ಬೆದರಿಕೆಗಳಿಗೆ ಜಗ್ಗದ ರಾಮ ಭಕ್ತೆ: ಮುಂಬೈಯಿಂದ ಅಯೋಧ್ಯೆಗೆ ಮುಸ್ಲಿಂ ಯುವತಿಯ 1,425 ಕಿಮೀ ಪಾದಯಾತ್ರೆ!

 ತಮ್ಮ ಧಾರ್ಮಿಕ ನಂಬಿಕೆಗಾಗಿ ಸಾವಿರಾರು ಜನರು ಒಂದಿಲ್ಲೊಂದು ಪವಿತ್ರ ಕ್ಷೇತ್ರಕ್ಕೆ ಯಾತ್ರೆ ತೆರಳುತ್ತಾರೆ. ಆದರೆ ಶ್ರೀರಾಮನ ಭಕ್ತೆಯಾದ ಮುಸ್ಲಿಂ ಮಹಿಳೆಯೊಬ್ಬರು, ಮಹಾರಾಷ್ಟ್ರದಿಂದ ಅಯೋಧ್ಯೆಗೆ ಪಾದಯಾತ್ರೆ ಆರಂಭಿಸುವ ಮೂಲಕ ಧರ್ಮದ ಕಟ್ಟಳೆಗಳನ್ನು ಮೀರಿದ ಭಕ್ತಿ ಪ್ರದರ್ಶಿಸಿದ್ದಾರೆ.

                                           ಅಯೋಧ್ಯೆಗೆ ಮುಸ್ಲಿಂ ಯುವತಿ ಪಾದಯಾತ್ರೆ

Posted By :Rekha.M
Source : Online Desk

ನವದೆಹಲಿ: ತಮ್ಮ ಧಾರ್ಮಿಕ ನಂಬಿಕೆಗಾಗಿ ಸಾವಿರಾರು ಜನರು ಒಂದಿಲ್ಲೊಂದು ಪವಿತ್ರ ಕ್ಷೇತ್ರಕ್ಕೆ ಯಾತ್ರೆ ತೆರಳುತ್ತಾರೆ. ಆದರೆ ಶ್ರೀರಾಮನ ಭಕ್ತೆಯಾದ ಮುಸ್ಲಿಂ ಮಹಿಳೆಯೊಬ್ಬರು, ಮಹಾರಾಷ್ಟ್ರದಿಂದ ಅಯೋಧ್ಯೆಗೆ ಪಾದಯಾತ್ರೆ ಆರಂಭಿಸುವ ಮೂಲಕ ಧರ್ಮದ ಕಟ್ಟಳೆಗಳನ್ನು ಮೀರಿದ ಭಕ್ತಿ ಪ್ರದರ್ಶಿಸಿದ್ದಾರೆ.

ಮುಸ್ಲಿಂ ಯುವತಿ ಶಬನಮ್ ಮುಂಬೈನಿಂದ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದಾರೆ. ತನ್ನ ಸಹಚರರಾದ ರಮಣ್ ರಾಜ್ ಶರ್ಮಾ ಮತ್ತು ವಿನೀತ್ ಪಾಂಡೆ ಜೊತೆಯಲ್ಲಿ ಶಬನಮ್ 1,425 ಕಿಲೋಮೀಟರ್‌ ಕಾಲ್ನಡಿಗೆ ಮೂಲಕವೇ ಅಯೋಧ್ಯೆ ತಲುಪಲು ಹೊರಟಿದ್ದಾರೆ.

ಶಬನಮ್ ಮುಸ್ಲಿಂ ಧರ್ಮೀಯರಾಗಿದ್ದರೂ, ಭಗವಾನ್ ರಾಮನ ಮೇಲೆ ಅಚಲ ಭಕ್ತಿ ಹೊಂದಿದ್ದಾರೆ. ರಾಮನನ್ನು ಪೂಜಿಸಲು ಒಬ್ಬ ಹಿಂದೂ ಆಗುವ ಅಗತ್ಯವಿಲ್ಲ ಎಂಬ ಸಂದೇಶವನ್ನು ಶಬನಮ್ ಸಾರಿದ್ದಾರೆ. ಉತ್ತಮ ಮಾನವನಾಗಿರುವುದು ಮುಖ್ಯ. ಈಗ ಶಬನಮ್ ಮಧ್ಯಪ್ರದೇಶದ ಸಿಂಧವಾವನ್ನು ತಲುಪಿದ್ದಾರೆ. ಪ್ರತಿದಿನ 25-30 ಕಿಲೋಮೀಟರ್ ಪಾದಯಾತ್ರೆ ಮಾಡುತ್ತಿದ್ದಾರೆ.

ಸುದೀರ್ಘ ಯಾತ್ರೆಯಿಂದ ಬರುವ ಆಯಾಸದ ಹೊರತಾಗಿಯೂ, ಮೂವರು ಯುವಜನರು ರಾಮನ ಮೇಲಿನ ಭಕ್ತಿ ತಮ್ಮನ್ನು ಮುಂದುವರಿಸುತ್ತಿದೆ ಎಂದು ಹೇಳುತ್ತಾರೆ. ಈ ಮೂವರು ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದ್ದಾರೆ.

ರಾಮನ ಆರಾಧನೆಯು ಯಾವುದೇ ನಿರ್ದಿಷ್ಟ ಧರ್ಮ ಅಥವಾ ಪ್ರದೇಶಕ್ಕೆ ಸೀಮಿತವಾಗಿಲ್ಲ. ಇದು ಗಡಿಗಳನ್ನು ಮೀರಿದೆ ಮತ್ತು ಇಡೀ ಜಗತ್ತನ್ನು ಒಳಗೊಳ್ಳುವ ಸುಸಮಯವಾಗಿದೆ. ಭಗವಾನ್ ರಾಮನು ಜಾತಿ ಅಥವಾ ಧರ್ಮವನ್ನು ಮೀರಿ ಎಲ್ಲರಿಗೂ ಸೇರಿದವನು ಎಂದು ಶಬನಮ್ ದೃಢವಾಗಿ ನಂಬಿದ್ದಾರೆ.

ಶಬನಮ್‌ ಯಾತ್ರೆಗೆ ಯಾವುದೇ ಸಮಸ್ಯೆಯಿಲ್ಲ. ಆಕೆಗೆ ಸೂಕ್ತ ಭದ್ರತೆ ಒದಗಿಸುವುದರ ಜೊತೆಗೆ, ಊಟ ಮತ್ತು ವಸತಿ ವ್ಯವಸ್ಥೆಯಲ್ಲಿಯೂ ಪೊಲೀಸರು ಪ್ರಮುಖ ಪಾತ್ರ ವಹಿಸಿದ್ದಾರೆ. ಮಹಾರಾಷ್ಟ್ರದ ಸೂಕ್ಷ್ಮ ಪ್ರದೇಶಗಳ ಮೂಲಕ ಹಾದುಹೋಗುವಾಗ ಪೊಲೀಸರು ಅಗತ್ಯ ರಕ್ಷಣೆ ನೀಡಿದ್ದಾರೆ.

ಶಬನಮ್‌ ನಡೆಗೆ ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಅದ್ಯಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಶಬನಮ್‌ ದೃಢವಾಗಿದ್ದಾರೆ. ಇದರ ಹೊರತಾಗಿಯೂ, ಅನೇಕ ಮುಸ್ಲಿಮರು ‘ಜೈ ಶ್ರೀರಾಮ್‌’ ಎಂದು ಕಾಮೆಂಟ್‌ ಹಾಕುವ ಮೂಲಕ ಶಬನಮ್‌ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಶ್ಲಾಘನೆಯ ಜತೆಗೆ ತೀವ್ರ ಮಟ್ಟದಲ್ಲಿ ದ್ವೇಷ ಹಾಗೂ ನಿಂದನೆಗಳನ್ನೂ ಅವರು ಸ್ವೀಕರಿಸುತ್ತಿದ್ದಾರೆ. ಆದರೆ ಈ ಬೆದರಿಕೆಗಳಿಂದ ಅವರು ಹಿಂಜರಿದಿಲ್ಲ. ತಮ್ಮ ಪಯಣದ ವಿಚಾರದಲ್ಲಿ ಅವರು ಉತ್ಸಾಹ ಕುಂದಿಲ್ಲ.


Post a Comment

Previous Post Next Post