ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರಕ್ಕೆ ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರ ದಂಡೇ ಹರಿದುಬರುತ್ತದೆ. ಇದೀಗ ಮುರುಡೇಶ್ವರದಲ್ಲಿ ಪ್ರವಾಸಿಗರಿಗೆ ಸ್ಕೂಬಾ ಡೈವಿಂಗ್ ಮತ್ತು ಇತರ ಕಾರ್ಯಕ್ರಮಗಳ ಜೊತೆಗೆ ತೇಲುವ ಸೇತುವೆಯನ್ನು (Floating bridge) ನಿರ್ಮಿಸಲಾಗಿದೆ.
ಮುರುಡೇಶ್ವರದಲ್ಲಿ ನಿರ್ಮಾಣವಾಗಿರುವ ತೇಲುವ ಸೇತುವೆಮುರುಡೇಶ್ವರ: ವೀಕೆಂಡ್ ಅಥವಾ ರಜಾ ದಿನಗಳು ಬಂತೆಂದರೆ ಸಾಕು ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ಸ್ಥಳಗಳಿಗೆ ಪ್ರವಾಸಿಗರು ಲಗ್ಗೆ ಇಡುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರಕ್ಕೆ ಸಹ ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರ ದಂಡೇ ಹರಿದುಬರುತ್ತದೆ. ಇದೀಗ ಮುರುಡೇಶ್ವರದಲ್ಲಿ ಪ್ರವಾಸಿಗರಿಗೆ ಸ್ಕೂಬಾ ಡೈವಿಂಗ್ ಮತ್ತು ಇತರ ಕಾರ್ಯಕ್ರಮಗಳ ಜೊತೆಗೆ ತೇಲುವ ಸೇತುವೆಯನ್ನು (Floating bridge) ನಿರ್ಮಿಸಲಾಗಿದೆ.
ನೀರಿನಲ್ಲಿ ಮುಳುಗುವ ಭಯದಿಂದ ಅನೇಕ ಪ್ರವಾಸಿಗರು ಆದಷ್ಟು ನೀರಿನಿಂದ ದೂರವೇ ಉಳಿಯುತ್ತಾರೆ. ಪ್ರವಾಸಿಗರು ಕೊಚ್ಚಿಕೊಂಡು ಹೋದ ಹಲವಾರು ನಿದರ್ಶನಗಳೂ ಇವೆ. ಅದರೆ, ಇದೆಲ್ಲದರ ಮಧ್ಯೆಯೇ ಪ್ರವಾಸಿಗರಿಗೆ ಉತ್ತಮ ಅನುಭವವನ್ನು ಒದಗಿಸಲೆಂದು ತೇಲುವ ಸೇತುವೆ ನಿರ್ಮಾಣ ಮಾಡಲಾಗಿದ್ದು, ಈ ಮೂಲಕ ಪ್ರವಾಸಿಗರು ಸಮುದ್ರದಲ್ಲಿ ಹೆಜ್ಜೆ ಹಾಕಬಹುದಾಗಿದೆ.
ರಾಜ್ಯದಲ್ಲಿಯೇ ಅತಿ ಉದ್ಧದ ತೂಗು ಸೇತುವೆ ಇದೀಗ ಮುರುಡೇಶ್ವರದಲ್ಲಿ ನಿರ್ಮಾಣಗೊಂಡಿದೆ. 130 ಮೀಟರ್ ಉದ್ದದ ಈ ಸೇತುವೆಯು ಅರಬ್ಬಿ ಸಮುದ್ರದಲ್ಲಿ ತೇಲುತ್ತದೆ ಮತ್ತು ಸಮುದ್ರದ ಮಧ್ಯದಿಂದ ಬೃಹತ್ ಶಿವನ ಪ್ರತಿಮೆ ಮತ್ತು ಮುರುಡೇಶ್ವರ ದೇವಾಲಯವನ್ನು ಕಾಣುವ ಅವಕಾಶವನ್ನು ನೀಡುತ್ತದೆ.
'ದೇಶದಲ್ಲಿ ಇದು ಮೂರನೇ ತೇಲುವ ಸೇತುವೆಯಾಗಿದ್ದು, ಇನ್ನೆರಡು ಮಲ್ಪೆ ಮತ್ತು ಕೇರಳದಲ್ಲಿವೆ' ಎಂದು ಓಷನ್ ಅಡ್ವೆಂಚರ್‌ನ ಸಂಸ್ಥಾಪಕ ಮತ್ತು ಮುಖ್ಯಸ್ಥ ಗಣೇಶ ಹರಿಕಂತ್ರ ಟಿಎನ್ಐಇಗೆ ತಿಳಿಸಿದರು.
'ಈ ಸೇತುವೆ ನಿರ್ಮಾಣಕ್ಕೆ ಮೂರು ವರ್ಷಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತು. ಆದರೆ, ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ವಿಳಂಬವಾಯಿತು. ನಾವು 2019ರಲ್ಲಿ ತೇಲುವ ಸೇತುವೆ ಬಗ್ಗೆ ಯೋಚಿಸಿದ್ದೆವು. ಆದರೆ, ಕೋವಿಡ್-19 ಉಲ್ಬಣವು ಈ ಆಲೋಚನೆಯನ್ನು ಕೈಬಿಡುವಂತೆ ಮಾಡಿತ್ತು. ಇದೀಗ, ದೋಣಿಗಳಲ್ಲಿ ಸಮುದ್ರಕ್ಕೆ ಹೋಗಲು ಹೆದರುವವರಿಗೆ ತೇಲುವ ಸೇತುವೆ ನೆರವಾಗಲಿದೆ' ಎಂದು ಗಣೇಶ್ ಹೇಳಿದರು.
'ಸೇತುವೆಯು ಸಮುದ್ರ ಮತ್ತು ದೇವಾಲಯದ ಸ್ಪಷ್ಟ ನೋಟವನ್ನು ಒದಗಿಸುವ ದೃಷ್ಟಿಕೋನವನ್ನು ಹೊಂದಿದೆ. ಸೂರ್ಯಾಸ್ತವನ್ನು ನೋಡಲು ಬಯಸುವವರು ಇದನ್ನು ಬಳಸಿ ನೋಡಬಹುದು. ಈ ಸೇತುವೆಯು ಏಕಕಾಲದಲ್ಲಿ 110 ಜನರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದ್ದು, 100 ಪ್ರವಾಸಿಗರೊಂದಿಗೆ 10 ಜೀವರಕ್ಷಕರು ಇರುತ್ತಾರೆ. ಇದು ಸರ್ವಋತುವಿಗೂ ಹೊಂದುವ ಸೇತುವೆಯಾಗಿರುವುದರಿಂದ ಸಮುದ್ರದ ಪ್ರಕ್ಷುಬ್ಧತೆಯ ದಿನಗಳಲ್ಲಿಯೂ ಇದು ಬೇರ್ಪಡದೆ ಉಳಿಯುತ್ತದೆ' ಎಂದು ಗಣೇಶ್ ವಿವರಿಸಿದರು.
Post a Comment