ಶಿವಮೊಗ್ಗ: ಕನ್ನ ಕಳುವು ಪ್ರಕರಣ; ರೂ 13,87,000/- ಮೌಲ್ಯದ ಮಾಲನ್ನು ಅಮಾನತ್ತು ಪಡಿಸಿಕೊಂಡ ತನಿಖಾ ತಂಡ.

 ಶಿವಮೊಗ್ಗ-ಎ ಉಪ ವಿಭಾಗದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಕನ್ನ ಕಳುವು ಪ್ರಕರಣಗಳಲ್ಲಿ ಕಳುವಾದ ಮಾಲು ಹಾಗೂ ಆರೋಪಿತರ ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ,  ಶ್ರೀ ಬಾಲರಾಜ್, ಬಿ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ - ಎ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ, ತುಂಗಾನಗರ ಪೊಲೀಸ್ ಠಾಣೆಯ ಶ್ರೀ ಮಂಜುನಾಥ್.ಬಿ. ಪಿಐ ರವರ ನೇತೃತ್ವದ, ಶ್ರೀ ಶಿವಪ್ರಸಾದ್ ವಿ. ಪಿಎಸ್ಐ, ಶ್ರೀ ಮಂಜುನಾಥ್ ಪಿ.ಎಸ್.ಐ, ಶ್ರೀ ರಘುವಿರ್ ಎಮ್. ಪಿ.ಎಸ್.ಐ. ಶ್ರೀ ಕುಮಾರ ಕೂರಗುಂದ ಪಿ.ಎಸ್.ಐ. ಶ್ರೀ ದೂದ್ಯಾನಾಯ್ಕ ಪಿ.ಎಸ್.ಐ, ಶ್ರೀ ಮನೋಹರ್ ಎ.ಎಸ್.ಐ. ಹಾಗೂ ಸಿಬ್ಬಂದಿಯವರಾದ ಹೆಚ್ಸಿ ಕಿರಣ್ ಮೋರೆ, ಅರುಣ್ ಕುಮಾರ, ಮೋಹನ್ ಕುಮಾರ್ ಮತ್ತು ಸಿಪಿಸಿ ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ, ಲಂಕೇಶ್ ಕುಮಾರ್, ಕಾಂತರಾಜ್, ಅರಿಹಂತ ಶಿರಹಟ್ಟಿ, ಹರೀಶ್ ಎಮ್.ಜಿ. ಹಾಗೂ ಚೇತನ ರವರಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿರುತ್ತದೆ. 


  ಸದರಿ ತನಿಖಾ ತಂಡವು ದಿನಾಂಕಃ 20-12-2023  ರಂದು ಆರೋಪಿತರಾದ 1) ಸಂತೋಷ @ ಎಮ್ಮೆ ಸಂತೋಷ, 36 ವರ್ಷ, ಮಾಗಡಿ ರಸ್ತೆ ಬೆಂಗಳೂರು, ಸ್ವಂತ ವಿಳಾಸ ಶಿವಪ್ಪ ಬಡಾವಣೆ, ಅಲ್ಲೂರು ರಸ್ತೆ ಪಿರಿಯಾಪಟ್ಟಣ ಮೈಸೂರು ಜಿಲ್ಲೆ, 2) ಮಹಮದ್ ನದ್ದಿಮ್ @ ನದ್ದಿಮ್ @ ನದ್ದು, 30 ವರ್ಷ, ಅಶೋಕ ನಗರ, ಶಿವಮೊಗ್ಗ, 3) ಇಮ್ರಾನ್, 32 ವರ್ಷ, ಅಶೋಕನಗರ, ಶಿವಮೊಗ್ಗ ಮತ್ತು 4) ಸುರೇಶ್ ಕೆ, 43 ವರ್ಷ, ಬೊಮ್ಮನಕಟ್ಟೆ ಆಶ್ರಯ ಬಡಾವಣೆ, ಶಿವಮೊಗ್ಗ ರವರುಗಳನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ವರದಿಯಾದ  05  ಸ್ವತ್ತು ಕಳವು ಪ್ರಕರಣಗಳಾದ 1) ಗುನ್ನೆ ಸಂಖ್ಯೆ 128/2023, 2) ಗುನ್ನೆ ಸಂಖ್ಯೆ 175/2023, 3) ಗುನ್ನೆ ಸಂಖ್ಯೆ 412/2023, 4) ಗುನ್ನೆ ಸಂಖ್ಯೆ 462/2023 ಮತ್ತು 5) ಗುನ್ನೆ ಸಂಖ್ಯೆ 483/2023 ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 12,65,000/-  ರೂಗಳ 230  ಗ್ರಾಂ ತೂಕದ ಬಂಗಾರದ ಆಭರಣಗಳು, ಅಂದಾಜು ಮೌಲ್ಯ 72,000/-  ರೂಗಳ 1 ಕೆಜಿ 200  ಗ್ರಾಂ ಬೆಳ್ಳಿ ಆಭರಣಗಳು, ರೂ 25,140/-  ನಗದು ಹಣ, ಅಂದಾಜು ಮೌಲ್ಯ 10,000/-  ರೂಗಳ ಕೃತ್ಯಕ್ಕೆ ಬಳಸಿದ ದ್ವಿ ಚಕ್ರ ವಾಹನ ಸೇರಿ ಒಟ್ಟು ರೂ 13,87,000/- ಮೌಲ್ಯದ ಮಾಲನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ. 
  ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ  ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

Post a Comment

Previous Post Next Post