ಚಿಕ್ಕಮಗಳೂರು, ಸೆ,4 ನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಮಹಿಳಾ ಆರ್ ಟಿ ಒ ಅಟೆಂಡರ್ ಲಂಚ ಪದೆಯುತ್ತಿದ್ದ ವೆಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅಧಿಕಾರಿ ಮಧುರಾ ಹಾಗೂ ಕಚೇರಿಯ ಅಟೆಂಡರ್ ಲತಾ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದವರಾಗಿದ್ದು ನಗರದ ಕೆಂಪನಹಳಿ ಬಡಾವಣೆ ನಿವಾಸಿ ಪ್ರಕಾಶ್ ಎಂಬವರು 8 ಬಾಡಿಗೆ ವಾಹನಗಳನ್ನು ಓಡಿಸಲು ಪರವಾನಿಗೆ ಪವೆಯಲು ಅರ್ಜಿ ಸಲ್ಲಿಸಿದ್ದರು. ಅಧಿಕಾರಿಗಳು ಪ್ರಕಾಶ್ ಅವರ ಅರ್ಜಿಯನ್ನು ತಿರಸ್ಕರಿಸಿದ್ದರು. ಈ ಹಿನ್ನಲೆಯಲ್ಲಿ ಅವರು ಆರ್ ಟಿ ಓ ಕಚೇರಿಗೆ ತೆರಳಿ ಅರ್ಜಿ ತಿರಸ್ಕಾರ ಸಂಬಂಧ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಮಧು ಅವರನ್ನು ಪ್ರಶ್ನಿಸಿದ್ದರು. ಈ ವೇಳೆ ಅವರು ಪ್ರತೀ ವಾಹನಕ್ಕೆ ತಲಾ 1 ಸಾವಿರದಂತೆ 8 ಸಾವಿರ ಹಣ ನೀಡಬೇಕೆಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ.
ನಂತರ ಪ್ರಕಾಶ್ 5 ವಾಹನಗಳಿಗೆ ಪರವಾನಗಿ ನೀಡಬೇಕೆಂದು ಮತ್ತೆ ಅರ್ಜಿ ಸಲ್ಲಿಸಿ ಅದಕ್ಕೆ ಶುಲ್ಕವನ್ನೂ ಪಾವತಿಸಿದ್ದರು. ಅಲ್ಲದೆ ಮುಂಗಡವಾಗಿ 2 ಸಾವಿರ ರೂ ಲಂಚವನ್ನು ಅಧಿಕಾರಿಗಳಿಗೆ ನೀಡಿದ್ದರೆಂದು ತಿಳಿದು ಬಂದಿದ್ದು, ಬಾಕಿ 3 ಸಾವಿರ ಹಣಕ್ಕೆ ಅಧಿಕಾರಿಗಳಿಬ್ಬರು ಪೀಡಿಸಿದ್ದರಿಂದ ಬೇಸತ್ತ ಪ್ರಕಾಶ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಮೇರೆಗೆ ಸೋಮವಾರ ಆರ್ ಟಿ ಒ ಕಚೇರಿಯಲ್ಲಿ ಆರ್ ಟಿ ಓ ಮಧುರಾ ಪರವಾಗಿ ಅಟೆಂಡರ್ ಲತಾ ಎಂಬವರು 3 ಸಾವಿರ ರೂ ಲಂಚ ಪಡೆಯುತ್ತಿದ್ದ ವೆಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಲಂಚದ ಹಣದೊಂದಿಗೆ ಅಟೆಂಡರ್ ಲತಾ ಪೊಲೀಸರ ಬಲೆಗೆ ಬಿದ್ದಿದ್ದು, ಅಟೆಂಡರ್ ಲತಾ ಆರ್ ಟಿ ಓ ಅಧಿಕಾರಿ ಮಧುರಾ ಪರವಾಗಿ ಲಂಚ ಸ್ವೀಕರಿಸುತ್ತಿದ್ದರೆಂದು ತಿಳಿದು ಬಂದಿದೆ. ಲಂಚದ ಹಣದೊಂದಿಗೆ ಸಿಕ್ಕಿಬಿದ್ದ ಆರ್ ಟಿ ಓ ಮಧುರಾ ಹಾಗೂ ಅಟೆಂಡರ್ ಲತಾರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
Post a Comment