ಟೆಂಟಲ್ಲಿ ಬ್ಲೂ ಫಿಲಂ ತೋರಿಸಿಕೊಂಡು ಜೀವನ ಮಾಡಿಕೊಂಡು ಬಂದವನು: ಎಚ್.ಡಿ ಕುಮಾರಸ್ವಾಮಿ ವ್ಯಂಗ್ಯ- ಡಿಕೆಶಿ ತಿರುಗೇಟು!

 ಟೆಂಟಲ್ಲಿ ಬ್ಲೂ ಫಿಲಂ ತೋರಿಸಿಕೊಂಡು ಜೀವನ ಮಾಡಿಕೊಂಡು ಬಂದವನು. ಆ ಮನಸ್ಥಿತಿಯಲ್ಲಿ ಅವನಿಗೆ ಇನ್ನೇನು ಬರುತ್ತದೆ. ಆತ ಆ ರೀತಿ ಪೋಸ್ಟರ್ ಪ್ರಿಂಟ್‌ ಮಾಡಿಸುವುದು ಬಿಟ್ಟು ದೇವರದ್ದು ಹಾಕಿಸುತ್ತಾನಾ…?

                                         ಡಿ.ಕೆ ಶಿವಕುಮಾರ್ ಮತ್ತು ಎಚ್.ಡಿ ಕುಮಾರಸ್ವಾಮಿ

Posted By : Rekha.M
Source : Online Desk

ಬೆಂಗಳೂರು:  ನಾನು ಬ್ಲೂ ಫಿಲಂ ಪ್ರದರ್ಶನ ಮಾಡುತ್ತಿದ್ದೆ ಎಂದು ಆರೋಪ ಮಾಡಿರುವ ಕುಮಾರಣ್ಣ ಬುದ್ದಿ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ನಾನು ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಟೂರಿಂಗ್ ಟಾಕೀಸ್‌ಗಳನ್ನು ಇಟ್ಟಿದ್ದೆ. ಒಂದಲ್ಲ ಮೂರ್ನಾಲ್ಕು ಕಡೆ ಟೆಂಟ್‌ಗಳನ್ನು ಇಟ್ಟಿದ್ದೆ. ದೊಡ್ಡಆಲಹಳ್ಳಿ, ಹಾರೋಬೆಲೆ, ಕೋಡಿಹಳ್ಳಿಗಳಲ್ಲಿ ನಡೆಸುತ್ತಿದ್ದೆ. ಹುಣಸೇಹಳ್ಳಿಯಲ್ಲಿ ಈಗಲೂ ಟೆಂಟ್ ಇದೆ. ಈ ಊರುಗಳಿಗೆ ಹೋಗಿ ಮಾಧ್ಯಮದವರೇ ಸಮೀಕ್ಷೆ ನಡೆಸಿ, ನಾನು ಯಾವ ಚಿತ್ರಗಳ ಪ್ರದರ್ಶನ ಮಾಡಿಸುತ್ತಿದ್ದೆ ಎಂದು ಜನರ ಬಳಿ ಕೇಳಿ. ಕುಮಾರಸ್ವಾಮಿ ಅವರಿಗೆ ನೀವೇ ಉತ್ತರಿಸಿ ಎಂದರು. ಅವರು ದೊಡ್ಡವರು. ಏನೇ ಹೇಳಿದರೂ ನಾನು ವೈಯಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ. ಅವರು ಬಳಸುತ್ತಾರೆ ಎಂದು ನಾನು ಏಕವಚನ ಬಳಸುವುದಿಲ್ಲ. ಅದು ಅವರ ಸಂಸ್ಕೃತಿ ಎಂದರು.

ಟೆಂಟಲ್ಲಿ ಬ್ಲೂ ಫಿಲಂ ತೋರಿಸಿಕೊಂಡು ಜೀವನ ಮಾಡಿಕೊಂಡು ಬಂದವನು. ಆ ಮನಸ್ಥಿತಿಯಲ್ಲಿ ಅವನಿಗೆ ಇನ್ನೇನು ಬರುತ್ತದೆ. ಆತ ಆ ರೀತಿ ಪೋಸ್ಟರ್ ಪ್ರಿಂಟ್‌ ಮಾಡಿಸುವುದು ಬಿಟ್ಟು ದೇವರದ್ದು ಹಾಕಿಸುತ್ತಾನಾ…? ದೊಡ್ಡ ಆಲದಹಳ್ಳಿಯ ಸಾತನೂರಿನಲ್ಲಿ 2 ಟೆಂಟ್ ಇದ್ವಲ್ಲಾ, ಮಳಿಯಾಳಿ ಸಿನಿಮಾಗೆ ಕಟ್ಟಿಂಗ್ ಸೇರಿಸುತ್ತಿದ್ದರಲ್ಲ. ಅದನ್ನೇ ಮುಂದುವರೆಸುತ್ತಿದ್ದಾರೆ ಅವರು ಬಂದಿರುವುದೇ ಆ ಸಂಸ್ಕೃತಿಯಲ್ಲಿ. ಅಂತವರನ್ನ ಈ ರಾಜ್ಯದ ಜನ ಆಯ್ಕೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ನವರು ಅಂತವರಿಗೆ ಅಧಿಕಾರ ನೀಡಿದ್ದಾರೆ ಎಂದು ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದರು.

ಜೆಡಿಎಸ್‌ ಕಚೇರಿ ಮೇಲೆ ತಮ್ಮ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್‌ ಅಂಟಿಸಿರುವುದರ ಸಂಬಂಧ ಪ್ರತಿಕ್ರಿಯಿಸಿದ್ದ ಅವರು, ದೊಡ್ಡ ಆಲದಹಳ್ಳಿಯ ಸಾತನೂರಿನಲ್ಲಿ 2 ಟೆಂಟ್ ಇದ್ದವಲ್ಲ, ಮಲಯಾಳಿ ಸಿನಿಮಾಗೆ ಕಟಿಂಗ್ ಸೇರಿಸೋರಲ್ಲ, ನಾನು ಆ ಜೀವನ ಮಾಡಿಕೊಂಡು ಬಂದಿಲ್ಲ. ಇಂದು ಅಂತವರಿಗೆ ಅಧಿಕಾರ ನೀಡಿದ್ದಾರೆ. ಅವರ ಜೀವನ, ಸಂಸ್ಕೃತಿ, ಬದುಕೇ ಅಷ್ಟು… ಏನು ಮಾಡೋದು… ಎಂದು ಕಿಡಿಕಾರಿದ್ದರು, ಎಚ್ ಡಿ ಕುಮಾರಸ್ವಾಮಿ ಹೇಳಿಕೆ ಶಿವಕುಮಾರ್ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.


Post a Comment

Previous Post Next Post