ಕೆಲಸ ಕಳೆದುಕೊಳ್ಳುವ ಭೀತಿಯ ಮೊತ್ತದ ರೂಪಾಯಿ ಮೌಲ್ಯದ ಸಾಗುವಾನಿ, ಬೀದಿ ಮರಗಳ ಕಳ್ಳ ಸಾಗಣೆ ಸಿಬ್ಬಂದಿ ಮುಂದಾದ್ರಾ ಎಂಬ ಅನುಮಾನಕ್ಕೆ ಈ ಪ್ರಕರಣ ಬೆಳಕಿಗೆ ಬಂದಿದೆ.
ಭದ್ರಾವತಿಯ ಹೊನ್ನವಿಲೆಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿಯ ಫಾರಂನಲ್ಲಿ ಅಕ್ರಮ ಮರ ಕಡಿತದ ಘಟನೆ ನಡೆದಿದೆ. ನೂರಾರು ವಿಸ್ತೀರ್ಣದಲ್ಲಿರುವ ಫಾರಂನಲ್ಲಿ ನಾಟಗಳನ್ನು ಬೆಳೆಸಲಾಗಿದೆ. ಕಳೆದ ಎಂಟು ತಿಂಗಳ ಹಿಂದೆ ಕ್ಷೇತ್ರಕ್ಕೆ ಸುರೇಶ್ ನಾಯ್ಕ ಮೇಲೆ ಅನುಮಾನವಿದೆ.
ವಿವಿಯ ಹಿರಿಯ ಅಧಿಕಾರಿಗಳ ಗಮನಕ್ಕೆ ಬಾರದೆ, ಅರಣ್ಯ ಇಲಾಖೆ ಅನುಮತಿ ಪಡೆಯದೆ ಅಕ್ರಮವಾಗಿ ಮರ ಕಡಿದಿರುವ ಆರೋಪ ಕೇಳಿಬಂದಿದೆ. ಸುಮಾರು ಆರರಿಂದ ಎಂಟು ಟ್ರ್ಯಾಕ್ಟರ್ ಲೋಡ್ ಸಾಗುವಾನಿ, ಬೇವು, ಹಲಸು, ಅಕೇಶಿಯಾ ಜಾತಿಯ ಮರಗಳು ಸೇರಿದಂತೆ ಹಲವಾರು ಮೌಲ್ಯದ ಬೆಲೆ ಬಾಳುವ ಮರಗಳನ್ನು ಕಡಿಸಿ ಸಾಗಿಸಲು ಬೆಳಕಿಗೆ ಬಂದಿದೆ.
ಸುಮಾರು 30 ರಿಂದ 40 ವರ್ಷದ ಹಿಂದೆ ನೆಟ್ಟಿದ್ದ ಭಾರೀ ಗಾತ್ರದ ಮರಗಳಿಗೆ ಕೊಡಲಿ ಏಟು ಬಿದ್ದಿದೆ.ಈ ಹಿಂದೆಯೇ ಕಡಿದು ದಾಮಿನಿನಲ್ಲಿ ಸಂಗ್ರಹವಾದ ಬೆಲೆಬಾಳುವ ಸಾಗುವಾನಿ ಮರದ ತುಂಡುಗಳನ್ನು ಅಕೇಶಿಯ ಮರಗಳ ಜೊತೆಯಲ್ಲಿ ಅಕ್ರಮವಾಗಿ ಮರಗಳ್ಳರ ಜೊತೆ ಶಾಮೀಲಾಗಿ ರಹಸ್ಯ ಸ್ಥಳಗಳಿಗೆ ಸಾಗಿಸುವ ಸಾಧ್ಯತೆಗಳು ಕಂಡುಬಂದಿವೆ.
ವಿಷಯ ತಿಳಿದ ಅರಣ್ಯ ಇಲಾಖೆಯ ಜಾಗೃತ ದಳದ ಅಧಿಕಾರಿ ಮೊಹಮ್ಮದ್ ಸೈಫುಲ್ಲಾ ಮತ್ತು ಸಿಬ್ಬಂದಿಯಿಂದ ನಿನ್ನೆ ಸಂಜೆ ದಾಳಿ ನಡೆದಿದೆ. ಟ್ರ್ಯಾಕ್ಟರ್‌ನಲ್ಲಿ ಲೋಡು ಮಾಡಿಕೊಂಡು ಹೊನ್ನವಿಲೆ ಫಾರಂನಿಂದ ಹೊರಡುವ ಸಂದರ್ಭದಲ್ಲಿ ದಾಳಿ ನಡೆದಿದೆ.
ಅಕ್ರಮವಾಗಿ ಕಡಿದ ಮರಗಳನ್ನು ಟ್ರ್ಯಾಕ್ಟರ್ ಸಮೇತ ಹೊನ್ನವಿಲೆ ಫಾರಂನಲ್ಲಿ ತಂಡ ವಶಪಡಿಸಿಕೊಂಡಿದೆ. ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಪ್ರಕರಣವನ್ನು ಮುಚ್ಚಿಹಾಕಲು ನಡೆದಿರುವ ಪ್ರಯತ್ನ ಎಂದು ಹೇಳಲಾಗುತ್ತಿದೆ. ಕೆಲಸ ಕಳೆದುಕೊಳ್ಳುವ ಸಿಬ್ಬಂದಿ ಲೂಟಿಗಿಳಿದಿರಬಹುದು ಎಂದು ಹೇಳಲಾಗುತ್ತಿದೆ.
ಎರಡು ವರ್ಷದ ಹಿಂದೆ ನೇಮಕವಾಗಿರುವ ಸಿಬ್ಬಂದಿ ನೇಮಕ ಪ್ರಕ್ರಿಯೆ ಕುರಿತು ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಎಲ್ಲಿ ಕೆಲಸ ಹೋಗುವುದು ಎಂದು ಬೆದರಿರುವ ಸಿಬ್ಬಂದಿಗಳು. ಕೆಲಸ ಪಡೆಯುವ ವೇಳೆ ತೊಡಗಿಸಿಕೊಂಡಿದ್ದ ಬಂಡವಾಳ ಹಿಂಪಡೆಯಲು ಮರಗಳ ಅಕ್ರಮ ಕಡಿತದ ಸಿಬ್ಬಂದಿಗೆ ಕೈ ಹಾಕಬಹುದು ಎಂದು ಹೇಳಲಾಗುತ್ತಿದೆ.
ಮರಗಳನ್ನು ಕಡಿದದ್ದು ಗೊತ್ತಾಗದಂತೆ ಅದಕ್ಕೆ ಗರಿಗಳನ್ನು ಮುಚ್ಚಿ ಮರೆಮಾಚಲಾಗಿದೆ. ಅಕ್ರಮವಾಗಿ ಮರಗಳ ಕಳ್ಳತನ ನಡೆಯುತ್ತಿದ್ದರೂ ವಿವಿ ಆಡಳಿತ ಮೌನಕ್ಕೆ ಜಾರಿದಿರುವುದು ಅಚ್ಚರಿ ಮೂಡಿಸಿದೆ.
Post a Comment