ಸಾಗರ ತಾಲೂಕು ಆನಂದ ಪುರ ವೃತ್ತದಿಂದ ಸ್ವಲ್ಪ ಮುಂದಕ್ಕೆ ಕಾರು ಮತ್ತು ಖಾಸಗಿ ಬಸ್ ಗಳ ನಡುವೆ ಡಿಕ್ಕಿ ಉಂಟಾಗಿದ್ದು ಕಾರಿನ ಇಬ್ಬರೂ ಸವಾರರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಶಿವಮೊಗ್ಗದಿಂದ ಸಾಗರ ಕಡೆ ಚಲಿಸುತ್ತಿದ್ದ ಎಲ್ಲೋ ಬೋರ್ಡ್ ನ ಎರಟಿಗಾ ಕಾರು ಖಾಸಗಿ ಬಸ್ ಗೆ ಡಿಕ್ಕಿ ಹೊಡೆದಿದೆ. ಬೆಳ್ಳಿಗೆ 7-15 ರ ಸಮಯಕ್ಕೆ ಈ ಡಿಕ್ಕಿ ಉಂಟಾಗಿದೆ. ಕಾರಿನಲ್ಲಿ ಇಬ್ಬರು ಪ್ರಯಾಣಿಕರಿದ್ದು ಇಬ್ವರೂ ಸಾವನ್ನಪ್ಪಿದ್ದಾರೆ. ಇವರ ಗುರುತು ಪತ್ತೆಯಾಗಬೇಕಿದೆ.
ಸ್ಥಳೀಯರ ಮಾಹಿತಿ ಪ್ರಕಾರ ನಿದ್ದೆ ಮಂಪ್ರಿನಲ್ಲಿದ್ದ ಕಾರುಚಾಲಕನಿಂದ ಬಲಬದಿಯ ಸೈಡ್ ನಲ್ಲಿದ್ದ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ. ಹೊಡೆ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಸಾವುಕಂಡಿದ್ದಾರೆ. ಇವರು ದೊಡ್ಡಬಳ್ಳಾ ಪುರದವರು ಇರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಆನಂದಪುರ ಪೊಲೀಸರು ಧಾವಿಸಿದ್ದಾರೆ. ಮುಂದಿನ ಕ್ರಮ ಜರುಗಿಸಲಾಗಿದೆ.
Post a Comment