ಶಿವಮೊಗ್ಗ: ಅಂಗಡಿಯಲ್ಲಿ ಕೆಲಸಕ್ಕಿದ್ದ ವ್ಯಕ್ತಿಯಿಂದಲೇ ಆಭರಣ ಕಳವು; 8,45,000/- ರೂಗಳ 130 ಗ್ರಾಂ ತೂಕದ ಬಂಗಾರವನ್ನು ವಶ.!

 ಶಿವಮೊಗ್ಗ ನಗರದ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಲಷ್ಕರ್ ಮೊಹಲ್ಲಾ ವಾಸಿ ಶ್ರೀ ಅನಿಸೂರ್ ಇಸ್ಲಾಂ, 42 ವರ್ಷ  ರವರ ಚಿನ್ನ ಬೆಳ್ಳಿ ಅಂಗಡಿಯಲ್ಲಿ ಕೆಲಸಕ್ಕಿದ್ದ ಪಶ್ಚಿಮ ಬಂಗಾಳದ ವಾಸಿಯಾದ ಅದಿತೋ ಮಾಜಿ ಎಂಬುವವನು ದಿನಾಂಕಃ 04-01-2024 ರಂದು ಸದರಿ ಅಂಗಡಿಯಲ್ಲಿ ಬಂಗಾರವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0001/2024 ಕಲಂ 381  ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ. 

 ಪ್ರಕರಣದ ಆರೋಪಿ ಮತ್ತು ಕಳುವಾದ ಮಾಲಿನ ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಜಿ ಕೆ, ಐ.ಪಿ.ಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ,  ಶ್ರೀ ಅನಿಲ್ ಕುಮಾರ್ ಭೂಮಾರೆಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1  ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಕಾರಿಯಪ್ಪ ಎ.ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶದಲ್ಲಿ, ಶ್ರೀ ಬಾಲರಾಜ್ ಬಿ ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ-ಎ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ ಶ್ರೀ ರವಿ ಪಾಟೀಲ್ ಪಿ.ಐ ಕೋಟೆ ಪ್ರಭಾರ ರವರ ನೇತೃತ್ವದ, ಶ್ರೀ ಕುಮಾರ್ ಪಿ.ಎಸ್.ಐ,  ಶ್ರೀ ಸಿ. ಆರ್ ಕೊಪ್ಪದ್, ಪಿ.ಎಸ್.ಐ, ಶ್ರೀ ಟಿ. ಶ್ರೀಹರ್ಷ ಎ.ಎಸ್‌.ಐ ಮತ್ತು ಸಿಬ್ಬಂಧಿಯಗಳಾದ ಹೆಚ್.ಸಿ ಅಣ್ಣಪ್ಪ, ನಾಗರಾಜ, ಪಿಸಿ ಆಂಜಿನಪ್ಪ, ಕಿಶೋರ ಮತ್ತು  ಜಯಶ್ರೀ ರವರಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.

ಸದರಿ ತನಿಖಾ ತಂಡವು ದಿನಾಂಕಃ 09-01-2024 ರಂದು ಪ್ರಕರಣದ ಆರೋಪಿತನಾದ ಅದಿತೋ ಮಾಜಿ @ ಆದಿತ್ಯಾ 37 ವರ್ಷ, ಖಜಿರ್ದೋ ಗ್ರಾಮ, ಜೈಪೂರ್ ಥಾಣಾ, ಹೌರಾ ಜಿಲ್ಲೆ ಪಶ್ಚಿಮ ಬಂಗಾಳ ರಾಜ್ಯ ಈತನನ್ನು ಪಶ್ಚಿಮ ಬಂಗಾಳ ರಾಜ್ಯದ ಕೊಲ್ಕತ್ತದಲ್ಲಿ ದಸ್ತಗಿರಿ ಮಾಡಿ ಆರೋಪಿತನನ್ನು  ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ನಂತರ ದಿನಾಂಕಃ 17-01-2024 ರಂದು ಪುನಾಃ ಪೊಲೀಸ್‌ ವಶಕ್ಕೆ ಪಡೆದು  ಆರೋಪಿತನಿಂದ ಕೊಲ್ಕತ್ತಾದಲ್ಲಿ ಅಂದಾಜು ಮೌಲ್ಯ 2,70,000/- ರೂಗಳ 45 ಗ್ರಾಂ ತೂಕದ ಬಂಗಾರದ ಆಭರಣ, ಹೈದರಾಬಾದ್ ಮತ್ತು ಸಿಕಂದರಬಾದ್ ನಲ್ಲಿ ಅಂದಾಜು ಮೌಲ್ಯ 5,75,000/- ರೂಗಳ ಒಟ್ಟು 85 ಗ್ರಾಂ ಬಂಗಾರ ಸೇರಿ ಒಟ್ಟು ಅಂದಾಜು ಮೌಲ್ಯ 8,45,000/- ರೂಗಳ 130 ಗ್ರಾಂ ತೂಕದ ಬಂಗಾರವನ್ನು ವಶಪಡಿಸಿಕೊಳ್ಳಲಾಗಿದೆ.

ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.


Post a Comment

Previous Post Next Post