'ಕಾಟೇರ' ಸಿನಿಮಾ ಸಕ್ಸಸ್ ಖುಷಿಯಲ್ಲಿ ಕಳೆದ ಜನವರಿ 3ರಂದು ಮಧ್ಯರಾತ್ರಿ 1 ಗಂಟೆ ಕಳೆದು ಬೆಳಗಿನ ಜಾವದವರೆಗೂ ನಿಯಮ ಮೀರಿ ಬೆಂಗಳೂರಿನ ರಾಜಾಜಿನಗರದಲ್ಲಿರುವ ಜೆಟ್ ಲ್ಯಾಗ್ ಪಬ್ ನಲ್ಲಿ ಪಾರ್ಟಿ ಮಾಡಿದ್ದ ಚಿತ್ರತಂಡಕ್ಕೆ ಪೊಲೀಸರು ನೊಟೀಸ್ ಜಾರಿ ಮಾಡಿ ಚಿತ್ರತಂಡ ಮತ್ತು ಪಾರ್ಟಿಯಲ್ಲಿ ಭಾಗವಹಿಸಿದ್ದ ಕೆಲವು ಕಲಾವಿದರು ವಿಚಾರಣೆಗೆ ಹಾಜರಾಗಿದ್ದರು.
ಸಾಂದರ್ಭಿಕ ಚಿತ್ರ
ಬೆಂಗಳೂರು: 'ಕಾಟೇರ' ಸಿನಿಮಾ ಸಕ್ಸಸ್ ಖುಷಿಯಲ್ಲಿ ಕಳೆದ ಜನವರಿ 3ರಂದು ಮಧ್ಯರಾತ್ರಿ 1 ಗಂಟೆ ಕಳೆದು ಬೆಳಗಿನ ಜಾವದವರೆಗೂ ನಿಯಮ ಮೀರಿ ಬೆಂಗಳೂರಿನ ರಾಜಾಜಿನಗರದಲ್ಲಿರುವ ಜೆಟ್ ಲ್ಯಾಗ್ ಪಬ್ ನಲ್ಲಿ ಪಾರ್ಟಿ ಮಾಡಿದ್ದ ಚಿತ್ರತಂಡಕ್ಕೆ ಪೊಲೀಸರು ನೊಟೀಸ್ ಜಾರಿ ಮಾಡಿ ಚಿತ್ರತಂಡ ಮತ್ತು ಪಾರ್ಟಿಯಲ್ಲಿ ಭಾಗವಹಿಸಿದ್ದ ಕೆಲವು ಕಲಾವಿದರು ವಿಚಾರಣೆಗೆ ಹಾಜರಾಗಿದ್ದರು.
ನಟ ದರ್ಶನ್ ಸೇರಿ 8 ಮಂದಿಗೆ ನೋಟಿಸ್ ನೀಡಿದ್ದ ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಇದೀಗ ಪಾರ್ಟಿ ಮಾಡಲು ಅವಕಾಶ ಮಾಡಿಕೊಟ್ಟ ಜೆಟ್ ಲ್ಯಾಗ್ ಪಬ್ ಪರವಾನಗಿಯನ್ನು 25 ದಿನಗಳವರೆಗೆ ಪೊಲೀಸರು ರದ್ದುಗೊಳಿಸಿದ್ದಾರೆ.
ನಟ ದರ್ಶನ್ ಹಾಗೂ ಸ್ನೇಹಿತರು ಪಬ್ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಲು ಅವಕಾಶ ನೀಡಿದ ಹಿನ್ನೆಲೆ ಜೆಟ್ ಲ್ಯಾಗ್ ಪಬ್ ಲೈಸೆನ್ಸ್ ರದ್ದು ಮಾಡಲಾಗಿದೆ. 25 ದಿನಗಳ ಕಾಲ ಪಬ್ ಪರವಾನಗಿಯನ್ನು ರದ್ದು ಮಾಡಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
25 ದಿನ ಪಬ್ನಲ್ಲಿ ಮದ್ಯ ಮಾರಾಟ ನಿಷೇಧ: ಮುಂದಿನ 25 ದಿನಗಳ ಕಾಲ ಜೆಟ್ ಲ್ಯಾಗ್ ಪಬ್ನಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ. ಜೆಟ್ ಲ್ಯಾಗ್ ಪಬ್ನಲ್ಲಿ ಅಬಕಾರಿ ನಿಯಮ ಉಲ್ಲಂಘನೆ ಮಾಡಿರುವ ಬಗ್ಗೆ ಎಫ್ಐಆರ್ ನಲ್ಲಿ ದಾಖಲಾಗಿದೆ. ಮೂರು ಬಾರಿ ನಿಯಮ ಉಲ್ಲಂಘನೆ ಮಾಡಿದರೆ ಪರವಾನಗಿ ರದ್ದು ಮಾಡಲಾಗುತ್ತದೆ. ಮೊದಲ ಬಾರಿ ಜೆಟ್ ಲ್ಯಾಗ್ ವಿರುದ್ಧ ದೂರು ಬಂದ ಹಿನ್ನೆಲೆ ಕೇವಲ 25 ದಿನಗಳ ಕಾಲ ಪರವಾನಗಿ ರದ್ದು ಮಾಡಲಾಗಿದೆ.
Post a Comment