ತೀರ್ಥಹಳಿ: ಮಾಲೂರು ಸ್ಟೇಷನ್ ಲಿಮಿಟ್ ನಲ್ಲಿ ಅಕ್ರಮ ಮರಳು ಸಾಗಾಣೆ; ಕಣ್ಮುಚ್ಚಿ ಕುಳಿತಿರುವ ಸಂಬಂಧಪಟ್ಟ ಇಲಾಖೆ.!

 ಇತ್ತೀಚಿನ ದಿನಗಳಲ್ಲಿ ಅಕ್ರಮ ಮರಳು ಗಣಿಗಾರಿಕೆಯ ಅಟ್ಟಹಾಸ ಹೆಚ್ಚಾಗುತ್ತಲೇ ಇದೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಮ್ಮ ಪತ್ರಿಕಾ ವತಿಯಿಂದ  ಹಲವು ಪ್ರಯತ್ನಗಳನ್ನು ಮಾಡಿದ್ದೇವೆ ಆದರೆ ಅವೆಲ್ಲವೂ ಸಹ ವಿಪಲವಾಗುತ್ತಿದೆ ಕಾರಣ ಪೊಲೀಸ್ ಇಲಾಖೆಯ ಬೇಜವಬ್ದಾರಿತನ ಎಂಬುದೇ ಕಟು ಸತ್ಯ.!

ತೀರ್ಥಹಳಿಯ ಮಾಲುರು ಸ್ಟೇಷನ್ ಲಿಮಿಟ್ ನಲ್ಲಿ ಬರುವ ಮಂಡಗದ್ದೆಯಲ್ಲಿ ಪ್ರತಿ ದಿನ ರಾತ್ರಿ 8 ಗಂಟೆಯಿಂದ ಬೆಳಗ್ಗೆ 10 ಗಂಟೆ ಯವರೆಗೂ ಅಕ್ರಮವಾಗಿ ಮರಳು ಸಾಗಾಣೆಯು ರಾಜಾರೋಷವಾಗಿ ನಡೆಯುತ್ತಿದೆ. ದಿನಕ್ಕೆ ಏನೆಂದರೂ ಕನಿಷ್ಟ 10 ಲೋಡ್ ಮರಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ, ಒಂದು ಲೋಡ್ ಗೆ 20.000 ರಿಂದ 25.000 ಸಾವಿರ ಅಂದರು ಪ್ರತಿ ದಿನ ಸುಮಾರು 2 ಲಕ್ಷ ವರೆಗೆ ಹಣವನ್ನು ಅಕ್ರಮವಾಗಿ ಸಂಪಾದಿಸುತ್ತಿದ್ದಾರೆ.!

ಇಷ್ಟೆಲ್ಲಾ ನಡೆಯುತ್ತಿದ್ದರು ಕೂಡ ಮಾಲೂರು ಸಬ್ ಇನ್ಸ್ ಪೆಕ್ಟರ್ ಮಾತ್ರ  ಕೈ ಕಟ್ಟಿ ಕುಳಿತ್ತಿದ್ದಾರೆ.! ನಮ್ಮ ಪತ್ರಿಕೆ ವತಿಯಿಂದ ಹಲವು ಬಾರಿ ಮಾಹಿತಿ ಒದಗಿಸಿದ್ದರು ಸಹ ಅವರು ಏನು ಕ್ರಮ ಕೈಗೊಳ್ಳದೆ ಮೌನವಾಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕುತ್ತಿದೆ.! ಜೊತೆಗೆ ನಮ್ಮ ಪತ್ರಿಕೆಯ ವತಿಯಿಂದ 112 ಗೆ ಕರೆ ಮಾಡಿ ಮಾಹಿತಿ ಒದಗಿಸಿದರು ಅದನ್ನು ಅವರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದರೆ ನಾಚಿಕೆ ಆಗಬೇಕು ಅವರಿಗೆ.!

ಸರ್ಕಾರದ ಆಸ್ತಿ ಉಳಿಸಬೇಕಾದ ಜವಬ್ದಾರಿ ಹೊಂದಿರುವ ಫಾರೆಸ್ಟ್  ಇಲಾಖೆ, ಗಣಿ ಮತ್ತು ಭು ವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಪ್ರತಿಯೊಬ್ಬರು ಸಹ ಯಾವುದೇ ಕ್ರಮ ಕೈಗೊಳ್ಳದೆ ಅವರಿಗೆ ಅಕ್ರಮ ಚಟುವಟಿಕೆ ನಡೆಸಲು ಎಲ್ಲೋ ಒಂದು ರೀತಿಯಲ್ಲಿ ಇವರೇ ಸಹಾಯ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತದೆ.! ಸಬ್ ಇನ್ಸ್ ಪೆಕ್ಟರ್ ಗೆ ಇದರ ಬಗ್ಗೆ ಎಷ್ಟೇ ಮಾಹಿತಿ ಒದಗಿಸಿದರು ಸಹ ಅವರು ಮೌನವಾಗಿರುವುದನ್ನು ನೋಡುತ್ತಿದ್ದರೆ ಅವರ ಮಧ್ಯೆ ಒಳಒಪ್ಪಂದ ವೇನಾದರೂ ಇದೆಯಾ.! ಎಂಬ ಅನುಮಾನ ಮೂಡುತ್ತದೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ಎಷ್ಟೇ ಮಾಹಿತಿ ನೀಡಿದರು ಸಹ ಅವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದರೆ ಇಂತಹ ಬೇಜವಬ್ದಾರಿತನ ಹೊಂದಿರುವ ಸ್ಟೇಷನ್ ಬೇಕಾ.! ಎಲ್ಲಾ ರೀತಿಯ ಮಾಹಿತಿ ನೀಡುತ್ತಿದ್ದರು ಅಕ್ರಮ ಮರಳು ಗಣಿಗಾರಿಕೆಯನ್ನು ಇವರಿಗೇ  ನಿಲ್ಲಿಸಲಾಗುತ್ತಿಲ್ಲ ಎಂದರೆ ಇಂತಹ ಅಧಿಕಾರಿಗಳ ಅವಶ್ಯಕತೆ ನಮ್ಮ ಸಮಾಜಕ್ಕೆ ಇದೆಯಾ.! ಇದರ ಬಗ್ಗೆ ಹಲವು ಬಾರಿ ಡಿಎಸ್ ಪಿ ಗೂ ಸಹ ಮಾಹಿತಿ ನೀಡಿದ್ದೇವೆ ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.! ಪ್ರತಿಯೊಬ್ಬರು ಸಹ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲು ಸಿದ್ದವಿಲ್ಲ ಎಂಬುದೇ ಆಶ್ಚರ್ಯ.! ಇದಕ್ಕೆ ಸಂಬಂದಪಟ್ಟ ಅಧಿಕಾರಿಗಳೇ ಅಕ್ರಮವನ್ನು ತಡೆಗಟ್ಟುಅವ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂಬುದೇ ವಿಪರ್ಯಾಸ.!


Post a Comment

Previous Post Next Post