ಯಾದಗಿರಿ ಜಿಲ್ಲೆಯಿಂದ ಪಾಕಿಸ್ತಾನಕ್ಕೆ ಉಪಗ್ರಹ ದೂರವಾಣಿ ಕರೆ; ಕೇಂದ್ರ ಗುಪ್ತಚರ ಸಂಸ್ಥೆಗಳಿಂದ ಪತ್ತೆ

 ಯಾದಗಿರಿ ಜಿಲ್ಲೆಯ ಗ್ರಾಮವೊಂದರಿಂದ ಸ್ಯಾಟಲೈಟ್ ಫೋನ್ ಮೂಲಕ ಪಾಕಿಸ್ತಾನಕ್ಕೆ ಮಾಡಿದ ಕರೆಯನ್ನು ಕೇಂದ್ರ ಗುಪ್ತಚರ ಸಂಸ್ಥೆಗಳು ಪತ್ತೆಹಚ್ಚಿವೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ. ಸೆಪ್ಟೆಂಬರ್ 17ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಶೆಳ್ಳಗಿ ಗ್ರಾಮದ ಜಮೀನೊಂದರಿಂದ ಕರೆ ಮಾಡಲಾಗಿತ್ತು.

                                                     ಪ್ರಾತಿನಿಧಿಕ ಚಿತ್ರ

Posted By : Rekha.M
Source : Online Desk

ಯಾದಗಿರಿ: ಯಾದಗಿರಿ ಜಿಲ್ಲೆಯ ಗ್ರಾಮವೊಂದರಿಂದ ಸ್ಯಾಟಲೈಟ್ ಫೋನ್ ಮೂಲಕ ಪಾಕಿಸ್ತಾನಕ್ಕೆ ಮಾಡಿದ ಕರೆಯನ್ನು ಕೇಂದ್ರ ಗುಪ್ತಚರ ಸಂಸ್ಥೆಗಳು ಪತ್ತೆಹಚ್ಚಿವೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ.

ಸೆಪ್ಟೆಂಬರ್ 17ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಶೆಳ್ಳಗಿ ಗ್ರಾಮದ ಜಮೀನೊಂದರಿಂದ ಕರೆ ಮಾಡಲಾಗಿತ್ತು.
ಗುಪ್ತಚರ ಸಂಸ್ಥೆಗಳು ಸೆಪ್ಟೆಂಬರ್ 19 ರಂದು ಈ ಮಾಹಿತಿಯನ್ನು ಪಡೆದಿದ್ದು, ಜಿಪಿಎಸ್ ಮೂಲಕ ಅದನ್ನು ಟ್ರ್ಯಾಕ್ ಮಾಡುವ ಮೂಲಕ ಸ್ಥಳಕ್ಕೆ ಭೇಟಿ ನೀಡಿವೆ ಎಂದು ಮೂಲಗಳು ತಿಳಿಸಿವೆ.

ಕಲ್ಯಾಣ-ಕರ್ನಾಟಕ ವಿಮೋಚನಾ ದಿನದಂದು 1948ರಲ್ಲಿ ಹೈದರಾಬಾದ್ ಅನ್ನು ಭಾರತಕ್ಕೆ ವಿಲೀನಗೊಳಿಸಿದ ದಿನದಂದು ಚೀನಾ ನಿರ್ಮಿತ ಉಪಗ್ರಹ ಫೋನ್‌ನಿಂದ ಕರೆ ಮಾಡಲಾಗಿದೆ.

ಈ ಹಿಂದೆ 2021ರಲ್ಲಿ ಯಾದಗಿರಿ ಜಿಲ್ಲೆಯ ಹೆಡಗಿಮುದ್ರಾ ಗ್ರಾಮದಿಂದ ಪಾಕಿಸ್ತಾನಕ್ಕೆ ಉಪಗ್ರಹ ಫೋನ್ ಕರೆ ಮಾಡಿದ್ದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದರು. 

ಮೋಸ್ಟ್ ವಾಂಟೆಡ್ ಉಗ್ರಗಾಮಿಗಳು 2014ರಲ್ಲಿ ಯಾದಗಿರಿಯಲ್ಲಿ ಆಶ್ರಯ ಪಡೆದಿದ್ದರು ಎಂದು ಗುಪ್ತಚರ ಸಂಸ್ಥೆಗಳು ಪತ್ತೆ ಹಚ್ಚಿದ್ದವು. ಆಗ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ತಂಡ ಯಾದಗಿರಿಗೆ ಭೇಟಿ ನೀಡಿತ್ತು.

ಸ್ಟೂಡೆಂಟ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್‌ ಇಂಡಿಯಾ (ಸಿಮಿ) ಜತೆ ಸಂಬಂಧ ಹೊಂದಿರುವ ಭಯೋತ್ಪಾದಕ ಶೇಕ್‌ ಮೆಹಬೂಬ್‌ ಅಲಿಯಾಸ್ ಗುಡ್ಡು ಮಧ್ಯಪ್ರದೇಶದ ಖಾಂಡ್ವಾ ಜೈಲಿನಿಂದ ತಪ್ಪಿಸಿಕೊಂಡು ಯಾದಗಿರಿಯಲ್ಲಿ ಆಶ್ರಯ ಪಡೆದಿದ್ದ ಎಂದು ಮೂಲಗಳು ವಿವರಿಸಿವೆ.


Post a Comment

Previous Post Next Post