ರಿಪ್ಪನಪೇಟೆ: ಮಾನವೀಯತೆ ಮೆರೆದ ರಿಪ್ಪಿನಪೇಟೆ ಪೊಲೀಸ್, ಬಡ ಕುಟುಂಬಕ್ಕೆ ಪೊಲೀಸ್ ಇಲಾಖೆಯಿಂದ ಸಹಾಯ ಹಸ್ತ.

ಆಡುವ ವಯಸ್ಸಿನಲ್ಲಿ ನೀನೇನಾಗುವೆ ಎನ್ನುವ ಪ್ರಶ್ನೆಗೆ ಎಲ್ಲ ಚಿಕ್ಕ ಮಕ್ಕಳ ಉತ್ತರ ಈಗಲು ಪೊಲೀಸ್, ಆರಕ್ಷಕರಿಲ್ಲದೆ ಸಮಾಜ ಸುಲಲಿತವಾಗಿ ನಿದ್ದೆ ಮಾಡದು. ಇರಲಿ ನಿಮ್ಮ ನಮನ ಅವರಿಗೆ ಸಲ್ಲಿಸಿಬಿಡಿ ನಿಮ್ಮ ಅಭಿನಂದನೆ.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ  ರಿಪ್ಪನ ಪೇಟೆ ಗವಟೂರು ನಿವಾಸಿ ಆಟೋ ದೇವಪ್ಪ  ಗೌಡ ಅವರು 35 ವರ್ಷಗಳಿಂದ ನರದೌರ್ಬಲ್ಯದಿಂದ ಬುದ್ದಿ ಮಾಂದ್ಯಕ್ಕೆ ಒಳಗಾದ ಮಗಳ ಆರೈಕೆಗೆ ಲಕ್ಷ ಲಕ್ಷ ಖರ್ಚು ಮಾಡಿ, ವಿಪರೀತ ಸಾಲದ ಸುಳಿಗೆ ಸಿಲುಕಿದ್ದು, ಸೂಕ್ತ ಚಿಕಿತ್ಸೆ ನೀಡದೆ ಮಗಳ ಆರೋಗ್ಯ ಇನ್ನಷ್ಟು ಹದಗೆಟ್ಟಿದ್ದು, ಈ ಬಗ್ಗೆ ಪಟ್ಟಣದ ಪೊಲೀಸ್ ಸಿಬ್ಬಂಧಿಗಳಾದ ಮಂಜಪ್ಪ ಹೊನ್ನಾಳ್, ಹೆಚ್.ಸಿ. ನವೀನ್, ತ್ರಿವೇಣಿ ರಿಪ್ಪಿನಪೇಟೆ ನೂತನ ಐಎಸ್ ಐ ಗಮನಕ್ಕೆ ತಂದಿರುತ್ತಾರೆ. ಪಿ.ಎಸ್.ಐ ಪ್ರವೀಣ್ ಬಗ್ಗೆ ಡಿವೈ ಎಸ್ ಪಿ ಗಜಾನನ ವಾಮನ ಸುತಾರ ಮತ್ತು ಸಿಪಿಎ ಗಿರೀಶ್ ರವರ ಗಮನಕ್ಕೆ ತಂದು ಠಾಣೆಯ ಎಲ್ಲಾ ಸಿಬ್ಬಂಧಿಗಳು ಹಾಗೂ ಅಧಿಕಾರಿಗಳ್ ಸಹಕಾರದಿಂದ ಬಡಕುಟುಂಬದ ಆಟೋ ದೇವಪ್ಪ ಗೌಡರ ಮನೆಗೆ ತೆರಳಿ ಧನ  ಸಹಾಯ  ಮಾಡುವುದರೊಂದಿಗೆ ಬಡ ಕುಟುಂಬಕ್ಕೆ  ಧೈರ್ಯ ತುಂಬಿದ್ದಾರೆ.

ಆರ್ಥಿಕ ಸಹಾಯ ಮಾಡಲು ಇಚ್ಛಿಸುವವರು ಕೆಳಕಂಡ ಬ್ಯಾಂಕ್ ಖಾತೆಗೆ ಹಣ ಸಹಾಯ ಮಾಡಬಹುದು.

ಪ್ರೇಮ. ಎನ್. ಡಿ. ಭಾರತೀಯ ಸ್ಟೇಟ್ ಬ್ಯಾಂಕ್ ರಿಪ್ಪನ ಪೇಟೆ ಶಾಕೆ,

ಖಾತೆ ಸಂಖ್ಯೆ: 64188102751

IFSC : SDIN 0040976

ಹೆಚ್ಚಿನ  ಮಾಹಿತಿಗಾಗಿ, ದೇವಪ್ಪ ಗೌಡರ ಮೊಬೈಲ್ ಸಂಖ್ಯೆ: 9972752219 ಗೆ ಕರೆ ಮಾಡಬಹುದು.

ಫೊನ್ ಪೇ ನಂಬರ್: 9060968943.


Post a Comment

Previous Post Next Post