ಶಿವಮೊಗ್ಗ : ಹಾಫ್ ಹೆಲ್ಮೆಟ್ ಮಾರುತಿದ್ದ ಅಂಗಡಿ ಮೇಲೆ ಪೊಲೀಸ್ ಕಾರ್ಯಚರಣೆ


*ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್,* ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು  *ಶ್ರೀ ಅನಿಲ್ ಕುಮಾರ್ ಭೂಮರಡ್ಡಿ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ  *ಶ್ರೀ ಸುರೇಶ್ ಎಂ* ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ – ಬಿ ಉಪ ವಿಭಾಗ ಹಾಗೂ *ಶ್ರೀ ಸಂತೋಷ್ ಕುಮಾರ್* ಪೊಲೀಸ್ ವೃತ್ತ ನಿರೀಕ್ಷಕರು, ಶಿವಮೊಗ್ಗ ಸಂಚಾರ ವೃತ್ತ ನೇತೃತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕರುಗಳು ಶಿವಮೊಗ್ಗ ಪೂರ್ವ ಮತ್ತು ಪಶ್ಚಿಮ  ಸಂಚಾರ ಪೊಲೀಸ್ ಠಾಣೆ ಹಾಗೂ ಸಿಬ್ಬಂಧಿಗಳ ತಂಡವು ಶಿವಮೊಗ್ಗ ನಗರದಲ್ಲಿ ಐಎಸ್ಐ ಪ್ರಮಾಣಿತವಲ್ಲದ Half Helmet ಗಳನ್ನು ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ *ಒಟ್ಟು 600* ಐಎಸ್ಐ ಪ್ರಮಾಣಿತವಲ್ಲದ Half Helmet ಗಳನ್ನು ಮತ್ತು  *ಶ್ರೀ ಜಿತೇಂದ್ರ ಕುಮಾರ್ ದಯಾಮ, ಐಪಿಎಸ್,* ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರು, ಭದ್ರಾವತಿ ಉಪ ವಿಭಾಗ ಮತ್ತು *ಶ್ರೀ ರಾಘವೇಂದ್ರ ಕಾಂಡಿಕೆ* ಪೊಲೀಸ್ ವೃತ್ತ ನಿರೀಕ್ಷಕರು, ಭದ್ರಾವತಿ ನಗರ ವೃತ್ತ ರವರ ನೇತೃತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕರು ಭದ್ರಾವತಿ ಸಂಚಾರ ಪೊಲೀಸ್ ಠಾಣೆ ಮತ್ತು ಸಿಬ್ಬಂಧಿಗಳ ತಂಡವು *ಭದ್ರಾವತಿ ನಗರದಲ್ಲಿ* ಐಎಸ್ಐ ಪ್ರಮಾಣಿತವಲ್ಲದ Half Helmet ಗಳನ್ನು ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ *ಒಟ್ಟು 141 ಐಎಸ್ಐ* ಪ್ರಮಾಣಿತವಲ್ಲದ Half Helmet ಗಳನ್ನು ವಶಪಡಿಸಿಕೊಂಡಿರುತ್ತಾರೆ. *ಶಿವಮೊಗ್ಗ ನಗರದಲ್ಲಿ 600 ಮತ್ತು ಭದ್ರಾವತಿ ನಗರದಲ್ಲಿ 141 ಸೇರಿ ಒಟ್ಟು 741 ಐಎಸ್ಐ* ಪ್ರಮಾಣಿತವಲ್ಲದ Half Helmet ಗಳನ್ನು ವಶಪಡಿಸಿಕೊಂಡು ಅಂಗಡಿ ಮಾಲೀಕರುಗಳಿಗೆ ಈ ರೀತಿಯ  Helmet ಗಳನ್ನು ದಾಸ್ತಾನು ಮಾಡಿ, ಮಾರಾಟ ಮಾಡದಂತೆ *ಪೊಲೀಸ್ ತಿಳುವಳಿಕೆ ಪತ್ರವನ್ನು* ನೀಡಿದರು 

Post a Comment

Previous Post Next Post