ಕರ್ನಾಟಕದ ಐಐಎಸ್‌ಸಿ ಪಿಎಚ್‌.ಡಿ ಸ್ಕಾಲರ್‌ಗೆ ‘FedEx ಸಿಬ್ಬಂದಿ’ ಹೆಸರಿನಲ್ಲಿ ಕರೆ; 1.34 ಲಕ್ಷ ರೂ. ವಂಚನೆ

 ರಿಟೇಲ್ ಬ್ರೋಕರೇಜ್ ಸಂಸ್ಥೆ ಝೆರೋಧಾ ಸಹ-ಸಂಸ್ಥಾಪಕ ನಿತಿನ್ ಕಾಮತ್ ಶುಕ್ರವಾರ ಸರಣಿ ಟ್ವೀಟ್‌ಗಳನ್ನು ಮಾಡಿದ್ದು, ಫೆಡ್‌ಎಕ್ಸ್‌ನಂತಹ ಸ್ಥಾಪಿತ ಕೊರಿಯರ್ ಸಂಸ್ಥೆಗಳ ಹೆಸರಿನಲ್ಲಿ ನಡೆಯುವ ಹಗರಣದ ಬಗ್ಗೆ ತಮ್ಮ ಅನುಯಾಯಿಗಳಿಗೆ ಎಚ್ಚರಿಕೆ ನೀಡಿದ್ದಾರೆ. 

                                                               ಪ್ರಾತಿನಿಧಿಕ ಚಿತ್ರ

Posted By :Rekha.M
Online Desk

ಬೆಂಗಳೂರು: ರಿಟೇಲ್ ಬ್ರೋಕರೇಜ್ ಸಂಸ್ಥೆ ಝೆರೋಧಾ ಸಹ-ಸಂಸ್ಥಾಪಕ ನಿತಿನ್ ಕಾಮತ್ ಶುಕ್ರವಾರ ಸರಣಿ ಟ್ವೀಟ್‌ಗಳನ್ನು ಮಾಡಿದ್ದು, ಫೆಡ್‌ಎಕ್ಸ್‌ನಂತಹ ಸ್ಥಾಪಿತ ಕೊರಿಯರ್ ಸಂಸ್ಥೆಗಳ ಹೆಸರಿನಲ್ಲಿ ನಡೆಯುವ ಹಗರಣದ ಬಗ್ಗೆ ತಮ್ಮ ಅನುಯಾಯಿಗಳಿಗೆ ಎಚ್ಚರಿಕೆ ನೀಡಿದ್ದಾರೆ. 

ಫೆಡ್‌ಎಕ್ಸ್, ಕ್ರೈಂ ಬ್ರಾಂಚ್ ಮತ್ತು ಸಿಬಿಐನ ಅಧಿಕಾರಿಗಳಂತೆ ನಟಿಸಿ ವಂಚಿಸುವ ವಂಚಕರ ಕಾರ್ಯವೈಖರಿಯನ್ನು ಕಾಮತ್ ವಿವರವಾಗಿ ತಿಳಿಸಿದ್ದಾರೆ. ತನ್ನ ಸಹೋದ್ಯೋಗಿಯೊಬ್ಬರು ವಂಚನೆಗೆ ಬಲಿಯಾಗಿದ್ದಾರೆ ಮತ್ತು ಆರೋಪಿಗಳಿಗೆ ಹಣವನ್ನು ವರ್ಗಾಯಿಸಿದ್ದಾರೆ ಎಂದು ಅವರು ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ.

ಅದೇ ದಿನ, 30 ವರ್ಷದ ಐಐಎಸ್‌ಸಿ ಪಿಎಚ್‌ಡಿ ವಿದ್ಯಾರ್ಥಿಗೆ ಫೆಡ್‌ಎಕ್ಸ್, ಮುಂಬೈ ನಾರ್ಕೋಟಿಕ್ಸ್ ಮತ್ತು ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ವಂಚಕರಿಂದ ಇದೇ ರೀತಿಯ ಕರೆ ಬಂದಿದೆ. ಆರೋಪಿಗಳು ಆಕೆಯನ್ನು ವಂಚಿಸಿ ಸುಮಾರು 1.34 ಲಕ್ಷ ರೂ. ಸುಲಿಗೆ ಮಾಡಿದ್ದಾರೆ. ಹಣ ಕೊಡದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆದರಿಕೆಯೊಡ್ಡಿದ್ದು, ವಿದ್ಯಾರ್ಥಿನಿಯು ಆರೋಪಿಯ ಖಾತೆಗಳಿಗೆ ಕನಿಷ್ಠ ಐದು ಆನ್‌ಲೈನ್ ವಹಿವಾಟುಗಳನ್ನು ಮಾಡಿದ್ದಾರೆ. ಹಣದ ಬೇಡಿಕೆ ಹೆಚ್ಚಾದಾಗ ಸಂತ್ರಸ್ತೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ವಂಚಕರ ವಿರುದ್ಧ ದೂರು ದಾಖಲಿಸಿದ್ದಾರೆ. ಆಕೆಯ ಬ್ಯಾಂಕ್ ವಿವರಗಳು ಸೇರಿದಂತೆ ಎಲ್ಲಾ ವೈಯಕ್ತಿಕ ಮಾಹಿತಿಗಳು ತಮ್ಮ ಬಳಿ ಇರುವುದರಿಂದ ಗ್ಯಾಂಗ್ ತನ್ನನ್ನು ಗುರಿಯಾಗಿಸುತ್ತದೆ ಎಂದು ಆಕೆ ಹೆದರಿದ್ದರು.

ಐಐಎಸ್‌ಸಿ ಕ್ಯಾಂಪಸ್‌ನಲ್ಲಿರುವ ನ್ಯೂ ಗರ್ಲ್ಸ್ ಹಾಸ್ಟೆಲ್‌ನಲ್ಲಿ ವಾಸಿಸುತ್ತಿರುವ ಪಿಎಚ್‌ಡಿ ಮಾಡುತ್ತಿರುವ ಸಂಸ್ರಸ್ಥೆ ಶುಕ್ರವಾರ ಮಧ್ಯಾಹ್ನ 2.30 ರ ಸುಮಾರಿಗೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬೆಳಗ್ಗೆ 10.25 ರಿಂದ ಮಧ್ಯಾಹ್ನ 2 ಗಂಟೆಯೊಳಗೆ ಮೋಸ ಹೋಗಿರುವುದಾಗಿ ಹೇಳಿದ್ದಾರೆ.

ಸಂತ್ರಸ್ತೆ ತನ್ನ ದೂರಿನಲ್ಲಿ, ಬೆಳಿಗ್ಗೆ 10.25 ರ ಸುಮಾರಿಗೆ ಫೆಡ್ಎಕ್ಸ್ ಉದ್ಯೋಗಿಯ ಸೋಗಿನಲ್ಲಿ ಫೋನ್ ಕರೆ ಬಂದಿತು. ಅಕ್ರಮ ವಸ್ತುಗಳನ್ನು ಒಳಗೊಂಡಿರುವ ಪ್ಯಾಕೇಜ್ ತನ್ನ ಹೆಸರಿನಲ್ಲಿ ಬಂದಿದೆ ಮತ್ತು ಗುರುತಿನ ಕಳ್ಳತನದ ಪ್ರಕರಣ ಸಂಭವಿಸಿದೆ ಎಂದು ಹೇಳಿದರು.

ಈ ವೇಳೆ 'ಆರೋಪಿಯು ತನ್ನ ಕರೆಯನ್ನು ಮುಂಬೈ ಮಾದಕ ದ್ರವ್ಯ ವಿಭಾಗದ ಅಧಿಕಾರಿಗೆ ವರ್ಗಾಯಿಸುವುದಾಗಿ ಹೇಳಿದನು. ಅವರು ತನ್ನ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಸ್ಕೈಪ್ ಕರೆಗೆ ಸೇರಿಕೊಳ್ಳಲು ಹೇಳಿದರು. ತಮ್ಮನ್ನು ಸಿಬಿಐ ಮತ್ತು ಆರ್‌ಬಿಐನಿಂದ ಕಳುಹಿಸಲಾಗಿದೆ ಎನ್ನುವ ನಕಲಿ ದಾಖಲೆಗಳನ್ನು ಗ್ಯಾಂಗ್ ನನಗೆ ತೋರಿಸಿದರು. ನನ್ನ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನೂ ತೆಗೆದುಕೊಂಡರು. ನಂತರ ಖಾಸಗಿ ಬ್ಯಾಂಕ್‌ನ ಒಂದೇ ಬ್ಯಾಂಕ್ ಖಾತೆಗೆ 1.34 ಲಕ್ಷ ರೂ. ಹಣವನ್ನು ಕಳುಹಿಸಿಕೊಂಡರು. ಅಕ್ರಮ ಎಂಡಿಎಂಎ ಪೂರೈಕೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಸಂತ್ರಸ್ತೆಯ ಹೇಳಿಕೆಯನ್ನು ಆಧರಿಸಿ ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಹಿವಾಟು ಸ್ಥಗಿತಗೊಳಿಸಲು ಪೊಲೀಸರು ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಆರೋಪಿಗಳ ಫೋನ್ ಸಂಖ್ಯೆಗಳು ಮತ್ತು ಬ್ಯಾಂಕ್ ಖಾತೆ ಸಂಖ್ಯೆಗಳನ್ನು ಸಂಗ್ರಹಿಸಿದ್ದಾರೆ ಮತ್ತು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಗಳ ವಿರುದ್ಧ ಐಟಿ ಕಾಯ್ದೆ 2000ರ ಅಡಿಯಲ್ಲಿ ಸುಲಿಗೆ (ಐಪಿಸಿ 384) ಮತ್ತು ವಂಚನೆ (ಐಪಿಸಿ 420) ಜೊತೆಗೆ ಪ್ರಕರಣ ದಾಖಲಿಸಲಾಗಿದೆ. 
ಸದಾಶಿವನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


    Post a Comment

    Previous Post Next Post