ಅಯೋಧ್ಯದಲ್ಲಿ ಐತಿಹಾಸಿಕ ಕ್ಷಣವಾಗಿರುವ ಜನವರಿ 22 ರಂದು ಭವ್ಯ ರಾಮಮಂದಿರ ನಿರ್ಮಾಣಕ್ಕೆ ಮನೆ ಮನೆಗೆ ಹೋಗಿ ಆಮಂತ್ರಿಸಲಾಗುತ್ತಿದೆ. ಇಂದು ಹೊಸ ಗುಂಡಪ್ಪ ಶೆಡ್ ನಲ್ಲಿ ಮಾಜಿ ಡಿಸಿಎಂ ಹಾಗೂ ಪುತ್ರ ಕಾಂತೇಶ್ ಮನೆ ಮನೆಗೆ ತೆರಳಿ ಆಮಂತ್ರಿಸಿದರು.
ಮೊದಲಿಗೆ ಗುಂಡಪ್ಪ ಶೆಡ್ ನ ಮಹಾಶಕ್ತಿ ಮಸ್ತಾಂಭಿಕಾ ದೇವಿಯ ಗುಡಿಯಲ್ಲಿ ಪೂಜೆ ಸಲ್ಲಿಸಿ ನಂತರ ಮನೆ ಮನೆಗೆ ತೆರಳಲಾಯಿತು. ಮನೆಗಳಿಗೆ ಹೋಗುವ ವೇಳೆ ಶ್ರೀರಾಮ ಜಯರಾಮ ಜಯಜಯರಾಮ ಎಂಬ ಭಜನೆಗಳನ್ನ ಹಾಡುವ ಮೂಲಕ ಆಮಂತ್ರಿಸಲಾಯಿತು.
ಮೊದಲಿಗೆ ನಂದಿಕೃಪ ಮನೆಗೆ ತೆರಳಿದ ಈಶ್ವರಪ್ಪ, ಕಾಂತೇಶ್ ಹಾಗೂ ಸಹಚರರು ಮನೆಗಳಿಗೆ ತೆರಳಿ ಜನವರಿ 22 ರಂದು ರಾಮಮಂದಿರ ಉದ್ಘಾಟಿಸಲಾಗುತ್ತಿದೆ. ಅಂದು ಮನೆಯವರೆಲ್ಲ ಹತ್ತಿರದ ದೇವಸ್ಥಾನದ ಬಳಿ ಬಂದು ಉದ್ಘಾಟನಾ ಕಾರ್ಯಕ್ರಮವನ್ನ ಎಲ್ ಇಡಿ ಸ್ಕ್ರೀನ್ ನಲ್ಲಿ ವೀಕ್ಷಸುವಂತೆ, ಸಂಜೆ ಮನೆಯ ಮುಂದೆ ಐದು ದೀಪ ಹಚ್ಚುವಂತೆ ಕೋರಲಾಯಿತು.
ನಂತರ ಮಾಧ್ಯಮಗಳಿಗೆ ಮಾತನಾಡಿದ ಈಶ್ವರಪ್ಪ,496 ವರ್ಷದ ಕೆಳಗೆ ಅಯೋಧ್ಯೆಯಲ್ಲಿ ರಾಮ ಮಂದಿರ ಧ್ವಂಸ ಮಾಡಿದ್ದರು. ಮಸೀದಿ ಕಟ್ಟಿ ಬಾಬರ್ ಮಸೀದಿ ಕಟ್ಟಿದ್ದರು. ಗುಲಾಮಗಿರಿ ಮಸೀದಿ ಹೊಡೆದು ರಾಮ ಮಂದಿರ ಕಟ್ಟಿದ್ದೇವೆ ಎಂದು ಹೇಳಿದರು.
ನಮ್ಮೆಲ್ಲರ ಸೌಭಾಗ್ಯ ನಾವು ಬದುಕಿರುವ ದಿನದಲ್ಲೇ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆ ಆಗ್ತಿದೆ. ಗುಲಾಮಗಿರಿ ಸಂಕೇತ ಹೋಗಿ ಸ್ವಾಭಿಮಾನ ಸಂಕೇತ ನಿರ್ಮಾಣ ಆಗಿದೆ. ಮನೆ ಮನೆಗೆ ಮಂತ್ರಾಕ್ಷತೆ ಕೊಡ್ತಿದ್ದೇವೆ. ಜ22 ರಂದು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಿ ಸಿಹಿ ಮಾಡಿ ಊಟ ಮಾಡುತ್ತೇವೆ.
ದೀಪಾವಳಿ ಹಬ್ಬದ ರೀತಿ ಆಚರಣೆ ಮಾಡಿ, ಪವಿತ್ರವಾದ ಕೆಲಸ ಮಾಡ್ತಿರುವ ಸಂದರ್ಭದಲ್ಲಿ ರಾಜಕಾರಣ ಮಾತನಾಡಲ್ಲ. ಪ್ರಭು ಶ್ರೀರಾಮ ಚಂದ್ರನ ಭಕ್ತರು ಇದ್ದಾರೋ ಅವರಿಗೆ ಆಹ್ವಾನ ಕೊಟ್ಟಿದ್ದೇವೆ. ಬಿಜೆಪಿಯ ರಾಮ ಎನ್ನುವವರಿಗೆ ಆಹ್ವಾನ ಕೊಟ್ಟಿಲ್ಲ ಎಂದರು.
ರಾಮನ ಬಗ್ಗೆ ಯಾರಿಗೆ ಗೌರವ ಇದೆ, ಅಭಿಮಾನ ಇದೆ ಎಲ್ಲರೂ ಬರಬಹುದು. ಅಯೋಧ್ಯೆಯಲ್ಲಿ ರಾಮ ಮಂದಿರ ಆಗಬೇಕು ಎನ್ನುವ ತೀರ್ಮಾನ ಆಗ್ತಿದ್ದಾಗೆ ಕಾಶಿ ಮಥುರಾದಲ್ಲಿ ಸರ್ವೇಗೆ ಆದೇಶ ಆಗಿದೆ. ನಮ್ಮ ಪರವಾಗಿ ತೀರ್ಪು ಬರುತ್ತದೆ. ಕಾಶಿಯಲ್ಲು ಮಸೀದಿ ಹೊಡೆದು ಹಾಕಿ ಕಾಶಿ ಮಂದಿರ ಕಟ್ಟುತ್ತೇವೆ. ಮಥುರಾದಲ್ಲು ಶ್ರೀ ಕೃಷ್ಣನ ದೇವಸ್ಥಾನ ಕಟ್ಟಿಯೇ ಕಟ್ಟುತ್ತೇವೆ ಎಂದರು.
Post a Comment