ಶಿವಮೊಗ್ಗ, ಜನವರಿ 05, (ಕರ್ನಾಟಕ); ಶಿವಮೊಗ್ಗ ರಂಗಾಯಣವು ರಂಗಾಸ್ತಕರಿಗಾಗಿ ಫೆಬ್ರವರಿ-2024ರಲ್ಲಿ 20 ದಿನಗಳ ಕಾಲ ಪೂರ್ಣಾವಧಿ ನಾಟಕ ಸಿದ್ಧತಾ ಶಿಬಿರವನ್ನು ಆಯೋಜಿಸಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಶಿಬಿರಾರ್ಥಿಗಳು 20-40 ವರ್ಷದೊಳಗಿನವರಾಗಿರಬೇಕು. 12 ಜನ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಅನುಭವ, ಆಸಕ್ತಿ, ಬದ್ಧತೆಯ ಆಧಾರದ ಮೇಲೆ ಸಂದರ್ಶನದ ಮೂಲಕ ಅಂತಿಮ ಆಯ್ಕೆ ಮಾಡಲಾಗುವುದು. ಸಂದರ್ಶನಕ್ಕೆ ಸ್ವಂತ ಖರ್ಚಿನಲ್ಲಿ ಬರಬೇಕು ಹಾಗೂ ಆಯ್ಕೆಯಾದ ಅಭ್ಯರ್ಥಿಗಳು ಕನಿಷ್ಠ 5 ಪ್ರದರ್ಶನಗಳಿಗೆ ಒಪ್ಪಿಗೆ ಸೂಚಿಸಬೇಕು. ಶಿಬಿರದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಹೆಸರು, ವಿಳಾಸ, ದೂರವಾಣಿ ವಿದ್ಯಾರ್ಹತೆ, ರಂಗಭೂಮಿ ಅನುಭವ ವಿವರ, ಶಿಬಿರಾರ್ಥಿಯಾಗಿ ತರಬೇತಿ ಪಡೆಯುವ ಉದ್ದೇಶ ಹಾಗೂ ವಯಸ್ಸಿನ ದಾಖಲೆಯೊಂದಿಗೆ ಅರ್ಜಿ ಸಲ್ಲಿಸುವುದು. ಶಿಬಿರಾರ್ಥಿಗಳು ಕಡ್ಡಾಯವಾಗಿ ಶಿಬಿರದ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮತ್ತು 20 ದಿನಗಳು ನಿರಂತರವಾಗಿ ನಡೆಯುವ ಈ ಶಿಬಿರದಲ್ಲಿ ಮಧ್ಯದಲ್ಲಿ ಯಾವುದೇ ರಜೆ ಇರುವುದಿಲ್ಲ. ಶಿಬಿರಾರ್ಥಿಗಳ ಆಯ್ಕೆಯಲ್ಲಿ ಶಿಬಿರದ ನಿರ್ದೇಶಕರು ಹಾಗೂ ಆಡಳಿತಾಧಿಕಾರಿಗಳ ನಿರ್ಧಾರವೇ ಅಂತಿಮ. ಶಿಬಿರ ನಡೆಯುವ ಸಮಯದಲ್ಲಿ ಮಧ್ಯದಲ್ಲಿ ಬಿಟ್ಟು ಹೋಗಲು ಅವಕಾಶವಿರುವುದಿಲ್ಲ. ಅಯ್ಕೆಯಾದ ಶಿಬಿರಾರ್ಥಿಗಳಿಗೆ ರೂ. 12000/-ಗಳ ಗೌರವ ಸಂಭಾವನೆ, ಮಧ್ಯಾಹ್ನದ ಊಟ, ಚಹಾ ನೀಡಲಾಗುವುದು.
ಆಸಕ್ತರುವ ಬಿಳಿಹಾಳೆಯಲ್ಲಿ ಸ್ವವಿವರದೊಂದಿಗೆ ಜ.15 ರೊಳಗಾಗಿ ಆಡಳಿತಾಧಿಕಾರಿಗಳು, ರಂಗಾಯಣ, ಹೆಲಿಪ್ಯಾಡ್ ಹಿಂಭಾಗ, ಅಶೋಕನಗರ, ಶಿವಮೊಗ್ಗ ಇಲ್ಲಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಅಥವಾ ಇಮೇಲ್ admin.rangayanashivamogga@gmail.com ಮೂಲಕ ಕಳುಹಿಸುವಂತೆ ರಂಗಾಯಣದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-256353/ 7975229166 ಗಳನ್ನು ಸಂಪರ್ಕಿಸುವುದು.
Post a Comment