ಎಚ್‌ಎಂಟಿ ಲೇಔಟ್‌ನಲ್ಲಿರುವ ಉದ್ಯಮಿಯೊಬ್ಬರ ನಿವಾಸವನ್ನು ಲೂಟಿ ಮಾಡಿದ್ದ ಎಂಟು ನಕಲಿ ಪೊಲೀಸರ ತಂಡವನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಡಿಸೆಂಬರ್ 4 ರಂದು ರಾತ್ರಿ 7.30ರ ಸುಮಾರಿಗೆ ಮನೋಹರ್ ಮನೆಗೆ ನುಗ್ಗಿದ್ದರು. ಪಾಲಿ ಫಿಲ್ಮ್ ಸಂಸ್ಥೆಯ ಮಾಲೀಕ ಮನೋಹರ್ ಘಟನೆ ವೇಳೆ ಮನೆಯಲ್ಲಿ ಇರಲಿಲ್ಲ.
ಸಾಂದರ್ಭಿಕ ಚಿತ್ರ
ಬೆಂಗಳೂರು: ಎಚ್‌ಎಂಟಿ ಲೇಔಟ್‌ನಲ್ಲಿರುವ ಉದ್ಯಮಿಯೊಬ್ಬರ ನಿವಾಸವನ್ನು ಲೂಟಿ ಮಾಡಿದ್ದ ಎಂಟು ನಕಲಿ ಪೊಲೀಸರ ತಂಡವನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಡಿಸೆಂಬರ್ 4 ರಂದು ರಾತ್ರಿ 7.30ರ ಸುಮಾರಿಗೆ ಮನೋಹರ್ ಮನೆಗೆ ನುಗ್ಗಿದ್ದರು. ಪಾಲಿ ಫಿಲ್ಮ್ ಸಂಸ್ಥೆಯ ಮಾಲೀಕ ಮನೋಹರ್ ಘಟನೆ ವೇಳೆ ಮನೆಯಲ್ಲಿ ಇರಲಿಲ್ಲ.
ಉದ್ಯಮಿಯ ಪುತ್ರನ ಮೇಲೆ ದಾಳಿ ನಡೆಸಿ 60 ಲಕ್ಷ ನಗದು, 700 ಗ್ರಾಂ ಚಿನ್ನಾಭರಣ ಸೇರಿದಂತೆ ಒಂದು ಕೋಟಿ ರೂ. ಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು.
ಉದ್ಯಮಿಯ ಪತ್ನಿ ಸುಜಾತಾ ಅವರು ಪೊಲೀಸ್ ಸಮವಸ್ತ್ರದಲ್ಲಿದ್ದ ಆರೋಪಿಗಳನ್ನು ತಮ್ಮ ಪತಿ ಮತ್ತು ಅತ್ತೆಯ ನಡುವಿನ ಕಾನೂನು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮನೆಗೆ ಬಂದಿದ್ದಾರೆ ಎಂದು ಭಾವಿಸಿ ಮನೆಯೊಳಗೆ ಸೇರಿಸಿಕೊಂಡಿದ್ದರು. ಆರೋಪಿಗಳನ್ನು ತಡೆಯಲು ಯತ್ನಿಸಿದ ಆಕೆಯ ಮಗ ರೂಪೇಶ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.
ಸದ್ಯ ರೂಪೇಶ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಲ್ಲದೆ, ಆರೋಪಿಗಳು ಮನೆಯಿಂದ ಓಡಿಹೋಗುವಾಗ ತಮ್ಮ ಗುರುತನ್ನು ಮರೆಮಾಚಲು ಡಿಜಿಟಲ್ ವಿಡಿಯೋ ರೆಕಾರ್ಡರ್ ಅನ್ನು ಕಿತ್ತುಕೊಂಡಿದ್ದರು. ಪೀಣ್ಯ ಪೊಲೀಸರು ಕಳವು ಮಾಡಿದ ವಸ್ತುಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆರೋಪಿಗಳನ್ನು ವಿವಿಧೆಡೆಯಿಂದ ಬಂಧಿಸಲಾಗಿದೆ. ಎಲ್ಲ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ.
Post a Comment