ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿ ಪ್ರಕಾರ, 2022 ರಲ್ಲಿ 2 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ 19 ಮಹಾನಗರಗಳಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ದೆಹಲಿ ಮತ್ತು ಮುಂಬೈ ನಂತರ ಬೆಂಗಳೂರು ಸ್ಥಾನ ಪಡೆದುಕೊಂಡಿದೆ.
ಪ್ರಾತಿನಿಧಿಕ ಚಿತ್ರಎನ್ಸಿಆರ್ಬಿ ವರದಿ ಪ್ರಕಾರ, ನಗರದಲ್ಲಿ ಆ್ಯಸಿಡ್ ದಾಳಿಯ ಆರು ಘಟನೆಗಳು ವರದಿಯಾಗಿದ್ದು, ಇದು ದೇಶದ ಯಾವುದೇ ಮೆಟ್ರೋಪಾಲಿಟನ್ ನಗರದಲ್ಲಿ ದಾಖಲಾದ ಅತಿ ಹೆಚ್ಚು ಪ್ರಕರಣವಾಗಿದೆ. ನಗರದಲ್ಲಿ 151 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 149 ಪ್ರಕರಣಗಳಲ್ಲಿ ಸಂತ್ರಸ್ತರಿಗೆ ತಿಳಿದಿರುವ ವ್ಯಕ್ತಿಗಳಿಂದಲೇ ನಡೆದಿವೆ.
ಭಾರತೀಯ ದಂಡ ಸಂಹಿತೆ (ಐಪಿಸಿ) ಯಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳೆಂದು ವರ್ಗೀಕರಿಸಲಾದ ಅಪಹರಣ, ಮಾನವ ಕಳ್ಳಸಾಗಣೆ, ಅತ್ಯಾಚಾರ ಮತ್ತು ಮಹಿಳೆಯರ ಮೇಲಿನ ಹಲ್ಲೆಗಳಂತಹ ಗಮನಾರ್ಹ ಸಂಖ್ಯೆಯ ಪ್ರಕರಣಗಳು ದಾಖಲಾಗಿವೆ.
ವಾರ್ಷಿಕ ಅಪರಾಧ ವರದಿ ಪ್ರಕಾರ, 2020ಕ್ಕೆ ಹೋಲಿಸಿದರೆ, 1,194 ಪ್ರಕರಣಗಳು ಏರಿಕೆಯಾಗಿದ್ದು, 2020 ಮತ್ತು 2021 ಎರಡನ್ನೂ ಮೀರಿಸಿವೆ. 639 ಅಪಹರಣ ಪ್ರಕರಣಗಳ ಜೊತೆಗೆ, 763 ಮಹಿಳೆಯರ ಮೇಲಿನ ಹಲ್ಲೆ ಪ್ರಕರಣಗಳು ಸೇರಿದಂತೆ ಹೆಚ್ಚಿನ ವಿಭಾಗಗಳಲ್ಲಿ, ಬೆಂಗಳೂರು ನಗರವು ದೆಹಲಿ ಮತ್ತು ಮುಂಬೈ ನಂತರ ಮೂರನೇ ಸ್ಥಾನದಲ್ಲಿದೆ.
ಬೆಂಗಳೂರಿನಲ್ಲಿ 50 ಮಾನವ ಕಳ್ಳಸಾಗಣೆ ಪ್ರಕರಣಗಳು ವರದಿಯಾಗಿದ್ದು, ದೆಹಲಿಯಲ್ಲಿ 53 ಪ್ರಕರಣಗಳು ವರದಿಯಾಗಿವೆ. ಎರಡು ಆ್ಯಸಿಡ್ ದಾಳಿ ಪ್ರಕರಣಗಳೊಂದಿಗೆ ಬೆಂಗಳೂರು ಎರಡನೇ ಸ್ಥಾನದಲ್ಲಿದ್ದರೆ, ದೆಹಲಿಯಲ್ಲಿ ಮೂರು ಪ್ರಕರಣಗಳು ವರದಿಯಾಗಿವೆ.
ಐಟಿ ಹಬ್ ಎಂದು ಕರೆಯಲ್ಪಡುವ ಬೆಂಗಳೂರು ಸೈಬರ್ ಅಪರಾಧಗಳ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ವರದಿ ಪ್ರಕಾರ, ಅಶ್ಲೀಲ ವಿಚಾರಗಳ ಪ್ರಕಟಣೆ ಮತ್ತು ಪ್ರಸಾರವನ್ನು ಒಳಗೊಂಡ 73 ಪ್ರಕರಣಗಳು ವರದಿಯಾಗಿವೆ.
Post a Comment