ಹಲವಾರು ವರ್ಷಗಳ ಹಿಂದೆ ಮಲೆನಾಡು ಭಾಗದಲ್ಲಿ ಗರಿಗೆದರಿದ್ದ ನಕ್ಸಲರ ಚಟುವಟಿಕೆ ಕ್ರಮೇಣ ಪೊಲೀಸ್ ಹಾಗೂ ನಕ್ಸಲ್ ನಿಗ್ರಹ ದಳ ಮತ್ತು ಸ್ಥಳೀಯರ ಪ್ರತಿರೋಧ ದಿಂದ ಸಂಪೂರ್ಣ ಹೇಳು ಹೆಸರಿಲ್ಲದಂತೆ ಆಗಿತ್ತು. ಕೆಲವು ನಕ್ಸಲರು ವಾಸ್ತವ ಪ್ರಪಂಚದ ಸತ್ಯ ಅರ್ಥವಾಗಿ , ಸರ್ಕಾರಕ್ಕೆ ಶರಣಾಗಿ ಸಮಾಜದ ಮುಖ್ಯವಾಹಿನಿಗೆ ಸೇರಿದರು. ಹೋರಾಟ ಒಮ್ಮೆ ಸಾಮಾಜಿಕ ನ್ಯಾಯದ ಹೆಸರಲ್ಲಿ ಅತಿರೇಕದ ಹಾದಿ ತುಳಿದರೆ, ರಕ್ತ ಕ್ರಾಂತಿ ಇಂದ ಎಲ್ಲವನ್ನು ಸರಿಮಾಡಲು ಆಗುವುದಿಲ್ಲ. ಕೊನೆಗೆ ಅನುಭವಿಸುವುದು ಜನ ಸಾಮಾನ್ಯ ರೇ ಹೊರತು, ಅಧೀಕಾರಿಶಾಹಿ ಅಥವಾ ಬಂಡವಾಳಶಾಹಿಗಳು ಆಗಲಿ ಅಥವಾ ರಾಜಕಾರಣಿಗಳು ಅಲ್ಲ. ನಕ್ಸಲರ ಹೋರಾಟದಿಂದ ಮಲೆನಾಡ ಕುಗ್ರಾಮಗಳ ಜನಗಳು, ಪೊಲೀಸರ ಹಾಗೂ ನಕ್ಸಲರ ಮಧ್ಯದಲ್ಲಿ ಸಿಲುಕಿ ಹೈರಾಣಾಗಿ ಹೋಗ್ಗಿದ್ದು, ಇನ್ನೂ ನೆನಪುಗಳು ಮಾಸಿಲ್ಲ, ಅಷ್ಟರೊಳಗೆ ಕೇರಳ ಹಾಗೂ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಗಡಿ ಭಾಗದ ಕುತ್ತ ಹಳ್ಳಿಯ ಐದು k.m ವ್ಯಾಪ್ತಿಯಲ್ಲಿ ಕೇರಳ ರಾಜ್ಯದ ಗಡಿ ಯೊಳಗೆ , ಕೇರಳ ನಕ್ಸಲ್ ನಿಗ್ರಹ ಪೊಲೀಸರು ಮತ್ತು ಮಾವೋವಾದಿ ನಕ್ಸಲೀಯರ ಗುಂಪಿನ ನಡುವೆ ಅರ್ಧ ಗಂಟೆಗೂ ಹೆಚ್ಚುಕಾಲ ಗುಂಡಿನ್ನ ಚಕಾಮಕ್ಕಿ ನಡಿದಿದ್ದು ಕರ್ನಾಟಕದ ಮಲೆನಾಡು ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಹಾಗೂ ಈ ನಕ್ಸಲ್ ರು ಕೇರಳದ ಕಾಡು ಗಳಲ್ಲಿ ಬೀಡು ಬಿಟ್ಟಿ ರುವ ಶಂಕೆ ಇರುವುದರಿಂದ ಸುತ್ತುಮುತ್ತಲಿನ ಪ್ರದೇಶದಲ್ಲಿ ಬರುವ ಹೋಂ ಸ್ಟೇ, ಆರೋಗ್ಯ ಕೇಂದ್ರಗಳು, medical store ಹಾಗೂ ಗ್ರಾಮಸ್ಥರಿಗೆ ಎಚ್ಚರ ವಹಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ
ಕಬಿನಿ ಎಂಬ ಗುಂಪಿನವರಾದ ಈ ಮಾವೋ ವಾದಿ ನಕ್ಸಾಲರು , ಮೊಯ್ದೀನ್ ನೇತೃತ್ವದಲ್ಲಿ ತಂಗಿದ್ದರು ಎಂದು ಮೂಲಗಳು ತಿಳಿಸಿವೆ
ನವೆಂಬರ್ 13ರಂದು ಎನ್ಕೌಂಟರ್ ಕಾರ್ಯಚರಣೆ ನಡೆಸಿದ ಕೇರಳ ನಕ್ಸಲ್ ನಿಗ್ರಹ ದಳ, ಘಟನೆ ನಡೆದ ಸ್ಥಳದಲ್ಲಿ ಒಂದು ನಾಡ ಪಿಸ್ತೂಲು ಹಾಗೂ ಗುಂಡೇಟುನಿಂದ ಗಾಯಗೊಂಡ ರಕ್ತದ ಕಲೆಗಳು ಬಿದ್ದಿರಿವುದನ್ನು ಪತ್ತೆ ಮಾಡಿದೆ.
ಎಲ್ಲಾ check post ಗಳ್ಳಲ್ಲಿ ನಕ್ಸಲ್ ನಿಗ್ರಹ ದಳದ ಸುಸಜ್ಜಿತ ಬಂದೂಕುಧಾರಿಗಳು ಯಾವುದೇ ಕಾರಣಕ್ಕೂ ಗಾಯಗೊಂಡ ನಕ್ಸಲರಿಗೆ ಬೇಕಾದ ಮೆಡಿಕಲ್ ಸೌಲಭ್ಯವನ್ನು ಸುತ್ತ ಮುತ್ತಲಿನ ಪ್ರದೇಶದಿಂದ ಪಡೆಯಲು ಅಗದಿರುವಂತೆ ಕಟ್ಟೆಚ್ಚರ ವಹಿಸಿದ್ದಾರೆ ಎಂದು ಕೊಡಗು ಎಸ್ಪಿ ತಿಳಿಸಿದ್ದಾರೆ.ಇವೆಲ್ಲಾ ಘಟನೆ ಮತ್ತೊಮ್ಮೆ ನಕ್ಸಲ್ ವಾದದಲ್ಲಿ ಸಿಲುಕಿದ ಮಲೆನಾಡಿನ ಕರಾಳ ಕಥೆಯನ್ನು ಮೆಲುಕು ಹಾಕುತ್ತಾ ಕೊಡಗು ಕೇರಳ ಚಿಕ್ಕಮಗಳೂರು ಸೌತ್ ಕೆನರಾ ದ ದಟ್ಟ ಕಾಡಿನ ಸಾಂದಿಗ್ಧ ಮೌನವ ಅನುರಣಿಸಿದೆ.
ಹಿಂದೊಮ್ಮೆ ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆ ಹಾಗೂ ಸಮಾಜದ ಶೋಷಿತರ ಪರ ಧ್ವನಿ ಯಂದು ಶಸ್ತ್ರಾಸ್ತ್ರ ಹೋರಾಟಕ್ಕೆ ನಾಂದಿ ಹಾಡಿದ ನಕ್ಸಲ್ರು ದಕ್ಷಿಣ ಭಾರತದದಲ್ಲಿ ಬೇರೂರಲು ಇನ್ನೂ ಆಗದೆ ಹವಣಿಸುತ್ತಿರುವುದು ಅವ್ರ ವಿಚಾರಧಾರೆ ಇಲ್ಲಿನ ಜನಗಳ ನಾಡಿ ಮಿಡಿತ ವಾಗದೆ ಇರುವುದೇ ಕರಣವಾ !
ಈ ಹಿಂದೆ ಮಲೆನಾಡು ಭಾಗದ ಅದ್ರಲ್ಲೂ ಶೃಂಗೇರಿ, ಚಿಕ್ಕಮಗಳುರು, ಕುದ್ರೆಮುಖ ಸುತ್ತಮುತ್ತಲಿನ ಕುಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳು ಮರೀಚಿಕೆ ಯಾದ್ದರಿಂದ ಇಲ್ಲಿನ ದುಸ್ತರ ಜೀವನ ಕ್ರಮವನ್ನು ಸರಿಪಡಿಸಲು, ಸರ್ಕಾರದ ಗಮನ ಸೆಳೆಯುವ ಉದ್ದೇಶ ಹೊಂದಿದ್ದ ಕರ್ನಾಟಕದ ಮಲೆನಾಡ ಭಾಗದ ನಕ್ಸಲ್ ಚಳುವಳಿ, ಉತ್ತರದ ನಕ್ಸಲ್ ಚಳುವಳಿಯಂತೆ ಬೆಳೆಯದಿರಲು, ಇಲ್ಲಿನ ಜನಗಳು ಇಲ್ಲನ ಕಾಡಿನಂತೆ ನಿಸ್ತೇಜವಾಗಿ ಯಾವುದಕ್ಕೂ ಪ್ರತಿಕ್ರಿಯೆ ನೀಡದಿರುವುದೆ ಕಾರಣ ! ಅಥವಾ ಇಲ್ಲಿನ ಬಡತನಕ್ಕೂ ಉತ್ತರ ಭಾರತದ ನಕ್ಸಲ್ ಪ್ರಭಾವವಿರುವ ಪ್ರದೇಶಗಳ ಜನಗಳ ಜೀವನ ಕ್ರಮ ಹಾಗೂ ಬಡತನ , ನಕ್ಸಲ್ ಸಿದ್ದಾಂತವನ್ನು ಅಪ್ಪಿಕೊಂಡ ಹಾಗೆ ಇಲ್ಲಿ ಒಪ್ಪಿಕೊಳದಿರುವುದು ನೋಡಿದರೆ ಹಿಂಸಾ ಮಾರ್ಗದಿಂದ ಸಾಮಾಜಿಕ ನ್ಯಾಯ ದೊರಕಿಸಿ ಕೊಡುವುದರಲ್ಲಿ ಕರ್ನಾಟಕದ ಪಶ್ಚಿಮ ಘಟ್ಟಗಳ ಪರಿಸರ ಹಾಗೂ ಇಲ್ಲಿನ ಜನಗಳ ಭಾವನೆಯಲ್ಲಿ ಕ್ರೌರ್ಯಕ್ಕೆ ಸ್ಥಾನ ವಿಲ್ಲದಿರುವುದು ಎದ್ದು ಕಾಣುತ್ತದೆ. ಮತ್ತು ಈ ನಕ್ಸಲ್ ರು ಹೊಟ್ಟೆ ಪಾಡಿಗಾಗಿ ಕೆಲವೊಮ್ಮೆ ಕಾಡಂಚಿನ ಕುಗ್ರಾಮದಲ್ಲಿ ವಾಸಿಸುವ ಜನಗಳಿಗೆ ಬಲವಂತವಾಗಿ ಬೆದುರಿಸಿ ಪಡಿತರ ಹಾಗೂ ಹಣ ಪಿಕುವಿದು, ನಕ್ಸಲರ ನಿಸ್ವಾರ್ಥ ಹೋರಾಟದ ಬಗ್ಗೆ ಇಲ್ಲಿನ ಜನಗಳಿಗೆ ರೇಜಿಗೆ ಉಂಟಾಗಿದೆ.
ಕರ್ನಾಟಕ ದಲ್ಲಿ ಸೈದಂತಿಕವಾಗಿ ಮಾವೋ ವಾದ ಹಾಗೂ ಲೆನಿನ್ ವಾದ ಮರ್ಕ್ಸಿಸ್ಟ್ ಪಾರ್ಟಿಗಳ ಬೇರು ಇತರೆ ನಕ್ಸಲ್ ಪ್ರದೇಶಗಳಾದ ಛತ್ತೀಸ್ ಗಢ, ಬೆಂಗಾಲ, ಕೇರಳ ರಾಜ್ಯದಲ್ಲಿರುವಂತೆ ಬೇರೊರ ದಿರುವುದು ನಮ್ಮ ರಾಜ್ಯದಲ್ಲಿ ನಕ್ಸಲ್ ಹೋರಾಟಕ್ಕೇ ಪ್ರಬಲವಾಗಿ ನಿಲ್ಲದೆ ಕಣ್ಮರೆಗೆ ಕಾರಣವಾ!
Post a Comment