ಸಚಿವೆ ಹೆಬ್ಬಾಳ್ಕರ್ ಅವರ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ ಸಿಟಿ ರವಿಗೆ ಪ್ರಚಾರದ ಗೀಳಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಟಿ ರವಿ ಅಶ್ಲೀಲ ಪದ ಬಳಕೆ ಮಾಡಿದ್ದಕ್ಕೆ ಸಾಕ್ಷಿ ಇದೆ. ಅವರ ಈ ಹಿಂದಿನ ನಿತ್ಯ ಸುಮಂಗಲಿ ಎಂಬ ಪದ ಬಳಕೆಯೇ ಸಾಕ್ಷಿ, ಪ್ರಕರಣ ಉದ್ಭವಿಸಿದಾಗ ರವಿ ಕ್ಷಮೆ ಕೇಳಿದ್ದರೆ ಸಾಕಿತ್ತು. ಅದನ್ನ ಬಿಟ್ಟು ಮೊಂಡವಾದಕ್ಕೆ ನಿಂತ ಪರಿಣಾಮ ಅನಿರೀಕ್ಷಿತ ಮತ್ತು ಅನಪೇಕ್ಷಿತ ಘಟನಾವಳಿಗಳು ನಡೆಯಿತು ಎಂದರು.
ಸಿಟಿ ರವಿ ಪ್ರಕರಣ ನಡೆದಾಗ ಪರಿಷತ್ ನಲ್ಲಿ ಕುಳಿತಿದ್ದ ಬಿಜೆಪಿ ನಾಯಕರು ಮಹಾಭಾರತದ ದೃತರಾಷ್ಟ್ರ, ಭೀಷ್ಮ ರಂತೆ ಕಂಗೊಳಿಸುತ್ತಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆಯಾದ ಸಿಟಿ ರವಿಯನ್ನ ಪುಷ್ಪಾರ್ಚನೆ ಮಾಡಿ ಸ್ವಾಗತಿಸಲಾಯಿತು.
ಬಿಜೆಪಿ ನಾಯಕರ ಮತ್ತು ಸಿಟಿ ರವಿ ನಡವಳಿಕೆಯನ್ನ ಕಾಂಗ್ರೆಸ್ ಖಂಡಿಸುತ್ತದೆ. ಸಮಾಜಕ್ಕೆ ಅಪಮಾನವಾಗಿದೆ. ರೋಗಗ್ರಸ್ತ ವ್ಯಕ್ತಿಯನ್ನ ಗೌರವಿಸಿದಂತೆ ಅಂಬ್ಯೂಲೆನ್ಸ್ ಸೈರನ್ ಮೂಲಕ ಬಿಜೆಪಿ ರವಿಯನ್ನ ಸ್ವಾಗತಿಸಿದೆ. ಈಗಲೂ ರವಿ ನನ್ನ ಸ್ನೇಹಿತ, ಪ್ರತಿಷ್ಠೆಯನ್ನ ಬದಿಗಿಟ್ಟು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರ ಕ್ಷನೆಯಾಚಿಸಲಿ ಎಂದು ಸಲಹೆ ನೀಡಿದರು.
ಇದು ಸತ್ಯಮೇವ ಜಯತೆ ಅಲ್ಲ, ತಾಂತ್ರಿಕ ದೋಷದಿಂದ ರವಿ ಬಿಡುಗಡೆ ಆಗಿದೆ. ಇದು ವಿಜಯೋತ್ಸವ ಆಚರಿಸುವ ಕಾಲವಲ್ಲ ಕ್ಷಮೆ ಕೇಳುವ ಸಮಯವೆಂದರು.
ಎನ್ ಕೌಂಟರ್ ಮಾಡಲಾಗುತ್ತದೆ ಎಂಬ ಆತಂಕವನ್ನ ರವಿ ಹೇಳಿಕೊಂಡಿದ್ದಾರೆ. ಮೀಡಿಯಾದವರಿಂದ ಕಾಪಾಡಿಕೊಂಡಿರುವುದಾಗಿ ರವಿ ಹೇಳಿದ್ದಾರೆ. ಇದೊಂದು ಕಾಯಿಲೆ, ಇದು ಆತ್ಮರತಿ ಎಂದು ಕರೆಯುತ್ತಾರೆ ಎಂದು ದೂರಿದರು. ಸಚಿವೆ ಹೆಬ್ಬಾಳ್ಕರ್ ವಿರುದ್ಧ ಬಳಕೆ ಪದದ ವಿಡಿಯೋ ನನ್ನ ಬಳಿ ಇದೆ. ಎಫ್ ಎಸ್ ಎಲ್ ವರದಿ ಬಂದ ನಂತರ ಮಾತನಾಡುವೆ ಎಂದರು.
ಲಜ್ಜಗೇಡಿ ವರ್ತನೆಯಿದೆ. ರವಿ ಕ್ಷಮೆ ಕೇಳಬೇಕು. ಸರಸಂಚಾಲಕರು ವಿವಾದಾತ್ಮಕ ಮೂಲಕ ನಾಯಕರಾಗುವುದು ಬೇಡ ಎಂದಿದ್ದನ್ನ ಸ್ವಾಗತಿಸುತ್ತೇನೆ ಎಂದರು.
Post a Comment