ಶಿವಮೊಗ್ಗ ತಾಲ್ಲೂಕು ಮಲವಗೊಪ್ಪ ಗ್ರಾಮದಲ್ಲಿ ಸುಮಾರು 1955 ರಲ್ಲಿ ಮುಂಬೈನ ತುಂಗಾಭದ್ರಾ ಶುಗರ್ ವರ್ಕ್ಸ್ ಎಂಬ ಕಂಪನಿಯವರು ಸಕ್ಕರೆ ಕಾರ್ಖಾನೆಯನ್ಫ಼್ನು ತೆರೆಯಲು ಮಾನ್ಯ ಸರ್ಕಾರಕ್ಕೆ ಕೇಳಿಕೊಂಡಾಗ ಸರ್ಕಾರವು ಮೇಲ್ಕಂಡ ಕಂಪನಿಗೆ ಸಕ್ಕರೆಯನ್ನು ತಯಾರು ಮಾಡಲು ಅನುಮತಿಯನ್ನು ನೀಡಿದ್ದು, ಸರ್ಕಾರ ಶಿವಮೊಗ್ಗ ತಾಲ್ಲೂಕಿನ ಯರಗನಾಳ್, ಹಸೂಡಿ, ಹಸೂಡಿ ಫಾರಂ, ಮಲವಗೊಪ್ಪ, ನಿಧಿಗೆ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಸುಮಾರು 3685 ಎಕರೆ ಭೂಮಿಯನ್ನು ಕೊಟ್ಟಿದ್ದು, ಇದರಲ್ಲಿ ಸಾಕಷ್ಟು ಭೂಮಿ
ಯನ್ನು ಕಂಪನಿಗೆ ಗುತ್ತಿಗೆ ಆಧಾರದ ಮೇಲೆ ನೀಡಿದ್ದು, ಇದರಂತೆ ಸಕ್ಕರೆ ಕಾರ್ಖಾನೆಯವರು ಮೇಲ್ಕಂಡ ಜಮೀನನ್ನು ಅಭಿವೃದ್ದಿ ಪಡಿಸಿ ಕಾರ್ಖಾನೆಯನ್ನು ಮುಂದುವರೆಸುತ್ತಾ ಬಂದಿದ್ದರು. ಇದರಂತೆ ರೈತರು ಮತ್ತು ಕಾರ್ಮಿಕರು ನೆಮ್ಮದಿಯಿಂದ ಜೀವನ ನಡೆಸುತ್ತಾ ಬಂದಿದ್ದಾರೆ.
ತದನಂತರ 1994 ರಲ್ಲಿ ಕಾರ್ಖಾನೆಯು ಯಾವ ಕಾರಣದಿಂದಲೋ ಚೆನ್ನೈ ಮೂಲದ 'ದೇವಿ ಶುಗರ್ ವರ್ಕ್ಸ್' ಸಂಸ್ಥೆಗೆ ಹಸ್ತಾಂತರವಾಗಿದ್ದು, ಇದರಂತೆ ಕಾರ್ಖಾನೆಯನ್ನು 2-3 ವರ್ಷ ನಡೆದು ಕಾರಣಾಂತರದಿಂದ ಕಂಪನಿಯು ಮುಚ್ಚಿದ್ದು, ಮೇಲ್ಕಂಡ ಕಾರ್ಖಾನೆಯನ್ನು ನಂಬಿಕೊಂಡಿದ್ದ ಸಾವಿರಾರು ರೈತರು ಹಾಗೂ ಕಾರ್ಖಾನೆ ಕಾರ್ಮಿಕರ ಬದುಕು ಬೀದಿಪಾಲು ಮತ್ತು ಮೂರಾಬಟ್ಟೆಯಾಯಿತು. ಇದರಂತೆ ಮೇಲ್ಕಂಡ ಕಂಪನಿಯು ಸುಮಾರು 25 ವರ್ಷ ಕಂಪನಿ ಮುಚ್ಚಿದ್ದು, ಮೇಲ್ಕಂಡ ಎಲ್ಲಾ ಜಮೀನುಗಳು ರೈತರು ಬೇರೆ ಬೇರೆ ಬೆಳೆಯನ್ನು ಬೆಳೆಯುತ್ತಾ ಹಾಗೂ ನಿಧಿಗೆ ಸರ್ವೆ ನಂ. 33/186 ರಲ್ಲಿ 18 ಎಕರೆ ದನಗಳ ಮುಫತ್ತು ಇದರಲ್ಲಿ ಕಾರ್ಮಿಕರು 40-50 ವರ್ಷಗಳಿಂದ ಸ್ವಂತ ಹಣದಿಂದ ಮನೆಗಳನ್ನು ನಿರ್ಮಾಣ ಮಾಡಿಕೊಂಡು ವಾಸಿಸುತ್ತಿದ್ದರು. ಮತ್ತು ಗ್ರಾಮ ಪಂಚಾಯ್ತಿಯಿಂದ ಎಲ್ಲರೂ ಖಾತೆಯನ್ನು ಪಡೆದಿದ್ದು, ಎಲ್ಲ ಮೂಲ ಸೌಕರ್ಯಗಳನ್ನು ಸಹ ಪಡೆದು ಹಾಗೂ 94-ಡಿ ಅದಿಯಲ್ಲೂ ಸಹ ಅರ್ಜಿಯನ್ನು ಸಲ್ಲಿಸಿ ಮಾನ್ಯ ತಹಸೀಲ್ದಾರ್ ರವರು ಹಾಗೂ ಮಾನ್ಯ ಉಪವಿಭಾಗಾಧಿಕಾರಿಗಳು ಹಕ್ಕುಪತ್ರವನ್ನು ಕೊಡಲು ಸಹ ಕ್ರಮ ತೆಗೆದುಕೊಂಡಿರುತ್ತಾರೆ.
ಆದರೆ, ಪುನಃ ಇಷ್ಟು ದಿನಗಳು ಬಿಟ್ಟು ತುಂಗಾಭದ್ರಾ ಶುಗರ್ ವರ್ಕ್ಸ್ ಕಂಪನಿಯವರು ನಮ್ಮಗಳ ಹೆಸರಿಗೆ ಈ ಜಮೀನು ಇದೆ ಎಂಬುದಾಗಿ ಬೇರೆಯವರ ಜೊತೆಯಲ್ಲಿ ಜೆ.ವಿ. ಆಧಾರದಲ್ಲಿ ವಾಣಿಜ್ಯ ಬಳಕೆಗೆಂದು ಮೇಲ್ಕಂಡ ಜಮೀನು, ಜಾಗಗಳನ್ನು ಅಭಿವೃದ್ದಿ ಪಡಿಸಲು ಮುಂದಾಗಿದ್ದಾರೆ. ಜಮೀನು ಮತ್ತು ಮನೆಗಳನ್ನು ಏಕಾಏಕಿ ವಶಪಡಿಸಿಕೊಂಡು ಡೆಮಾಲಿಷ್ ಮಾಡಲು ಬಂದಾಗ ಕಾರ್ಮಿಕರ ಕುಟುಂಬಗಳು ಮತ್ತು ರೈತರು ವಿರೋಧ ವ್ಯಕ್ತಪಡಿಸಿ ವಾಪಾಸ್ ಕಳುಹಿಸಿರುತ್ತೇವೆ ಎಂದು ಹೇಳಿದ್ದಾರೆ. ಆದರೆ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ WP: 25626/1991 ರಲ್ಲಿ ಮೇಲ್ಕಂಡ ಕಂಪನಿಯವರು ಸಾಲ ಪಡೆದ ಕಾರಣ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇವರ ಮೇಲೆ ಮೊಕದ್ದಮೆ ಹೂಡಿದ ಸಮಯದಲ್ಲಿ ನ್ಯಾಯಾಲಯದವರು LRMCR 150/79-80 ರಂತೆ ವಿಶೇಷ ಜಿಲ್ಲಾಧಿಕಾರಿಗಳು ತುಂಗ ಭದ್ರ ಸಕ್ಕರೆ ಕಾರ್ಖಾನೆಗೆ ಸಂಬಂಧ ಪಟ್ಟ ಎಲ್ಲಾ ಆಸ್ತಿಗಳನ್ನು ಸರ್ಕಾರಿ ಜಾಗ ಎಂದು ಮಾಡಿದ್ದು, ಕೇವಲ 50 ಎಕರೆ ಜಮೀನು ಕಾರ್ಖಾನೆ ಆಡಳಿತ ಮಂಡಳಿಗೆ ಸೇರಿರುತ್ತದೆ ಎಂದು ತಿಳಿಸಿರುತ್ತದೆ. ಇದಕ್ಕೆ ಸಂಬಂಧಪಟ್ಟ WP: 23467/2013 ರಾಜ್ಯ ಹೈಕೋರ್ಟ್ ನಲ್ಲಿ ಕಂಪನಿಯವರು ಮಾಲೀಕತ್ವ ಸ್ಥಾಪಿಸಿಕೊಳ್ಳಲು ಪ್ರಕರಣ ದಾಖಲು ಮಾಡಿದ್ದು,ವಿಚಾರಣೆಯ ಹಂತದಲ್ಲಿದ್ದು, ಯಾವುದೇ ಆದೇಶವಾಗಿರುವುದಿಲ್ಲ.
ಈ ಕಾರಣದಿಂದ ಕಂಪನಿಯ ಆಸ್ತಿ ಎಲ್ಲವೂ ಸರ್ಕಾರಿ ಜಾಗವಾಗಿದ್ದು, 40-50 ವರ್ಷಗಳಿಂದ ಮೇಲ್ಕಂಡ ಜಾಗದಲ್ಲಿ ಸ್ವಂತ ಹಣದಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸವಾಗಿರುವ ರೈತರು, ಕಾರ್ಮಿಕರು ಜಮೀನುಗಳಿಗೆ ಖಾತೆ ಪಹಣಿ ಮಾಡಿಸಿಕೊಂಡಿರುವುದರಿಂದ ಇನ್ನುಳಿದ ಜಮೀನುಗಳಿಗೆ, ಸರ್ವೇ ನಂ. 33/186 ರಲ್ಲಿರುವ ಮನೆಗಳಿಗೆ ಮತ್ತು ಕಾಲೋನಿ ನಿವಾಸಿಗಳಿಗೆ ಹಕ್ಕುಪತ್ರ ಕೊಡಲು ಆದೇಶ ಮಾಡಬೇಕೆಂದು ಪ್ರತಿಭಟನೆ ಕೈಗೊಂಡಿದ್ದಾರೆ
.
Post a Comment