ಶಿವಮೊಗ್ಗ: ಕಾರ್ಮಿಕ ಸಾವು

ಕುಸಿದ ಮಣ್ಣಲ್ಲಿ ಸಿಕ್ಕಿಕೊಂಡಿದ್ದ ಕಾರ್ಮಿಕನನ್ನ ರಕ್ಷಣೆ ಮಾಡಿದರೂ ಯಾವುದೇ ಜೀವ ಉಳಿಸಲು ಸಾಧ್ಯವಾಗಿಲ್ಲ. ಮೆಗ್ಗಾನ್ ನಲ್ಲಿ ಸತೀಶ್ ನಾಯ್ಕನನ್ನು ಪರಿಶೀಲಿಸಿದ ವೈದ್ಯರು ಆತನ ಸಾವನ್ನ ಖಚಿತ ಪಡಿಸಿದ್ದಾರೆ.

ಇಂದು ಬೆಳಿಗ್ಗೆ ಸವಳಂಗ ರಸ್ತೆಯ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮಾಡುತ್ತಿದ್ದ ಸತೀಶ್ ನಾಯ್ಕ್ ಮೇಲೆ ಅಗೆದ ಮಣ್ಣು ಕುಸಿದಿದೆ. ಕುಸಿದ ಮಣ್ಣಿನಲ್ಲಿ ಸಿಲುಕಿಕೊಂಡ ಕಾರ್ಮಿಕನನ್ನ ರಕ್ಷಿಸಲು ಮುಂದಾಗಿ ಜೆಸಿಬಿಯಿಂದ ಮಣ್ಣು ತೆಗೆಯಲು ಮುಂದಾಗಿದ್ದಾರೆ.

ಜೆಸಿಬಿಯಿಂದ ತೆಗೆಯಲು ಹೋಗಿ ಕಾರ್ಮಿಕನ ತಲೆಗೆ ಗಂಭೀರ ಗಾಯವಾಗಿದೆ ಬಲಭಾಗದಲ್ಲಿ ಮೆದುಳು ಹೊರಗೆ ಬಂದಿದೆ. ರಕ್ಷಣೆ ವೇಳೆ ಸತೀಶ್ ಉಸಿರಾಡುವಂತೆ ಕಂಡು ಬಂದ ಕಾರಣ ತಕ್ಷಣ ಆತನನ್ನ ಮೆಗ್ಗಾನ್ ಗೆ ರವಾನಿಸಲಾಗಿದೆ.

ಮೆಗ್ಗಾನ್ ವೈದ್ಯರು ಸತೀಶ್  ಸಾವು ಕಂಡಿದ್ದಾನೆ‌. ಕಾಮಗಾರಿಯ ವೇಳೆ ಯಾವುದೇ ಸುರಕ್ಷತೆ ಇಲ್ಲವೆಂಬ ಆರೋಪ ಕೇಳಿ ಬಂದಿದೆ. ಆಸ್ಪತ್ರೆಯಲ್ಲಿಯೇ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಕಾರ್ಮಿಕ ಸಾವುಕಂಡರು‌ರೈಲ್ವೆ ಮೇಲ್ಸೆತುವೆ ಕಾಮಗಾರಿಯ ಗುತ್ತಿಗೆದಾರರು, ಸೂಪರ್ ವೈಸರ್ ಆಗಲಿ ಯಾರು ಇಲ್ಲವೆಂಬುದು ಅವರ ಸ್ನೇಹಿತ ಹರೀಶ್ ಬೇಸರ ವ್ಯಕ್ತಪಡಿಸಿದ್ದಾರೆ.


Post a Comment

Previous Post Next Post