ಶಿವಮೊಗ್ಗ: ಹಿಪ್ ಹಾಪ್ ಚಾಂಪಿಯನ್ ಶಿಪ್ ಪಡೆದ ಸ್ಟೆಪ್ ಹೋಲ್ಡರ್.

ಇಂಡಿಯಾ ಸ್ಪೋಟ್ಸ್ ಏರೋಬಿಕ್ಸ್ ಅಂಡ್ ಫಿಟ್ ನೆಸ್ ಫೆಡರೇಷನ್ (ಡಿಎಸ್ ಎ ಎಫ್) ನಿಂದ ಮಂಜೂರಾತಿ ಪಡೆದಿರುವ ಸ್ಪೋಟ್ಸ್ ಏರೋಬಿಕ್ಸ್ ಅಂಡ್ ಫಿಟ್ ನೆಸ್ ಅಸೋಸಿಯೇಷನ್ ಆಪ್ ಕರ್ನಾಟಕ (ಎಸ್ ಎ ಎಫ್ ಎಕೆ) ವತಿಯಿಂದ ಮಂಡ್ಯದ ಐಇಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅ. 27 ರಿಂದ 29 ರ ವರೆಗೆ ಹಮ್ಮಿಕೊಂಡಿದ್ದ 18 ನೇ ರಾಷ್ಟ್ರೀಯ ಏರೋಬಿಕ್ಸ್ ಚಾಂಪಿಯನ್ ಶಿಪ್ ನ ಹಿಪ್ ಹಾಪ್ ವಿಭಾಗದಲ್ಲಿ ನಗರದ ಸ್ಟೆಪ್ ಹೋಲ್ಡರ್ ಪ್ರತಿನಿಧಿಸಿದ್ದ ಕರ್ನಾಟಕ ತಂಡದ ಪಾಲಾಗಿದೆ. 


 9.12.14 ಮತ್ತು 16 ವರ್ಷದ ಒಳಗಿನವರ ಸ್ಪೋಟ್ಸ್ ಏರೋಬಿಕ್ಸ್, ಫಿಟ್ ನೆಸ್ ಏರೋಬಿಕ್ಸ್ ಸ್ಟೆಪ್   ಏರೋಭಿಕ್ಸ್ ಮತ್ತು ಹಿಪ್ ಹಾಪ್ ವಿಭಾಗಗಳಲ್ಲಿ ಸ್ಟೆಪ್ ಹೋಲ್ಡರ್ ನ ನೃತ್ಯಪಟುಗಳು ಹಾಗೂ ಈ ತಂಡದಲ್ಲಿದ್ದ ಜೈನ್ ಪಬ್ಲಿಕ್ ಸ್ಕೋಲ್ ಮತ್ತು ಪೋದಾರ್ ಶಾಲೆಯ ವಿದ್ಯಾರ್ಥಿಗಳು ರಾಜ್ಯ ತಂಡವನ್ನು ಪ್ರತಿನಿಧಿಸಿ ಒಟ್ಟು 94 ಪದಕಗಳನ್ನು ಪಡೆದುಕೊಂಡಿದ್ದಾರೆ.

Post a Comment

Previous Post Next Post