ಚೆಕ್ ಬೌನ್ಸ್ ಪ್ರಕರಣ ಆದ ಮೇಲೆ ವಿಪಕ್ಷಗಳ ಪ್ರತಿಕ್ರಿಯೆಗೆ ಉತ್ತರ ನೀಡುವುದಾಗಿ ಆರಂಭದಲ್ಲೇ ಹೇಳಿದ ಮಧು ಬಂಗಾರಪ್ಪ ಖಾಸಗಿ ವಿಚಾರವನ್ನ ಮಾಹಿತಿ ಪಡೆದು ಸುದ್ದಿಮಾಡಿ ಎಂದು ಮಾಧ್ಯಮಗಳಿಗೆ ಹೇಳುವ ಮೂಲಕ ಸುದ್ದಿಗೋಷ್ಠಿಯನ್ನ ಆರಂಭಿಸಿದರು.
ತಂದೆ ಬಂಗಾರಪ್ಪನವರ ಕೊನೆಯ ಚುನಾವಣೆಯ ವೇಳೆ ನಡೆದ ಘಟನೆ ಅದು. 18 ವರ್ಷ ಮೂರು ಕೇಸು ನಡೆದಿದೆ. ಖಾಸಗಿ ವಿಚಾರ ಕೈ ಹಾಕುವ ಮುಂಚೆ ವಿಚಾರ ಮಾಡಬೇಕು. ಬಿಜೆಪಿಯವರು ಈ ವಿಚಾರಕ್ಕೆ ಕೈಹಾಕಿ ಬೇರೆ ರೀತಿ ಟ್ವೀಟ್ ಮಾಡಿದ್ದಾರೆ ಎಂದರು.
ಭ್ರಷ್ಠಾಚಾರದಲ್ಲಿ ಅಪರಾಧಿಯಾದವರು ಪ್ರತಿಕ್ರಿಯೆ ನೀಡಿದವರಲ್ಲಿ ಬಿಜೆಪಿ ಆರ್ ಅಶೋಕ್ ವಿಜೇಂದ್ರ, ನಳೀನ್ ಕುಮಾರ್, ರವಿಕುಮಾರ್ ಇದ್ದಾರೆ. ಭ್ರಷ್ಠಾಚಾರ ಎದುರಿಸುತ್ತಿರುವ ನಾಯಕರು ಇವರೆಲ್ಲ ಆಗಿದ್ದಾರೆ. 12 ಬಾರಿ ಚುನಾವಣೆ ಎದುರಿಸಿದ್ದೇನೆ. ಎರಡು ಬಾರಿ ಅಷ್ಟೆ ಗೆದ್ದಿರುವೆ. ಕಡಿಮೆ ಗೆದ್ದರೂ ಗೌರವ ಉಳಿಸುಕೊಂಡಿರುವೆ. ರವಿಕುಮಾರ್ ರಾಜೀನಾಮೆ ಕೇಳ್ತಾರೆ. ಅವರು ಗ್ರಾಪಂ ಚುನಾವಣೆ ಗೆಲ್ಲಲು ಅವರಲ್ಲಿ ಶಕ್ತಿ ಇಲ್ಲ. ಅಂಥಹವರು ನನ್ನ ವಿರುದ್ಧ ಮಾತನಾಡುತ್ತಾರೆ ಎಂದರು.
ಡೆಪ್ಯೂಟಿ ಸಿಎಂ ಆಗಿದ್ದ ಆರ್. ಅಶೋಕ್ ಅವರು ರಾಜೀನಾಮೆ ಕೇಳಿದ್ದಾರೆ. ಕೊರೋನ ಸಮಯದಲ್ಲಿ ಸಾವುಕಂಡವರ ಹೆಸರಿನಲ್ಲಿ ಭ್ರಷ್ಠಾಚಾರ ನಡೆಸಿದ್ದಾರೆ. ಗೌರವ ಮಾನಮರ್ಯಾದೆ ಇದ್ದರೆ ನೀವು ನಿಮ್ಮ ವಿಪಕ್ಷ ಸ್ಥಾನಕ್ಕೆ ರಾಜೀನಾಮೆನೀಡಿ ಎಂದು ಆಗ್ರಹಿಸಿದರು.
ನಳೀನ್ ಕುಮಾರ್ ಕಟೀಲ್ 2023/ವಿಧಾನ ಸಭೆ ಚುನಾವಣೆ ಸೋತವರು. ಕರಾವಳಿ ಭಾಗದಲ್ಲಿ ಸಾವಿನರಾಜಕಾರಣ ಮಾಡಿಕೊಂಡು ಬಂದವರು ಕಟೀಲರು. ಪ್ರವೀಣ್ ನೆಟ್ಟಾರ್‌ಅವರ ಸಾವಿನ ಸಮಯದಲ್ಲಿ ಮೃತದೇಹ ನೋಡಲು ಹೋದಾಗ ಸಂಘಪರಿವಾರ ಗೋಬ್ಯಾಕ್ ಎಂದಿದ್ದಾರೆ. ನೀವು ಚುನಾವಣೆ ಎದುರಿಸಬೇಕು. ನಿಮಗೆ ನಾನೇ ಎದುರಿಸುತ್ತೇನೆ ಎಂದರು.
ಕಟೀಲರು ಅಭಿವೃದ್ಧಿ ಮಾಡಿಲ್ಲ. ಸಾವಿನ ಮೇಲೆ ರಾಜಕಾರಣ ನಡೆಸಿದವರು. ಹಾಗಾಗಿ ಎಷ್ಟು ಜನರ ಸಾವಾಗಿದೆ ಎಂದುಕೇಳಬೇಕಿದೆ. ವ್ಯವಹಾರಿಕವಾಗಿ ಬಂದು ವ್ಯವಹಾರಿಕವಾಗಿ ಸೋತಿದ್ದಾರೆ ಎಂದರು.
ಬಿಎಸ್ ವೈ ಅವರ ಪರವಾಗಿ ಚುನಾವಣೆ ನಡೆಸಿದ್ದೆ. ಯತ್ನಾಳ್ ಅವರು ಯಾರ ವಿರುದ್ಧ ಆರೋಪ ಮಾಡುತ್ತಿದ್ದಾರೆ? ವಿಜೇಂದ್ರ ಅವರೆ ನನ್ನ ಮೇಲೆ ಸಹೋದರ ಮತ್ತು ತಂದೆಯಮೇಲೆ ಆರೋಪ ಮಾಡುತ್ತಿದ್ದಾರೆ. ಉತ್ತರ ಕೊಡಿ ರಾಜೀನಾಮೆ ಕೇಳಿದ್ದೀರಿ. ನಿಮಗೆ ಯಾವ ಯೋಗ್ಯತೆ ಇದೆ. ಸತೀಶ್ ಜಾರಕಿಹೊಳೆ, ಪ್ರಿಯಾಂಕ್ ಖರ್ಗೆ ಪರವಾಗಿ ಮಾತನಾಡಿದ್ದಾರೆ. ನೋಡಿ ಕಲಿಯಿರಿ ಎಂದರು.
ನನ್ನ ಮೇಲೆ 6 ಕೋಟಿ ಕಟ್ಟಲು ಆರೋಪವಿದೆ ಆದರೆ ಈ ರೀತಿ ಟ್ವೀಟ್ ಆದ ಮೇಲೆ 100 ಕೋಟಿ ಸಂಗ್ರಹ ಮಾಡಲು ಅವಕಾಶ ಮಾಡಿಕೊಟ್ಟೀದ್ದೀರಿ. ವಿಜೇಂದ್ರ ಅವರಿಗೆ ಧಮ್ಮು ತಾಕತ್ತು ಇದ್ದರೆ ಯತ್ನಾಳ್ ಅವರ ಪ್ರಶ್ನೆಗೆ ಉತ್ತರಕೊಡಿ ಎಂದರು.
ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಬಗ್ಗೆ ಮಾತನಾಡಿದ್ದೀರಿ. ನಿಮ್ಮಕಾರ್ಯಕರ್ತರು ಎಷ್ಟು ಜನ ಗೃಹಜ್ಯೋತಿ, ಗೃಹಲಕ್ಷ್ಮಿ ಮತ್ತು ಶಕ್ತಿಯೋಜನೆ ಬಳಸಿಕೊಂಡಿಲ್ಲ? ನಿಮಗೆ ಧೈರ್ಯ ಇದ್ದರೆ ನಿಮ್ಮಕಾರ್ಯಕರ್ತರಿಗೆ ಬಳಸಿಕೊಳ್ಳ ಬೇಡಿ ಎಂದು ಕರೆ ನೀಡಿ. ರಾಜ್ಯದ ಜನತೆಯಲ್ಲಿ ಈ ಕಾರ್ಯಕರ್ತರು ಇದ್ದಾರೆ. ಆದರೆ ಹೊಸಲು ಮಾತನಾಡಿದ್ದರಿಂದ ಈ ಸವಾಲು ಹಾಕಿದ್ದೀನಿ ಎಂದರು.
ರಸ್ತೆಅಪಘಾತದಲ್ಲೂ ತಪ್ಪಾಗಿದೆ. ಬಿಜೆಪಿಯವರು ಶಾಲೆ ಮಕ್ಕಳ ವಿಚಾರದಲ್ಲಿ ಅಕ್ಷರ ಕಲಿಯುವ ಕೈಯಲ್ಲಿ ಪೊರಕೆ ಎಂದು ಟ್ವೀಟ್ ಮಾಡಿದ್ದಾರೆ. ಆದರೆ ಮಕ್ಕಳ ಕೈಯಲ್ಲಿ ಪೊರಕೆ ಕೊಟ್ಅವರು ಬಿಜೆಪಿ ಅವರು ನಾವಲ್ಲ. ಶಾಲೆ ಬಟ್ಟೆಯಲ್ಲಿ ಭ್ರಷ್ಠಾಚಾರ ನಡೆದಿದೆ ಎಂದು ಹೇಳಿದ ರವಿಕುಮಾರ್ ಹೇಳಿದ್ದಾರೆ. ಅದು ಅವರಿಗೆ ಅನ್ವಯಿಸುತ್ತೆ. ಭ್ರಷ್ಠಾಚಾರಿಯಾಗಿದ್ದರೆ ಸಾಲ ಮಾಡುತ್ತಿರಲಿಲ್ಲ ಎಂದು ದೂರಿದರು.
ಶುಗರ್ ಫ್ಯಾಕ್ಟರಿಯ ವಿಚಾರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರು ಮತ್ತು ಸಂಸದರು ನನ್ನ ಕುಮ್ಮಕ್ಕಿನಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಹೇಳಿದ್ದಾರೆ. ನಾನು ಅಂತಹದ್ದೇನು ಮಾಡದಿದ್ದರು ರೈತರ ಪರವಾಗಿದ್ದರೂ ಆರೋಪ ಮಾಡಿದ್ದೇಕೆ ಎಂದು ದೂರಿದರು. ಬಿಜೆಪಿ ಅಧಿಕಾರದಲ್ಲಿದ್ದ ಅಧಿಕಾರಿಗಳ ಪರ ಇದೇ ಬಿಜೆಪಿ ನಾಯಕರು ವರ್ಗಾಯಿಸ ಬೇಡಿ ಎಂಬ ಸಾಕ್ಷಿ ಇದೆ. ಸರ್ಕಾರ ಬದಲಾವಣೆ ಮಾಡಿದಾಗ ಅಧಿಕಾರಿಗಳ ವರ್ಗಾವಣೆ ಮಾಮೂಲಿ ಎಂದರು.
ಅರಣ್ಯ ಒಕ್ಕಲೆಬ್ಬಿಸಿದ್ದು ಎಷ್ಟು? ಅಧಿಕಾರಗಳಿಗೂ ನಿದೆಶಿಸಲಾಗಿದೆ ಯಾವ ರೈತರನ್ನೂ ಒಕ್ಕಲೆಬ್ಬಿಸದಂತೆ ಸೂಚಿಸಿದೆ. ಮನೆ ಇದ್ದವರು ಆತಂಕ ಪಡೋದು ಬೇಡ ಎಂದು ಭರವಸೆ ನೀಡಿದರು.
ಬರಹಗಾರರಾಗಿದ್ದ ಸಂಸದ ಪ್ರತಾಪ್ ಸಿಂಹ ಮಧು ಬಂಗಾರಪ್ಪನವರ ಪ್ರಕರಣ ಮುಚ್ಚಲು ತಮ್ಮ ಸಹೋದರರ ಪ್ರಕರಣ ಮುನ್ನೆಲೆಗೆ ಬಂದಿದೆ ಎಂದು ಹೇಳಿದ್ದಾರೆ. ಯೋಗ್ಯತೆ ಇಲ್ಲದ ಸಂಸದ ಎಂದು ಬೈದರು. ರಾಮ ಮಂದಿರ ಉದ್ಘಾಟನೆಗೆ ಸಿಎಂ ರನ್ನ ಆಹ್ವಾನಿಸಿಲ್ಲ ಎಂಬಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮಧು ಬಂಗಾರಪ್ಪ ರಾಮ ಎಲ್ಲರಿಗೂ ಸೇರಿದವನು. ಆಹ್ವಾನಿಸ ಬೇಕಿತ್ತು ಎಂದರು.
ಆದರೆ ರಾಮನ ಹೆಸರಿನಲ್ಲಿ ಅವ್ಯವಹಾರ ನಡೆದಿರುವುದು ಕೇಳಿಬಂದಿದೆ. ಇದು ಆಗಬಾರದು. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು. ಸರ್ಕಾರದ ಗ್ಯಾರೆಂಟಿಯನ್ನ ರಾಮಮಂದಿರ ನಿರ್ಮಾಣ ವಿಚಾರ ಓವರ್ ಟೇಕ್ ಮಾಡಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮಧು ಹಳ್ಳಿಗಳಲ್ಲಿ ಈಗಲೂ ಉತ್ತಮ ಪ್ರತಿಕ್ರಿಯೆ ಇದೆ. ಜನರಿಗೆ ಹಣ ಬರ್ತಾ ಇದೆ. ಆದರೆ ಬಿಜೆಪಿ ಪ್ರಜಾಪ್ರಭುತ್ವದ ವಿರೋಧಿಯಾದ ಕೆಲಸಗಳನ್ನ ಮಾಡುವುದು ರಕ್ತಗತವಾಗಿದೆ ಎಂದರು.
ಜಿಲ್ಲಾಧ್ಯಕ್ಷ ಹೆಚ್ ಎಸ್ ಸುಂದರೇಶ್, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಮಾಜಿ ಮೇಯರದ ಮರಿಯಪ್ಪ, ವಿಜಯಕುಮಾರ್, ಮಾಜಿ ಎಂಎಲ್ ಸಿ ಆರ್ ಪ್ರಸನ್ನ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
Post a Comment