ನ್ನೆ ಫ್ರೀಡಂಪಾರ್ಕ್ ನಲ್ಲಿ ನಡೆದ ಯುವನಿಧಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ಸಚಿವ ಮಧು ಬಂಗಾರಪದೊ, ಶರಣಪ್ರಕಾಶ್ ಪಾಟೀಲ್ ಮಾತನಾಡುವಾಗ ಕಾರ್ಯಕ್ರಮದಲ್ಲಿ ಜೀವಂತಿಕೆ ತುಂಬಿತ್ತು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ತಿಳಿಸಿದರು
ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಬಹುದೊಡ್ಡ ವಿದ್ಯಾವಂತರ ಸಮೂಹ ಭಾಗಿಯಾಗಿ ಗ್ಯಾರೆಂಟಿಯನ್ನ ಒಪ್ಪಿಕೊಂಡಿದೆ. ಇದುವರೆಗೂ ವಿವೇಕಾನಂದರ ಜಯಂತಿ ತಾಂತ್ರಿಕ ಕಾರ್ಯಕ್ರಮವಾಗುತ್ತಿತ್ತು. ನಿನ್ನೆ ಅರ್ಥಪೂರ್ಣ ವೆನಿಸಿಕೊಂಡಿತು. ಯುವನಿಧಿ ಕಾರ್ಯಕ್ರಮವನ್ನ ಶಿವಮೊಗ್ಗದಲ್ಲಿ ಜಾರಿಯಾಗಲು ಸಚಿವ ಮಧು ಬಂಗಾರಪ್ಪ ಸ್ರಮವಹಿಸಿದ್ದಾರೆ. ಅತ್ಯಂತ ಯಶಸ್ವಿಯಾದ ಕಾರ್ಯಕ್ರಮವು ವಿರೋಧಿಗಳಿಗೆ ಸಂಕಟವನ್ನ ಮಾಡಿದೆ ಎಂದು ಆರೋಪಿಸಿದರು.
ದೋಷ ಹುಡುಕುವರು ದೋಷ ಹುಡುಕಲಿ, ತಾವು ಮಾಡಲಾಗದ ಕಾರ್ಯಕ್ರಮವನ್ನ ಕಾಂಗ್ರೆಸ್ ಮಾಡಿದೆ. ವಿದ್ಯಾವಂತ ಸಮೂಹವನ್ನ ಕಾಂಗ್ರೆಸ್ ಎಳೆದುಕೊಂಡಿದೆ ಎಂಬ ಕಾರಣಕ್ಕೆ ಆಪಾದನೆಗೆ ಕಾರಣವಾಗಿದೆ. ನಿನ್ನೆ ಐತಿಹಾಸಿಕ ಕಾರ್ಯಕ್ರಮವಾಗಿದೆ. ಕಾರ್ಯಕ್ರಮ ಯಶಸ್ವಿಗೊಳಿಸದ ಶಿವಮೊಗ್ಗದ ಜನತೆಗೆ ಧನ್ಯವಾದಗಳನ್ನ ಆಯನೂರು ತಿಳಿಸಿದರು.
ಫ್ರೀಡಂ ಪಾರ್ಕ್ ನ ಹೆಸರಿಡುವ ವಿಚಾರವನ್ನ ಪ್ರಸ್ತಾಪಿಸಿದ ಆಯನೂರು, ಸಾಮಾಜಿಕ ಶೋಷಣೆ, ಸ್ರ್ರೀ ಸಮಾನತೆ, ಮೌಢ್ಯ ದಾಸ್ಯಗಳ ವಿರುದ್ಧ ಹೋರಾಡಿದ ಅಲ್ಲಮನ ಹೆಸರು ಸಿಎಂ ಘೋಷಿಸಿದ್ದಾರೆ. ಪ್ರಜ್ಞಾವಂತರಿಗೆ ಖುಷಿ ನೀಡಿದೆ. ಬುಡಕಟ್ಟು ಜನಾಂಗಕ್ಕೆ ಸೇರಿದ ಅಲ್ಲಮ ಇವತ್ತಿನ ಪ್ರಜಾಪ್ರಭುತ್ವಕ್ಕೆ ಆದರ್ಶಪ್ರಾಯವಾಗಿದ್ದಾನೆ.
ಆತನ ಹೆಸರನ್ನ ಬಿಎಸ್ ವೈ ಸಿಎಂ ಆಗಿದ್ದಾಗ ತಡೆಹಿಡಿಯುವ ಪ್ರಯತ್ನ ನಡೆದಿತ್ತು. ಅಡ್ಡಿಪಡಿಸಲಾಯಿತು. ನಿನ್ನೆಯೂ ಅಂತಹ ಅಡ್ಡಿ ಎದುರಾಗಿತ್ತು. ಅದನ್ನೂ ಮೀರಿ ನಿನ್ನೆ ಐತಿಹಾಸಿಕ ಕಾರ್ಯನಡೆದಿದೆ.ಇದಕ್ಕೆ ಮಧು ಬಂಗಾರಪ್ಪನವರಿಗೆ ಧನ್ಯವಾದ ತಿಳಿಸಬೇಕಿದೆ. ಹೋಟೆಲ್ ಒಂದರಲ್ಲಿ ಸಚಿವರು ಮತ್ತು ಸ್ಥಳೀಯ ನಾಯಕರ ಎದುರು ನಾನು ಅಲ್ಲಮನ ಹೆಅರು ಪ್ರಸ್ತಾಪಿಸಿದ್ದೆ.
ಅಲ್ಲಿಕುಳಿತ ಸ್ಥಳೀಯ ಮುಖಂಡರು ಅಲ್ಲಮನ ಹೆಸರು ಹೆಸರಿಡಬೇಕೆಂದು ಒಪ್ಪಿಕೊಂಡಿದ್ದರು.ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಸಹ ಒಪ್ಪಿಕೊಂಡರು. ಸಚಿವ ಮಧು ಬಂಗಾರಪ್ಪನವರು ಸಿಎಂ ವೇದಿಕೆ ಮೇಲೆ ಒಳ್ಳೆಯ ಅಭಿಪ್ರಾಯವನ್ನ ತಿಳಿಸಿದರು. ಐತಿಹಾಸಿಕ ನಿರ್ಣಯಕ್ಕೆ ನಿನ್ನೆ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದರು.
ಮುಂದಿನ ಆಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಸಿಎಂಭರವಸೆ ನೀಡಿದ್ದರು. ಸರ್ವಜಾತಿ ಜನಾಂಗಕ್ಕೂ ಅಲ್ಲಮನ ಹೆಸರು ಒಪ್ಪಿಗೆ ಆಗಿದೆ. ಸ್ವಾತಂತ್ರ್ಯ ಹೋರಾಟಗಾರನ ಹೆಸರಿಗೆ ಆಕ್ಷೇಪಣೆ ಇಲ್ಲ.. ಸಾಮಾಜಿಕ ಪಿಡುಗನ್ನ ಮತ್ತು ಪ್ರಜಾಪ್ರಭುತ್ವವನ್ನ ಎತ್ತಿ ಹಿಡಿ ದಾರ್ಶನಿಕ ಅಲ್ಲಮನಾಗಿದ್ದಾನೆ. ಹಾಗಾಗಿ ಪ್ರಸ್ತಾಪಿಸಿರುವುದಾಗಿ ಹೇಳಿದರು.
ಸಿದ್ದೇಶ್ವರ ಸ್ವಾಮಿಗಳು ನಮ್ಮಮನೆಗೆ ಉಳಿದುಕೊಂಡಿದ್ದರು.ಸುತ್ತೂರು ಸ್ವಾಮಿಗಳು ಈ ಅಲ್ಲಮನ ಹೆಸರನ್ನ ಇಟ್ಟಿದ್ದರು. ಆದರೆ ಪ್ರಭಾವಿ ಸ್ವಾಮಿಗಳ ಸಲಹೆಯನ್ನ ತಳ್ಳಿಹಾಕಿ ಚಂದ್ರಶೇಖರ್ ಆಜಾದ್ ಹೆಸರನ್ನ ಬಿಜೆಪಿ ಸರ್ಕಾರ ಮಾಡಿದೆ ಎಂದು ಆಯನೂರು ಹಳೇ ಸತ್ಯವನ್ನ ಈಗ ಬಿಚ್ಚಿಟ್ಟಿದ್ದಾರೆ.
Post a Comment