋಗಿ ಬಂದವನು ಶಿವಮೊಗ್ಗದಲ್ಲಿ ಲೈವ್ ಆಗಿ ಆಟೋ ಕಳುವು ಮಾಡಿದ್ದಾನೆ. ಕಣ್ಣೆದುರಿಗೆ ಆಟೋ ಕದ್ದುಕೊಂಡು ಹೋಗುತ್ತಿದ್ದರೆ, ಮಾಲೀಕ ಮೂಕ ಪ್ರೇಕ್ಷನಂತೆ ನಿಲ್ಲುವಂತೆ ಮಾಡಿದ್ದಾನೆ.


ಡಿ.24 ರಂದು, ಮೈಸೂರಿನಿಂದ ಹಣಗೆರೆಕಟ್ಟೆಗೆ ಬಂದ ಮಹೇಶ್ ಎಂಬ ವ್ಯಕ್ತಿ ಹಣಗೆರೆ ಕಟ್ಟೆಯಿಂದ ಶಿವಮೊಗ್ಗಕ್ಕೆ ವಾಪಾಸ್ ಬಂದಿದ್ದಾನೆ. ಶಿವಮೊಗ್ಗಕ್ಕೆ ವಾಪಾಸ್ ಆದ ಮಹೇಶ್ ಹಳೇ ಪದ್ಮ ಚಲನಚಿತ್ರ ಮಂದಿರದ ಬಳಿ ಅಬ್ದುಲ್ ಬಶೀರ್ ಎಂಬುವರ ಬಳಿ ಗೋಪಾಳದಲ್ಲಿ ಹಣ್ಣು ಖರೀದಿಸಬೇಕು ಎಂದು ಕರೆದುಕೊಂಡು ಹೋಗಿದ್ದಾನೆ. 


ಪ್ಯಾಸೆಂಜರ್ ಮುಖವಾಡದಲ್ಲಿ ಆಟೋ ಹತ್ತಿದ್ದ ಮಹೇಶ್ ಗೋಪಾಳದ ಹಣ್ಣಿನ ಅಂಗಡಿಯ ಬಳಿ 11 ಸಾವಿರ ರೂ. ಮೌಲ್ಯದ 60‌ಕೆಜಿ ಹಣ್ಣು ಕಟ್ಟಿಸಲು‌ಮುಂದಾಗಿದ್ದಾನೆ. ಹಣ್ಣು ಕಟ್ಟಿಸುವುದು ತಡವಾಗುತ್ತಿದ್ದರಿಂದ ಆಟೋ ಬಶೀರ್ ಪ್ಯಾಸೆಂಜರ್ ಬಳಿಬಂದಿದ್ದಾನೆ.


ಆಟೋ ಬಶೀರ್ ಆಟೋಚಾವಿಯನ್ನ ಅಲ್ಲೇ ಬಿಟ್ಟು ಬಂದ ಪರಿಣಾಮ ಮಹೇಶ ಆಟೋ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. 


ಆಟೋ ಚಾವಿಯನ್ನ ಅಲ್ಲೆ ಬಿಟ್ಟು ಬಂದಿದ್ದರಿಂದ ಬಶೀರ್‌ಗೂ ಗೊತ್ತಾಗದಂತೆ ಚಲಾಯಿಸಿಕೊಂಡು ಕಳುವು ಮಾಡಿದ್ದಾನೆ.ಸ್ಥಳಕ್ಕೆ ಬಂದ ಬಶೀರ್ ಆಟೋ ಇಲ್ಲದನ್ನ ನೋಡಿ ಗಾಬರಿಯಾಗಿದ್ದಾರೆ. ನೇರವಾಗಿ ತುಂಗ ನಗರ ಪೊಲೀಸ್ ಠಾಣೆಗೆ ಬಂದ ಬಶೀರ್ ನಡೆದ ಘಟನೆಯನ್ನ ವಿವರಿಸಿದ್ದಾರೆ. 

 

ತಕ್ಷಣವೇ ಆಕ್ಟಿವ್ ಆದ ತುಂಗ ನಗರ ಪೊಲೀಸ್ ಠಾಣೆಯ ಪಿಐ ಗುರುರಾಜ್, ಪಿಎಸ್ಐ ಶಿವಪ್ರಸಾದ್ ಕಳ್ಳನ ಹಿಡಿಯಲು ತಂಡ ರಚಿಸಿದ್ದಾರೆ. ಬೆನ್ನು ಬಿದ್ದ ಪೊಲೀಸರಿಗೆ ಮಹೇಶ ಆಟೋ ಪತ್ತೆಯಾಗಿದ್ದು ಚಿಕ್ಕಜಾಜೂರಿನಲ್ಲಿ.


ಶಿವಮೊಗ್ಗದಲ್ಲಿ ಆಟೋಕದ್ದ ಮಹೇಶ ಗ್ಯಾಸ್ ತುಂಬಿಸಿಕೊಂಡು ಚಿಕ್ಕಜಾಜೂರಿಗೆ ತೆರಳಿದ್ದರಿಂದ ಆತನನ್ನ ಬಂಧಿಸಿ ಆಟೋವನ್ನ ವಶಕ್ಕೆ ಪಡೆಯಲಾಗಿದೆ. ನಂತರ ಮಹೇಶನನ್ನ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.



Post a Comment

Previous Post Next Post