ಶಿವಮೊಗ್ಗದಿಂದ ಬೆಂಗಳೂರಿಗೆ ತಲುಪುವ ರೈಲು ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದ್ದು, ನಾಳೆಯಿಂದ ಅಂದರೆ ಹೊಸವರ್ಷದಿಂದ ಇದು ಜಾರಿಯಾಗಲಿದೆ.
12692 ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ಬೀರೂರನ್ನ ಇದುವರೆಗೂ ಸಂಜೆ 6-23 ಕ್ಕೆ ತಲುಪಿ 6-25 ಕ್ಕೆ ನಿಲ್ದಾಣವನ್ನ ಬಿಡುತ್ತಿತ್ತು. ಜ.4 ರಿಂದ ಈ ರೈಲು ಶಿವಮೊಗ್ಗವನ್ನ ಸಂಜೆ 5-15ಕ್ಕೆ ಬಿಡಲಿದ್ದು ಬೀರೂರು ರನ್ನ 6-18 ಕ್ಕೆ ತಲುಪಲಿದ್ದು 6-20 ಕ್ಕೆ ನಿಲ್ದಾಣವನ್ನ ಬಿಡಲಿದೆ.
ಪ್ರತಿದಿನ ಶಿವಮೊಗ್ಗದಿಂದ ತಾಳಗುಪ್ಪಕ್ಕೆ ಸಂಚರಿಸುತ್ತಿದ್ದ 07350 ಕ್ರಮ ಸಂಖ್ಯೆಯ ಪ್ಯಾಸೆಂಜರ್ ರೈಲು, ಇಷ್ಟುದಿನ ಮದ್ಯಾಹ್ನ 2.35 ಕ್ಕೆ ಶಿವಮೊಗ್ಗ ನಿಲ್ದಾಣವನ್ನ ಬಿಡುತ್ತಿತ್ತು. ನಾಳೆಯಿಂದ ಮದ್ಯಾಹ್ನ 2-25 ಕ್ಕೆ ಬಿಡಲಿದ್ದು, 4-55 ಕ್ಕೆ ತಲುಪುತ್ತಿದ್ದ ತಾಳುಗುಪ್ಪ ನಿಲ್ದಾಣವನ್ನ 4-50 ಕ್ಕೆ ತಲುಪಲಿದೆ.
ಈ ಮಾರ್ಗಗಳಲ್ಲಿ ಬರುವ ಕೊನಗವಳ್ಳಿ ರೈಲು ನಿಲ್ದಾಣವನ್ನ ಮಧ್ಯಾಹ್ನ 2.49 ಕ್ಕೆ ತಲುಪುತ್ತಿದ್ದು, 2-50 ಕ್ಕೆ ಬಿಡುತ್ತಿತ್ತು. ಈಗ ಅದು 2.39 ಕ್ಕೆ ತಲುಪಿ 2-40 ಕ್ಕೆ ನಿಲ್ದಾಣದಿಂದ ಹೊರಡಲಿದೆ. ಹಾರನಹಳ್ಳಿ ನಿಲ್ದಾಣವನ್ನ 2-55 ಕ್ಕೆ ತಲುಪಿ 2-56 ಕ್ಕೆ ಬಿಡುತ್ತಿದ್ದ ಈ ರೈಲು ನಾಖೆಯಿಂದ 2-45 ಕ್ಕೆ ತಲುಪಿ 2-46 ಕ್ಕೆ ನಿಲ್ದಾಣದಿಂದ ಹೊರಡಲಿದೆ.
ಕುಂಸಿ ರೈಲ್ವೆ ನಿಲ್ದಾಣವನ್ನ ಇದುವರೆಗೂ ಮಧ್ಯಾಹ್ನ 3-02 ಕ್ಕೆ ತಲುಪಿ 3-03 ಕ್ಕೆ ಬಿಡುತ್ತಿದ್ದ ಪ್ಯಾಸೆಂಜರ್ ರೈಲು ಮಧ್ಯಾಹ್ನ 2-52 ಕ್ಕೆ ತಲುಪಿ 2-53 ಕ್ಕೆ ನಿಲ್ದಾಣದಿಂದ ಹೊರಡಲಿದೆ. 3-19 ಕ್ಕೆ ಅರಸಾಳು ನಿಲ್ದಾಣಕ್ಕೆ ಬಂದು 3-20 ಕ್ಕೆ ನಿಲ್ದಾಣದಿಂದ ಹೊರಡಲಿದ್ದ ರೈಲು 3-09 ಕ್ಕೆ ತಲುಪಿ 3-19 ಕ್ಕೆ ನಿಲ್ದಾಣ ಬಿಡಲಿದೆ.
ಮಧ್ಯಾಹ್ನ 3-24 ಕ್ಕೆ ಕೆಂಚನಾಳ ಹಾಲ್ಟ್ ತಲುಪಿ 3-25 ಕ್ಕೆ ನಿಲ್ದಾಣದಿಂದ ಹೊರಡುತ್ತಿದ್ದ ಈ ರೈಲು ನಾಳೆಯಿಂದ 3-14 ಕ್ಕೆ ತಲುಪಿ 3-15 ಕ್ಕೆ ನಿಲ್ದಾಣದಿಂದ ಹೊರಡಲಿದೆ. ತಾಳಗುಪ್ಪ ನಿಲ್ದಾಣವನ್ನ ಇದುವರೆಗೆ ನಿಗದಿತವಾಗಿದ್ದ ಸಮಯಕ್ಕಿಂತ 10 ನಿಮಿಷ ಮುಂಚಿತವಾಗಿ ತಲುಪಲಿದೆ.
ಯಶವಂತಪುರದಿಂದ ಶಿವಮೊಗ್ಗ ಕ್ಕೆ ಮಧ್ಯಾಹ್ನ 2-30 ಕ್ಕೆ ಬರುತ್ತಿದ್ದ ರೈಲು 16579 ಎಕ್ಸಪ್ರೆಸ್ ರೈಲು 2-15 ಕ್ಕೆ ತಲುಪಲಿದೆ. 20651 ಯಶವಂತಪುರ-ತಾಳಗುಪ್ಪ ಇಂಟರ್ ಸಿಟಿ ರೈಲು ಶಿವಮೊಗ್ಗವನ್ನ 7-40 ಕ್ಕೆ ತಲುಪಿ ತಾಳಗುಪ್ಪಕ್ಕೆ 7-45 ಕ್ಕೆ ಬಿಡುತ್ತಿತ್ತು. ತಾಳಗುಪ್ಪವನ್ನ ರಾತ್ರಿ 10 ಗಂಟೆಗೆ ತಲುಪುತಿತ್ತು. ನಾಳೆಯಿಂದ ತಾಳಗುಪ್ಪವನ್ನ 9-45 ಕ್ಕೆ ತಲುಪಲಿದೆ.
ಪ್ರತಿದಿನ ರಾತ್ರಿ 9 ಗಂಟೆಗೆ ತಾಳಗುಪ್ಪವನ್ನ ಬಿಡುತ್ತಿದ್ದ 16228 ಕ್ರಮಸಂಖ್ಯೆಯ ತಾಳಗುಪ್ಪ-ಮೈಸೂರು ಎಕ್ಸ್ ಪ್ರೆಸ್ ರೈಲು ರಾತ್ರಿ 8-55 ಕ್ಕೆ ಹೊರಡಲಿದೆ. ನಿಗದಿತ ಸಮಯಕ್ಕಿಂತ 5 ನಿಮಿಷ ಮುಂಚಿತವಾಗಿ ಬಿಡಲಿದೆ.
Post a Comment