ನಂದಿನಿ ಹಾಲಿನ ದರ ಹೆಚ್ಚಿಸಲು ಹಾಲು ಒಕ್ಕೂಟಗಳು ಸರ್ಕಾರ ಮುಂದೆ ಪ್ರಸ್ತಾವ ಸಲ್ಲಿಸಿದ್ದು, ಹೊಸ ವರ್ಷದ ಆರಂಭದಲ್ಲಿ ಹಾಲು-ಮೊಸರಿನ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ...
ಸಂಗ್ರಹ ಚಿತ್ರ
ಪಶುಸಂಗೋಪನೆ ಸಚಿವ ವೆಂಕಟೇಶ್ ಅವರು ಪ್ರತಿಕ್ರಿಯೆ ನೀಡಿ, ಹಾಲು ಒಕ್ಕೂಟಗಳು ತಮಗೆ ನಷ್ಟವಾಗುತ್ತಿರುವ ಕಾರಣ ದರ ಪರಿಷ್ಕರಿಸಬೇಕು ಎಂದು ಪ್ರಸ್ತಾವ ಸಲ್ಲಿಸಿವೆ. ಆದರೆ ಸದ್ಯ ದರ ಏರಿಸುವ ಪ್ರಸ್ತಾವ ಸರಕಾರದ ಮುಂದಿಲ್ಲ ಎಂದು ಹೇಳಿದರು.
ಇದೇ ವೇಳೆ ಅನ್ಯ ರಾಜ್ಯದ ಹಾಲಿನ ದರ ಹಾಗೂ ಕರ್ನಾಟಕದ ಹಾಲಿನ ದರಗಳ ನಡುವಿನ ವ್ಯತ್ಯಾಸದ ಅಂಕಿ ಅಂಶವನ್ನು ಸುದ್ದಿಗಾರರ ಮುಂದೆ ಪ್ರದರ್ಶಿಸಿದ ಅವರು, ಹಾಲಿನ ದರ ಏರಿಸುವಂತೆ ರೈತರ ಒತ್ತಡವೂ ಇದೆ ಎನ್ನುವ ಮೂಲಕ ಪರೋಕ್ಷವಾಗಿ ಮುಂದಿನ ದಿನಗಳಲ್ಲಿ ದರ ಏರಿಸುವ ಸುಳಿವು ನೀಡಿದರು.
ಬೇರೆ ರಾಜ್ಯಗಳಲ್ಲಿ ಹಾಲಿನ ದರಕ್ಕೆ ಹೋಲಿಸಿದರೆ ನಂದಿನಿ ಹಾಲಿನ ದರ ಕಡಿಮೆ ಇದೆ. ನಂದಿನಿ ಹಾಲನ್ನು ಲೀಟರ್ ಗೆ 42 ರೂ.ಗೆ ಮಾರಾಟ ಮಾಡುತ್ತಿದ್ದು, ಬೇರೆ ರಾಜ್ಯಗಳಲ್ಲಿ ಅದರಲ್ಲೂ ವಿಶೇಷವಾಗಿ ನೆರೆಯ ರಾಜ್ಯಗಳಲ್ಲಿ ಲೀಟರ್ ಗೆ 48ರಿಂದ 51 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಹಾಲಿನ ದರವನ್ನು ಹೆಚ್ಚಿಸುವಂತೆ ಕೆಎಂಎಫ್ ಸದಸ್ಯರು, ರೈತರು ಮತ್ತು ಇತರ ಪಾಲುದಾರರಿಂದ ಒತ್ತಡವಿದೆ ಎಂದು ಹೇಳಿದರು.
Post a Comment