ಇ.ವಿಶ್ವಾಸ್ ಗೆ ಜಾಮೀನು ರಹಿತ ಬಂಧನದ ಆದೇಶ, ಈಶ್ವರಪ್ಪನವರ ಅನುಮಾನವೇನು ಗೊತ್ತಾ?

 


ರಾಷ್ಟ್ರಭಕ್ತರ ಬಳಗದ ಹಾಗೂ ಮಾಜಿ ಕಾರ್ಪರೇಟರ್ ಇ.ವಿಶ್ವಾಸ್ ವಿರುದ್ಧ ಹಾಕಲಾಗಿರುವ ಎಫ್ಐಆರ್ ಗೆ ಜಾಮೀನು ರಹಿತ ಬಂಧನ ಜಾರಿಯಾಗಿದೆ. ರಾಜ್ಯದಲ್ಲಿ ಅಷ್ಟೇ‌ ಅಲ್ಲ ಜಿಲ್ಲೆಯಲ್ಲೂ ಪೊಲೀಸ್ ರಾಜ್ಯ ಜಾರಿಯಾಗಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಆತಂಕ ವ್ಯಕ್ತಪಡಿಸಿದರು. 


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಾಸ್ ಜನರ ಪರವಾಗಿ ಮಾತನಾಡಿದ್ದಾರೆ. ರೈಲ್ವೆ ಅಧಿಕಾರಿಯ ಮೇಲೆ ಹಲ್ಲೆ ನಡೆಸಿರುವುದಾಗಿ ಠಾಣೆಯಲ್ಲಿ ದೂರು ದಾಖಲಾಗಿದೆ. ಅವರ ಮೇಲೆ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ರಾಜಿಯಾದ ಪ್ರಕರಣದಲ್ಲಿ ಪ್ರಭಾವ ಬೀರಿ ದೂರು ಹಾಕಿಸಿರುವುದು ಕೀಳುಮಟ್ಟದ ರಾಜಕಾರಣವಾಗಿದೆ. ಪೊಲೀಸ್ ಇಲಾಖೆ ಯಾರ ಪ್ರಭಾವಕ್ಕೆ ಒಳಗಾಗಿದ್ದರೆ ಗೊತ್ತಿಲ್ಲ.


ನನ್ನ ನೇಲೂ ಜಾಮೀನು ರಹಿತ ವಾರೆಂಟ್ ಜಾರಿಮಾಡಲಾಯಿತು. ಬಾಂಗ್ಲಾ ಮುಸ್ಲೀಂ ವಿರುದ್ಧ ಮಾತನಾಡಿದರೆ ನಮ್ಮ ಎಸ್ಪಿಗೆ ಸಿಟ್ಟು ಬರುತ್ತೆ. ಯಾರ ಪ್ರಭಾವವಿದೆ ಗೊತ್ತಿಲ್ಲ. ನ್ಯಾಯಾಂಗದ ಬಗ್ಗೆ ನಂಬಿಕೆಯಿದೆ. ನಾನ್ ಬೇಲಬಲ್ ಹಾಕುವಂತ ತಪ್ಪು ಏನು ಮಾಡಿದ್ದಾರೆ. ರೈಲ್ವೆ ಇಂಜಿನಿಯರ್ ಗೆ ಹಲ್ಲೆ ಮಾಡಿರುವುದನ್ನ ಎಸ್ಪಿಯವರು ನೋಡಿದ್ದಾರಾ? 


ವಿಶ್ವಾಸ್ ಪ್ರಕರಣ ಠಾಣೆಯಲ್ಲಿ ರಾಜಿಯಾಗಿತ್ತು. ನಂತರ ಪ್ರಭಾವ ಬೀರಲಾಗಿದೆ. ಶುಕ್ರವಾರ ರಾತ್ರಿ ನಡೆದ ಪ್ರಕರಣ ಎಫ್ಐಅರ್ ಆಗಿದೆ. ಎಸ್ಪಿಯವರು ಗುಲಾಮರಾಗಿರಬಾರದು. ನಾನು ಅನೇಕ ಬಾರಿ ಮುಸ್ಲೀಂ ಗೂಂಡಾ ಎಂದಾಗ ದೂರು ದಾಖಲಾಗಲಿಲ್ಲ. ಈ ಪದವನ್ನ ಕಾಂಗ್ರೆಸ್ ಸರ್ಕಾರವಿದ್ದಾಗಲೂ ಬಳಸಿದ್ದೆ. ಆದರೆ ಪ್ರಕರಣ ದಾಖಲಾಗಲಿಲ್ಲ. ಆದರೆ ಬಾಂಗ್ಲಾ ಮುಸ್ಲೀಂ ವಿರುದ್ಣ ಮಾತನಾಡಿದ್ದಕ್ಕೆ ಎಸ್ಪಿ ಅವರು ಸಿಟ್ಟಾಗಿದ್ದೇಕೆ? ನಮ್ಮ ಊರಿನಲ್ಲೂ ದ್ವೇಷದ ರಾಜಕಾರಣ ನಡೆಯುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.  



Post a Comment

Previous Post Next Post