ರಾಮನ ವಿಷಯ ಬಿಜೆಪಿಗೆ ಅನುಕೂಲವಾಗಲಿದೆ ಎಂಬ ಆತಂಕ ಕಾಂಗ್ರೆಸ್ ಗೆ ಇದೆ-ಬಿಎಸ್ ವೈ

 ಅಯೋಧ್ಯೆಯಲ್ಲಿ ಜ.22 ರಂದು ರಾಮ ಮಂದಿರ ಪ್ರತಿಷ್ಠಾಪನೆ ಆಗ್ತಿರೋದು ಇಡಿ ವಿಶ್ವದ ಗಮನ ಸೆಳೆದಿದೆ. ಆದರೆ ಕಾಂಗ್ರೆಸ್ ನವರಿಗೆ ಅಸಮಾಧಾನ ಹಾಗೂ ಅತೃಪ್ತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.


ಸ್ವಗೃಹದಲ್ಲಿ ತಮನ್ನ ಭೇಟಿಯಾದ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರೊಯಿಸುತ್ತಾ ಈಡಿ ದೇಶದ ಜನ ರಾಮಮಂದಿರದ ಬಗ್ಗೆ ಆಗುಹೋಗುಗಳನ್ನ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ನವರಿಗೆ ಅಸಮಾಧಾನ, ಅತೃಪ್ತಿ ಇದೆ. ಬಿಜೆಪಿಯವರಿಗೆ ಅನುಕೂಲ ಆಗಬಹುದು ಅಂತಾ ಭಯ ಅವರಿಗೆ ಕಾಡ್ತಿದೆ ಎಂದು ದೂರಿದರು.

ಎಲ್ಲಾ ಪಕ್ಷದವರು ಬಂದು ಭಾಗವಹಿಸಬೇಕು ಎಂಬುದು ಮೋದಿ ಅಪೇಕ್ಷೆಯಿದೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಧಾನಮಂತ್ರಿ ಉಪವಾಸ ಇದ್ದು ಸೇವೆ ಮಾಡ್ತಿದ್ದಾರೆ. ಇನ್ನಾದರೂ‌ ಕಾಂಗ್ರೆಸ್ ನವರಿಗೆ ಸದ್ಬುದ್ದಿ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಲಿ. ಇಲ್ಲದಿದ್ದರೆ ಜನ ಈ ರೀತಿ ನಡವಳಿಕೆ ಸಹಿಸಲ್ಲ. ಇದರಿಂದ ಅವರಿಗೆ ತೊಂದರೆ ಆಗ್ತದೆ ಎಂದು ದೂರಿದರು.

ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಆದ ಮೇಲೆ ಹೋಗ್ತೀನಿ ಅಂದಿದ್ದಾರೆ. ಈ ಸಂದರ್ಭದಲ್ಲಿ ಹೋಗಿ ಬಂದ್ರೆ ಒಳ್ಳೆಯದು, ಅನುಕೂಲ ಆಗ್ತದೆ. ಅದು ಅವರಿಗೆ ಬಿಟ್ಟದ್ದು ಎಂದ ಬಿಎಸ್ ವೈ, ಶಿವಮೊಗ್ಗದ ಫ್ರೀಡಂ ಪಾರ್ಕ್ ಗೆ ಅಲ್ಲಮ ಪ್ರಭು ಹೆಸರು ನಾಮಕರಣ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನಾನು ಅದರ ಬಗ್ಗೆ ಏನೇ ಟೀಕೆ ಟಿಪ್ಪಣಿ ಮಾಡಲ್ಲ. ಒಳ್ಳೆಯ ಕೆಲಸ ಯಾರು ಮಾಡಿದರೂ ಒಳ್ಳೆಯದು. ಎಲ್ಲರೂ ಸೇರಿ ಮಾಡಲಿ ಎಂದು ಸಲಹೆ ನೀಡಿದರು.

ಪೇಜಾವರ ಶ್ರೀಗಳ ಹೇಳಿಕೆ ವಿಚಾರದ ಬಗ್ಗೆನೂ ಪ್ರತಿಕ್ರಿಯಿಸಿರುವ ಬಿಎಸ್ ವೈ ಅವರು ಏನು ಹೇಳಿದರೋ ತಪ್ಪು ಕಲ್ಪನೆ ಬೇಡ, ಹಿಂದು ಮುಸ್ಲಿಂ ಕ್ರಿಶ್ಚಿಯನ್ ಅಂತಲ್ಲ. ಮುಸ್ಲಿಂರು ಸಹ ರಾಮನಿಗಾಗಿ ಪಾದಯಾತ್ರೆ ಮೂಲಕ ಹೋಗ್ತಿದ್ದಾರೆ.

ಎಲ್ಲಾ ವರ್ಗದ ಜನ ಸಹಕಾರ ಕೊಡ್ತಿದ್ದಾರೆ.ರಾಮ ಎಲ್ಲರಿಗೂ ಬೇಕಾಗಿರುವಂತಹವನು. ಹಿಂದು ಮುಸ್ಲಿಂ ಕ್ರಿಶ್ಚಿಯನ್ ಎಲ್ಲರಿಗೂ ಈ ರೀತಿ‌ ಭೇಧ ಭಾವ ಮಾಡೋದು ಸರಿಯಲ್ಲ ಎಂದು ಸಲಹೆ ನೀಡಿದರು.

ಗ್ಯಾರಂಟಿ ಯೋಜನೆ ಬಗ್ಗೆ ಟೀಕೆ ಮಾಡಲ್ಲ. ಒಳ್ಳೆಯ ಕೆಲಸ ಮಾಡಿದ್ರೆ ಸ್ವಾಗತ. ಲೋಕಸಭೆ ಚುನಾವಣೆ  ದೃಷ್ಟಿಯಿಂದ ಪ್ರವಾಸ ಆರಂಭವಾಗಿದೆ. ವಿಜಯೇಂದ್ರ‌ ಅಧ್ಯಕ್ಷರಾದ ಮೇಲೆ ಎಲ್ಲಾ ಕಡೆ ಓಡಾಡಿ ಸಂಘಟನೆ ಮಾಡ್ತಿದ್ದಾರೆ.ಒಳ್ಳೆಯ ಬೆಂಬಲ ಸಿಗ್ತಿದೆ

ಇನ್ನು 2-3 ದಿನ ಆದ ಮೇಲೆ ನಾನು ಸಹ ದಿನಕ್ಕೆ ಎರಡು ಜಿಲ್ಲೆಯಂತೆ ಪ್ರವಾಸ ಮಾಡ್ತೇನೆ. ಲೋಕಸಭೆ ಅಭ್ಯರ್ಥಿಗಳ ಆಯ್ಕೆ ಹೈಕಮಾಂಡ್ ನಿರ್ಧಾರ ಮಾಡ್ತದೆ ಎಂದು ತಿಳಿಸಿದರು.

Post a Comment

Previous Post Next Post