ದಿನಾಂಕಃ 02-06-2023 ರಂದು *ಗಂಗಾಧರಪ್ಪ ವಾಸ ಚನ್ನಗಿರಿ, ದಾವಣಗೆರೆ ಜಿಲ್ಲೆ* ರವರು ತಮ್ಮ *ಬಜಾಜ್ ಪ್ಲಾಟಿನಾ ಬೈಕ್* ಅನ್ನು ಭದ್ರಾವತಿ KSRTC ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದು, *ಯಾರೋ ಕಳ್ಳರು ಸದರಿ ಬೈಕ್ ಅನ್ನು ಕಳ್ಳತನ* ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ *ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆ* ಗುನ್ನೆ ಸಂಖ್ಯೆ 0081/2023 ಕಲಂ 379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತಾರೆ
ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆಗಾಗಿ *ಶ್ರೀ ಮಿಥುನ್ ಕುಮಾರ್ ಜಿ. ಕೆ, ಐಪಿಎಸ್,* ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು *ಶ್ರೀ ಅನಿಲ್ ಕುಮಾರ್ ಭೂಮರಡ್ಡಿ,* ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, *ಶ್ರೀ ಜಿತೇಂದ್ರ ಕುಮಾರ್ ದಯಾಮ, ಐಪಿಎಸ್,* ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರು, ಭದ್ರಾವತಿ ಉಪ ವಿಭಾಗ ಮತ್ತು *ಶ್ರೀ ರಾಘವೇಂದ್ರ ಕಾಂಡಿಕೆ,* ಪೊಲೀಸ್ ವೃತ್ತ ನಿರೀಕ್ಷಕರು, ಭದ್ರಾವತಿ ನಗರ ವೃತ್ತ ರವರ ಮೇಲ್ವಿಚಾರಣೆಯಲ್ಲಿ, ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯ *ಶ್ರೀ ರಮೇಶ್ ಟಿ. ಪಿ.ಎಸ್.ಐ ಮತ್ತು ಶ್ರೀಮತಿ ಭಾರತಿ, ಪಿ ಎಸ್ ಐ,*. ರವರ ನೇತೃತ್ವದಲ್ಲಿ ಶ್ರೀ ವೆಂಕಟೇಶ್ ಎ.ಎಸ್.ಐ. ಮತ್ತು ಸಿಬ್ಬಂಧಿಗಳಾದ ಪಿಸಿ ರಂಗನಾಥ್, ತೀರ್ಥಲಿಂಗಪ್ಪ ಮತ್ತು ಪ್ರವೀಣಕುಮಾರ್ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.
ದಿನಾಂಕಃ 07-07-2023 ರಂದು ಪ್ರಕಣದ *ಆರೋಪಿತನಾದ ಉಮೇಶ್, 41 ವರ್ಷ ದಾನವಾಡಿ ಗ್ರಾಮ ಭದ್ರಾವತಿ* ಈತನನ್ನು ದಸ್ತಗಿರಿ ಮಾಡಿ, ಆರೋಪಿತನಿಂದ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯ 03 ಮತ್ತು ಚನ್ನಗಿರಿ ಪೊಲೀಸ್ ಠಾಣೆಯ 01 ಪ್ರಕರಣ ಸೇರಿ *ಒಟ್ಟು 04 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 1,25,000/- ರೂಗಳ ಒಟ್ಟು 04 ದ್ವಿಚಕ ವಾಹನಗಳನ್ನು ಅಮಾನತ್ತು* ಪಡಿಸಿಕೊಂಡಿರುತ್ತದೆ.
Post a Comment