ಭದ್ರಾವತಿಯಲ್ಲಿ ಮತ್ತೆ ಜೂಜಾಟದ ವಿಷಯ ಮುನ್ನೆಲೆಗೆ ಬಂದಿದೆ. ಜೂಜಾಟದ ವಿಷಯವನ್ನ ಪೊಲೀಸರಿಗೆ ತಿಳಿಸಿದ್ದಕ್ಕೆ ಆಯುಧಗಳನ್ನ ಹಿಡಿದು ಹಲ್ಲೆ ನಡೆಸಲು ಯತ್ನಿಸಿದ ಘಟನೆ ಈಗ ದೂರು ಪ್ರತಿ ದೂರು ದಾಖಲಿಗೆ ಕಾರಣವಾಗಿದೆ.
ಜೂಜಾಟ ವಿಷಯದಲ್ಲಿ ಭದ್ರಾವತಿಯಲ್ಲಿ ಆತ್ಮಹತ್ಯೆಗಳು ನಡೆದಿದೆ. ಪ್ರತಿಪಕ್ಷಗಳು ಹೋರಾಟ ನಡೆಸಿವೆ. ಆದರೂ ನಿಯಂತ್ರಣಗೊಳ್ಳುತ್ತಿಲ್ಲ. ಈಗ ಪೊಲೀಸರಿಗೆ ಹೇಳಿದ್ದಕ್ಕೆ ಯುವಕನನ್ನ ಕೊಲೆ ಮಾಡಲು ಆಯುಧ ಹಿಡಿದು ಗ್ಯಾಂಗ್ ವೊಂದು ಓಡಾಡಿರುವುದು ಭರ್ಜರಿ ಸುದ್ದಿಗೆಕಾರಣವಾಗಿದೆ.
ಜಿಮ್ ಒಳಗೆ ನುಗ್ಗಿದ ಮುದ್ದೆ ಗ್ಯಾಂಗ್ ವಿಕೆಟ್ ಮತ್ತು ಲಾಂಗು ಹಿಡಿದು ಓಡಾಡಿದ ಘಟನೆ ಸಿಸಿ ಟಿವಿ ಫೂಟೇಜ್ ನಲ್ಲಿ ಸೆರೆಯಾಗಿದ್ದು, ಘಟನೆ ಸಂಬಂಧ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಪರ ಮತ್ತು ವಿರೋಧ ಪ್ರಕರಣಗಳು ದಾಖಲಾಗಿದೆ. ಎರಡೂ ಪ್ರಕರಣಗಳು 307 ಅಡಿ ದೂರು ದಾಖಲಾಗಿದೆ.
ಬೆಳ್ಳಂಬೆಳಗ್ಗೆ ಲಾಂಗು ಮತ್ತು ವಿಕೆಟ್ ಹಿಡಿದು ಜಿಮ್ ಗೆ ನುಗ್ಗಿದ 6 ಕ್ಕೂ ಹೆಚ್ಚು ಯುವಕರ ಗುಂಪು ಕೂಗಾಟ ನಡೆಸಿದೆ. ಯುವಕನೊಬ್ಬನನ್ನು ಮರ್ಡರ್ ಮಾಡಲು ಜಿಮ್ ಗೆ ನುಗ್ಗಿರುವುದು ತಿಳಿದು ಬಂದಿದೆ.
ಭದ್ರಾವತಿಯ ಬಿಎಚ್ ರಸ್ತೆಯ ಸ್ಮಾರ್ಟ್ ಫಿಟ್ನೆಸ್ ಜಿಮ್ ನಲ್ಲಿ ನಡೆದ ಘಟನೆ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಳ್ಳಂಬೆಳಗ್ಗೆ 9 ರ ಸುಮಾರಿಗೆ ಜೋಯೆಲ್ ಥಾಮ್ಸನ್ ಎಂಬ ಯುವಕನ ಮೇಲೆ ಹಲ್ಲೆ ಮಾಡಲು ಗ್ಯಾಂಗ್ ಆಯುಧಗಳನ್ನ ಹಿಡಿದು ಬಂದಿತ್ತು.
ಜಿಮ್ ಮುಗಿಸಿ ಮೆಟ್ಟಿಲು ಇಳಿಯುವಾಗ ಜೋಯಲ್ ಥಾಮ್ಸನ್ ಮೇಲೆ ಅಟ್ಯಾಕ್ ಗೆ ವಿಶ್ವ ಅಲಿಯಾಸ್ ಮುದ್ದೆ , ಕೋಟೇಶ ಅಲಿಯಾಸ್ ಕೋಟಿ, ನವೀನ ಅಲಿಯಾಸ್ ಡಿಂಗ ಸೇರಿದಂತೆ ಆರು ಜನರ ಗ್ಯಾಂಗ್ ನಿಂದ ಅಟ್ಯಾಕ್ ನಡೆದಿದೆ. ಇಸ್ಪೀಟ್ ನ ವಿಷಯವನ್ನ ಜ್ಯುಯೆಲ್ ಪೊಲೀಸ್ ಗೆ ತಿಳಿಸಿದ್ದ ಎಂದು ಆರೋಪಿಸಿ ದಾಳಿಯ ಯತ್ನ ನಡೆದಿರುವುದು ತಿಳಿದು ಬಂದಿದೆ.
ಜೋಯೆಲ್ ಬಾತ್ ರೂಮ್ ಗೆ ಹೋಗಿ ಬಜಾವ್ ಆಗಿರುವ ಕುರಿತು ತಮ್ಮ ದೂರನಲ್ಲಿ ದಾಖಲಿಸಿದ್ದಾರೆ. ಅದೇ ರೀತಿ ಮುದ್ದೆ ಗ್ಯಾಂಗ್ ಸಹ ಜ್ಯೂಯೆಲ್ ಥಾಮಸನ್ ಜಟ್ ಫಟ್ ನಗರದಲ್ಲಿ ಮಾರಣಾಂತಿಕ ಹಲ್ಲೆ ನಡೆಸಲು ಯತ್ನಿಸಿದ್ದರು ಎಂದು ದೂರು ದಾಖಲಾಗಿದೆ.
Post a Comment