ಈಗಲಾದರೂ ಕಣ್ಣಬಿಡ್ರಪ್ಪಾ… ನೀರು ಸೋರಿಹೋಗ್ತಾಇದೆ…

 ಕುಡಿಯುವ ನೀರು ಮತ್ತು ಒಳಚರಂಡಿ ನಿಗಮಕ್ಕೆ ಜನ ಛೀ… ಥೂ… ಎಂದು ಉಗಿಯುವ ವರೆಗೆ ಬುದ್ದಿಕಲಿಯುವ ಹಾಗೆ ಕಾಣೋದಿಲ್ಲ. ಎರಡು ಮೂರು ದಿನದಿಂದ ನೀರು ಬರ್ತಾ ಇಲ್ಲ ನೀರು ಬರುವ ಹಾಗೆ ಮಾಡ್ರಪ್ಪ ಎಂದು ಕೇಳಿಕೊಂಡ್ರು ಗಮನ ಹರಿಸದ ನಿಗಮ ಈ ರೀತಿ ನೀರು ವೇಸ್ಟ್ ಆಗ್ತಾ ಇದ್ರೆ ನಿರ್ಲಕ್ಷ್ಯ ತೋರಿದ್ದಾರೆ ಓರುತ್ತಿದ್ದಾರೆ.


ಶಿಕ್ಷಣ ಇಲಾಖೆ, ಕುಡಿಯುವ ನೀರಿನ ನಿಗಮ, ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಜನ ಯಾವಾಗ ರೊಚ್ಚಿಗೆದ್ದು ನಿಲ್ತಾರೋ ದೇವರಿಗೆ ಗೊತ್ತು. ಗಾರ್ಡನ್ ಏರಿಯಾದ 3 ನೇ ತಿರುವಿನಲ್ಲಿ ಮೆಸ್ಕಾಂ ಜಂಕ್ಷನ್ ಬಾಕ್ಸ್ ಬಳಿ ಕಳೆದ ಮೂರು ದಿನಗಳಿಂದ ಕಾರಂಜಿಯಾಗಿ ಹರಿಯುತ್ತಿರುವ ಈ ನೀರು ವೇಸ್ಟ್ ಆಗ್ತಾ ಇದೆ. ಆದರೂ ನಿಗಮ ಸಂಬಂಧವಿಲ್ಲದಂತೆ ಕಣ್ಣು ಮುಚ್ಚಿಕೊಂಡಿದೆ. ಬೆಂಗಳೂರಿನ ರೀತಿ ಯಾವುದಾದರೂ ಅನಾಹುತ ಸಂಭವಿಸಿ ಬಲಿ ಪಡೆಯುವರೆಗೂ ಜಿಲ್ಲಾಡಳಿತ ನಿದ್ರೆಯಿಂದ ಎಚ್ಚರಿಕೆ ವಾಗುವ ಹಾಗೆ ಕಾಣ್ತಾಯಿಲ್ಲ.

ಇದೇ ಲೈನ್ ನ ನವರತ್ನ ಬಾರ್ ಅಂಡ್ ರೆಸ್ಟೋರೆಂಟ್ ಬಳಿಯ ಕ್ಯಾಂಟೀನ್ ಗೆ  ಕಳೆದ 6 ತಿಂಗಳಿಂದ ನೀರು ಬರ್ತಾಯಿಲ್ಲ ಎಂದು ಆ ಮಾಲೀಕ ಕೇಳಿಕೊಂಡರೂ ನಿಮಗದ ಅಧಿಕಾರಿಗಳು  ಗಮನ ಹರಿಸುತ್ತಿಲ್ಲ. ಕ್ಯಾಂಟೀನ್ ಗೆ ನೀರು ಹರಿಸಿದರೆ ಸರ್ಕಾರಕ್ಕಾದರೂ ಬೊಕ್ಕಸ ತುಂಬಲಿದೆ. ಆದರೆ ಅದರ ಬಗ್ಗೆಯೂ ಅಸಡ್ಡೆ ತೋರಲಾಗುತ್ತದೆ. ಹೀಗೆ ವೇಸ್ಟ್ ಆದರೆ ಅಧಿಕಾರಿಗಳಿಗೆ ನೆಮ್ಮದಿ ಸಿಗುತ್ತೆ ಅನಿಸುತ್ತೆ.

ಹೋಗಲಿ! ಈ ಕಾರಂಜಿ ಬಳಿ ಲೈಟಿಂಗ್ ಬಿಟ್ಟರೆ ಯಾವ ಕೆಆರ್ ಎಸ್ ಗೂ ಕಮ್ಮಿ ಇಲ್ಲದಂತೆ ಕಾಣಿಸುತ್ತೆ. ಇದಾದರೂ ಮಾಡಬಹುದು. ಕ್ರೀಡಾಂಗಣದಲ್ಲಿರುವ ನೀರಿನ ಟ್ಯಾಂಕಿಯಿಂದ‌ ನೀರು ಸೋರಿಹೋಗ್ತಾ ಇದೆ. ಈ ಬಗ್ಗೆ ಗಮನಸಹರಿಸಿ ಕ್ರಮ ಜರುಗಿಸಿ ಎಂದು ಮಲೆನಾಡ ಕೇಸರಿ ಪಡೆ ಮನವಿ ಸಲ್ಲಿಸಿದರೂ ಯಾವ ಕ್ರಮವೂ ಇಲ್ಲ. ಈಗಲೂ ನೀರು ಸೋರ್ತಾ ಇದೆ.

ಬೊಮ್ಮನ್ ಕಟ್ಟೆಯ ಕೆಲ ಬಡಾವಣೆಯ ಮನೆಗಳಿಗೆ ಈಗಲೂ ಕುಡಿಯುವ ನೀರು ಸಿಗ್ತಾಇಲ್ಲ. ಮುಂದೆ ಬರುವ ಬೇಸಿಗೆಯಲ್ಲಿ ಈ ನೀರುಗಳನ್ನ ಕಾಪಾಡಿಕೊಳ್ಳಬೇಕಿದೆ. ಹೀಗೆ ನಿರ್ಲಕ್ಷ್ಯ ತೋರಿದರೆ ಕನಿಷ್ಠವಾದರೂ ಮನಸ್ಸಿಗೆ ನಾಟದೆ ಇರುವುದು ನಮ್ಮ ದೌರ್ಭಾಗ್ಯ. ಯಾವುದೇ‌ ಮುಂಜಾಗ್ರತಾ ಕ್ರಮ ಇಲ್ಲ. ಅಧಿಕಾರಿಗಳ ಈ ನಿರ್ಲಕ್ಷ್ಯತನದಿಂದ ಜನ ಒದ್ದಾಡುವ ಹಾಗಿದೆ. ಇಂತಹ‌ ಅಧಿಕಾರಿಗಳು ಇದ್ದರೆಷ್ಟು ಹೋದರೆಷ್ಟು..?


Post a Comment

Previous Post Next Post