ಇದೇ ಮೊದಲ ಬಾರಿಗೆ ತೃತೀಯ ಲಿಂಗಿ ಮಹಿಳೆಯೊಬ್ಬರು ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯುವ ಮೂಲಕ ಸುದ್ದಿಯಾಗಿದ್ದಾರೆ. ಶಬರಿಮಲೆ ಅಯ್ಯಪ್ಪನ ದರ್ಶನ ಪೂರ್ಣಗೊಳಿಸಿದ ಮೊದಲ 'ಟ್ರಾನ್ಸ್ಜೆಂಡರ್ ಮಹಿಳೆ' ರಿಯಾನಾ ರಾಜು.
ರಿಯಾನಾ ರಾಜು
ಬೆಂಗಳೂರು: ಇದೇ ಮೊದಲ ಬಾರಿಗೆ ತೃತೀಯ ಲಿಂಗಿ ಮಹಿಳೆಯೊಬ್ಬರು ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯುವ ಮೂಲಕ ಸುದ್ದಿಯಾಗಿದ್ದಾರೆ
ಶಬರಿಮಲೆ ಅಯ್ಯಪ್ಪನ ದರ್ಶನ ಪೂರ್ಣಗೊಳಿಸಿದ ಮೊದಲ 'ಟ್ರಾನ್ಸ್ಜೆಂಡರ್ ಮಹಿಳೆ' ರಿಯಾನಾ ರಾಜು, ವರ್ಷಗಳ ಹಿಂದೆ ತನ್ನ ಪುರುಷನಿಂದ ಹೆಣ್ಣಾಗಿ ಬದಲಾಗಿದ್ದಾರೆ, ಸತತ ಎಂಟು ಪ್ರಯತ್ನಗಳ ನಂತರ ನಾನು ಶಬರಿಮಲೆ ಅಯ್ಯಪ್ಪ ದರ್ಶನ ಪಡೆಯಲು ಯಶಸ್ವಿಯಾಗಿದ್ದೇನೆ ಎಂದು ಹೇಳಿದ್ದಾರೆ.
ರಿಯಾನಾ ಕೇರಳ ಸರ್ಕಾರದ ದೇವಸ್ವಂ ಬೋರ್ಡ್ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸುತ್ತಲೇ ಇದ್ದರು. ಶಬರಿ ಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಪುರುಷರು ಮತ್ತು ಅಪ್ರಾಪ್ತರು ಹಾಗೂ ವಯಸ್ಕ ಮಹಿಳೆಯರು ಮಾತ್ರ ಪ್ರವೇಶಿಸಲು ಅನುಮತಿಯಿತ್ತು. ಸತತ ಪ್ರಯತ್ನದ ನಂತರ ತನ್ನ ಕನಸನ್ನು ನನಸಾಗಿಸುವ ಮೂಲಕ ಟ್ರಾನ್ಸ್‌ಜೆಂಡರ್ ಸಮುದಾಯಕ್ಕೆ ಮಾದರಿಯಾಗಿದ್ದಾರೆ.
ಇಲ್ಲಿಯವರೆಗೆ, ತೃತೀಯಲಿಂಗಿಗಳು ಪುರುಷನಂತೆ ಪೋಸ್ ನೀಡಬಹುದಿತ್ತು ಮತ್ತು ಪೈಜಾಮ ಮತ್ತು ಧೋತಿಗಳನ್ನು ಧರಿಸಬಹುದಿತ್ತು. ಆದರೆ ನಾನು ನನ್ನನ್ನು ತೃತೀಯಲಿಂಗಿ ಮಹಿಳೆ ಎಂದು ಘೋಷಿಸಿಕೊಂಡಿದ್ದೇನೆ. ಇದಕ್ಕೆ ಸಂಬಂಧಿಸಿದ ಅಫಿಡವಿಟ್, ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ, ಉಪಮುಖ್ಯಮಂತ್ರಿ ಕಚೇರಿಯಿಂದ ಪತ್ರಗಳು ಮತ್ತು ತೃತೀಯ ಲಿಂಗಿಗಳ ಹಕ್ಕುಗಳನ್ನು ಗುರುತಿಸುವ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಶಿಫಾರಸುಗಳಂತಹ ಪೂರಕ ದಾಖಲೆಗಳನ್ನು ತೆಗೆದುಕೊಂಡಿದ್ದೇನೆ ಎಂದಿದ್ದಾರೆ.
ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ, ರಿಯಾನಾ ತನ್ನ ಸ್ತ್ರೀ ವೇಷಕ್ಕಾಗಿ ಕೆಲವು ಭಕ್ತರು ಮತ್ತು ಪುರೋಹಿತರಿಂದ ಆಕ್ರೋಶ ಎದುರಿಸಬೇಕಾಯಿತು. ಅದಾದ ನಂತರ ತಾನು ಪುರುಷನಿಂದ ಬದಲಾಗಿರುವ ಸ್ತ್ರೀ ಎಂದು ಅವರಿಗೆ ವಿವರಿಸಿದರು, ಇವರಿಗೆ ಮಕ್ಕಳನ್ನು ಹೆರಲು ಸಾಧ್ಯವಿಲ್ಲ, ಹೀಗಾಗಿ 'ದರ್ಶನ' ಪಡೆಯಬಹುದಾಗಿದೆ.
ಒಂದು ರೀತಿಯಲ್ಲಿ, ಈ ದೇವಾಲಯದ ಭೇಟಿಯು ತೃತೀಯ ಲಿಂಗಿ ಮಹಿಳೆಯರ ಹಕ್ಕುಗಳ ಬಗ್ಗೆ ಜನರಿಗೆ ತಿಳಿಸಲು ನನಗೆ ಅವಕಾಶ ಮಾಡಿಕೊಟ್ಟಿತು ಎಂದು ಅವರು ಹೇಳಿದ್ದಾರೆ. ಕೇರಳ ಪೊಲೀಸರು ತನಗೆ ರಕ್ಷಣೆ ನೀಡಿ ದರ್ಶನ ಪಡೆಯಲು ಸಹಾಯ ಮಾಡಿದ್ದಕ್ಕಾಗಿ ಹಾಗೂ ಯಾವುದೇ ಅಡೆತಡೆಗಳನ್ನು ಸೃಷ್ಟಿಸದ ದೇವಸ್ವಂ ಮಂಡಳಿಯನ್ನು ಶ್ಲಾಘಿಸಿದರು.
ನನ್ನ ಪೋಷಕರು ನನ್ನ ಸುರಕ್ಷತೆಯ ಬಗ್ಗೆ ಚಿಂತಿತರಾಗಿದ್ದರು. ನಾನು ಜನವರಿ 4 ರಂದು ಬೆಳಿಗ್ಗೆ ನನ್ನ ಪ್ರಯಾಣ ಪ್ರಾರಂಭಿಸಿದೆ ಮತ್ತು ಜನವರಿ 5 ರಂದು ಸಂಜೆ ದರ್ಶನ ಮಾಡಿದೆ. ನಾನು ಸುರಕ್ಷಿತವಾಗಿದ್ದು ಮನೆಗೆ ಮರಳುತ್ತಿದ್ದೇನೆ ಎಂದು ನನ್ನ ಪೋಷಕರಿಗೆ ಕರೆ ಮಾಡಿದೆ.
ಐವರು ನನ್ನ ಜೊತೆಗಿದ್ದರು, ಆದರೆ ಅವರು ತಮ್ಮನ್ನು ತೃತೀಯಲಿಂಗಿ ಮಹಿಳೆ ಎಂದು ಘೋಷಿಸಲು ಹಾಗೂ ತಮ್ಮ ಡ್ರೆಸ್ ಬದಲಾಯಿಸಲು ಹೆದರುತ್ತಿದ್ದರು. ಆದರೆ ನಾನು ಸೀರೆಯಲ್ಲಿ ಮತ್ತು ಟ್ರಾನ್ಸ್ಜೆಂಡರ್ ಮಹಿಳೆಯಾಗಿ ಪವಿತ್ರ ಪ್ರವಾಸವನ್ನು ಪೂರ್ಣಗೊಳಿಸಿದೆ. ನಾನು ಅದರ ಬಗ್ಗೆ ಹೆಮ್ಮೆಪಡುತ್ತೇನೆ ಎಂದಿದ್ದಾರೆ.
Post a Comment