ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿ ಹುಲಿ-ಸಿಂಹಧಾಮದಲ್ಲಿ ಶಿಕ್ಷಣಾಧಿಕಾರಿ ಮತ್ತು ಪಶುಸಹಾಯಕ ಹುದ್ದೆಗಳಿಗಾಗಿ ಆನ್ ಲೈನ್ ಮೂಲಕ ಅರ್ಜಿಕರೆಯಲಾಗಿದ್ದು, 6 ತಿಂಗಳಿಗೆ ಮಾತ್ರ ಈ ಹುದ್ದೆಯಿರಲಿದ್ದು ಕಾರ್ಯಕ್ಷಮತೆಯ ಮೇರೆಗೆ ಅವರ ಹುದ್ದೆಯನ್ನ ಮುಂದುವರೆಸಲಾಗುವುದು.
ಈ ಹುದ್ದೆಯನ್ನ ಹೊರಗುತ್ತಿಗೆ ಆಧಾರದಲ್ಲಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನೇಮಿಸಿಕೊಳ್ಳಲಾಗುವುದು. ಜ.1 ರಿಂದ ಅರ್ಜಿ ಸಲ್ಲಿಸಲು ದಿನಾಂಕ ಪ್ರಾರಂಭವಾಗಲಿದ್ದು, ಹುದ್ದೆಗೆ ಸಂಬಂಧಿಸಿದ ಸ್ಪಷ್ಟೀಕರಣಕ್ಕೆ ಕೇಳುವ ದಿನಾಂಕ ಜ.15 ರಂದು ನಿಗದಿ ಪಡಿಸಲಾಗಿದೆ.
ಅರ್ಜಿ ಸಲ್ಲಿಸಲು ಜ.20 ಕೊನೆಯ ದಿನಾಖಕವಾಗಿದೆ. ಶಿಜ್ಷಣಾಧಿಕಾರಿ ಮತ್ತು ಪಶುವೈದ್ಯ ಸಹಾಯಕ ಹುದ್ದೆ ತಲಾ ಒಂದೊಂದು ಹುದ್ದೆಗಳಿದ್ದು, ಶಿಕ್ಷಣಾಧಿಕಾರಿ ಹುದ್ದೆಗೆ ವನ್ಯಜೀವಿ/ಜೀವಶಾಸ್ತ್ರ, ಪ್ರಾಣಿಶಾಸ್ತ್ರ, ಪರಿಸರ ವಿಜ್ಞಾನ, ಅರಣ್ಯ ಶಾಸ್ತ್ರ, ಮನೋವಿಜ್ಞಾನ ಇವುಗಳಲ್ಲಿ ಒಂದು ವಿಷಯದೊಂದುಗೆ ಕನಿಷ್ಠ ಪದವಿ ಹೊಂದಿರಬೇಕು. ಈ ಹುದ್ದೆಗೆ ಇಎಸ್ಐ ಮತ್ತು ಪಿಎಫ್ ಸೇರಿ 22,450 ರೂ. ಮಾಸಿಕ ಸಂಬಳ ನಿಗದಿ ಪಡಿಸಲಾಗಿದೆ.
ಪಶುವೈದ್ಯ ಸಹಾಯಕ ಹುದ್ದೆಗೆ ಕನಿಷ್ಠ 12 ನೇ/II ಪಿಯು/ಡಿಪ್ಲೋಮಾ/ತತ್ಸಮಾನ ಹಾಗೂ ಪಶುಸಂಗೋಪನೆ ಅಥವಾ ಪ್ರಾಣಿ ಶಾಸ್ತ್ರ, ಅಥವಾ ಜೀವ ರಸಾಯನಶಾಸ್ತ್ರ ಅಥವಾ ಪ್ರಾಣಿ ಶಾಸ್ತ್ರ ಮತ್ತು ಸೂಕ್ಷ್ಮ ಜೀವವಿಜ್ಞಾನದಲ್ಲಿ ಪ್ರಮಾಣ ಪತ್ರ ಹೊಂದಿರಬೇಕಿದೆ. ಇವರಿಗೆ ಇಎಸ್ಐ ಪಿಎಸಫ್ ಸೇರಿ 17,287 ರೂ. ಮಾಸಿಕ ಸಂಬಳವಿರಲಿದೆ.
ಲಿಖಿತ ಪರೀಕ್ಷೆ ಹಾಗೂ ಅಗತ್ಯ ಸೂಚನೆಗಳನ್ನ ಪಡೆಯಲು www.shivamoggazoo.com ಮೃಗಾಲಯದ ವೆಬ್ ನ್ನ ಜ.26 ರಂದು ಮಧ್ಯಹ್ನ 2 ಗಂಟೆ ನಂತರ ಪ್ರಕಟಿಸಲಾಗುವುದು
Post a Comment