ಚಾನೆಲ್ ನಲ್ಲಿ ಈಜಲು ತೆರಳಿದ್ದ ಬಾಲಕ ಸಾವು


ಶಿವಮೊಗ್ಗ ಕಲ್ಲೂರು-ಮಂಡ್ಲಿ ಬಳಿಯ ಬಂಡೆಕಲ್ಲು ತುಂಗ ಚಾನೆಲ್ ನಲ್ಲಿ ಬಾಲಕನೋರ್ವನ ಶವವೊಂದು ಪತ್ತೆಯಾಗಿದೆ. ಈಜಲು ಹೋಗಿದ್ದ ಬಾಲಕ ಇಂದು ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ. 


ಶಿವಮೊಗ್ಗದ ಹಳೆ ಮಂಡ್ಲಿ ನಿವಾಸಿ ಮೋಹಿತ್ (15)ಎಂಬ ಬಾಲಕ ಕ್ರಿಸ್ ಮಸ್ ಪ್ರಯುಕ್ತ ಸ್ನೇಹಿತರೊಂದಿಗೆ ನಿನ್ಬೆ ಮಧ್ಯಾಹ್ನ 3 ಗಂಟೆ ಹೊತ್ತಿಗೆ ಕಲ್ಲೂರು ಮಂಡ್ಲಿ ಜೊತೆ ಚಾನೆಲ್ ಬಳಿ ಹೋಗಿದ್ದಾನೆ. ನೀರು ನೋಡಿ ಈಜಲು ಹೋದ ಬಾಲಕ ನೀರುಪಾಲಾಗಿದ್ದ. 


ಈತನ ಜೊತೆ ಹೋಗಿದ್ದ ಸ್ನೇಹಿತರು ಭಯದಿಂದ ಯಾರಿಗೂ ಹೇಳದೆ ಮನೆಗೆ ಹೋಗಿದ್ದರು. ಸಂಜೆ ಹೊತ್ತು ಎಷ್ಟು ಹೊತ್ತಾದರೂ ಬಾರದ ಮಗನಿಗೆ ಪೋಷಕರ ಹುಡುಗಾಟ ಆರಂಭಿಸಿದ್ದಾರೆ. ಮಗನ ಸ್ನೇಹಿತರನ್ನ ವಿಚಾರಿಸಿದಾಗ ಚಾನೆಲ್ ಗೆ ಇಳಿದಿರುವ ಸಂಗತಿಯನ್ನ ಬಾಯಿಬಿಟ್ಟಿದ್ದಾರೆ. 


ಅಗ್ನಿಶಾಮಕದಳ ದವರಿಗೆ ಕರೆ ಮಾಡಿದಾಗ ಸ್ಥಳಕ್ಕೆ ದಾವಿಸಿದ ಅಗ್ನಿಶಾಮಕದಳದ ಸಿಬ್ಬಂದಿಗೆ ಮೋಹಿತ್ ಪತ್ತೆಯಾಗಿರಲಿಲ್ಲಿ. ಇಂದು ಬೆಳಿಗ್ಗೆ ಆತನ ಮೃತ ದೇಹ ಪತ್ತೆಯಾಗಿದೆ. ಮೋಹಿತ್ ಶಿವಮೊಗ್ಗದ ಎನ್ ಇ ಎಸ್ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು.


ಇವರ ತಂದೆ ದಿವಾಕರ್ ಕೆಕೆ ಎಂದು ತಿಳಿದು ಬಂದಿದ್ದು, ಇವರು ಶಿವಮೊಗ್ಗದ ನ್ಯಾಯಾಲಯದಲ್ಲಿ ವಕೀಲರಾಗಿದ್ದಾರೆ. ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

 

Post a Comment

Previous Post Next Post