ಡಿಸ್ಟಿಕ್ ಹೆಲ್ತ್ ಕಛೇರಿ ಎದುರಿರುವ ಹರ್ಬಲ್ ಹೆಲ್ತ್ ಸೆಂಟರ್ ನ ಭ್ರಷ್ಟಾಚಾರ ಮುಗಿಲು ಮುಟ್ಟಿದೆ!; ಅಮಾಯಕ ಜನರ ಬಳಿ ಹಣ ವಸೂಲಿ.!

ಡಿಸ್ಟಿಕ್ ಹೆಲ್ತ್ ಆಫೀಸ್ ಕಛೇರಿ ಎದುರಿರುವ ಹರ್ಬಲ್ ಹೆಲ್ತ್ ಸೆಂಟರ್ ನಲ್ಲಿ ಭಷ್ಟಾಚಾರ ಮುಗಿಲು ಮುಟ್ಟದೆ . ಸಿಬ್ಬಂಧಿ ಒಬ್ಬರು ಫಿಟ್ ನೆಸ್ ಮತ್ತು ಮೆಡಿಕಲ್ ಸರ್ಟಿಫಿಕೇಟ್ ನೀಡುವುದಕ್ಕಾಗಿ ಹಣ ಪಡೆದುಕೊಳ್ಳುತ್ತಿರುವುದು ಕಂಡು ಬಂದಿದೆ. ಹೆಲ್ತ್ ಫಿಟ್ ನೆಸ್ ಸರ್ಟಿಫಿಕೇಟ್ ನೀಡಲು 100 ರೂ ಪಡೆಯುತ್ತಿದ್ದು, ಇದೇ ರೀತಿ ದಿನಕ್ಕೆ  ಎಷ್ಟು ಜನರ ಬಳಿ  ಹಣಪಡೆಯುತ್ತಿದ್ದಾರೋ ತಿಳಿಯದು. ಪಡೆದ ಹಣಕ್ಕೆ ಯಾವುದೇ ರೀತಿಯ ರಶೀದಿ ಸಹ ನೀಡುತ್ತಿಲ್ಲ.

                               

ಸರ್ಕಾರಿ ಕಛೇರಿಯಲ್ಲಿ ಬರುವ ಹಲವರು ಆರ್ಥಿಕ ಪರಿಸ್ಥಿತಿಯ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ ಆ ಕಾರಣದಿಂದಲೇ ಅವರು ಸರ್ಕಾರಿ ಕಛೇರಿಯಲ್ಲಿ ಉಚಿತ ಸೌಲಭ್ಯವನ್ನು ಪಡೆಯಲು ಬರುತ್ತಾರೆ ಆದರೆ ಸಿಬ್ಬಂಡಿ ಇದಾವುದರ ಅರಿವೆ ಇಲ್ಲದಂತೆ ಕಾನೂನು ಬಾಹಿರವಾಗಿ ಹಣಪಡೆಯುತ್ತಿರುವುದು ಖಂಡನೀಯವಾಗಿದೆ. 

ಈ ಒಂದು ಕಾನೂನು ಬಾಹಿರ ಚಟುವಟಿಕೆ ಡಿಸ್ಟಿಕ್ ಹೆಲ್ತ್ ಆಫೀಸ್ ನ ಬಳಿಯೇ ನಡೆಯುತ್ತಿದ್ದು ಅಲ್ಲಿನ ಅಧಿಕಾರಿಗಳಿಗೆ  ಈ  ಕೃತ್ಯ ಕಂಡುಬಂದಿಲ್ಲವೇ? ಕಣ್ಣ ಮುಂದೇಯೇ ಅಕ್ರಮ ಚಟುವಟಿಕೆ ನಡೆಯುತ್ತಿದ್ದರು ಮೌನವಾಗಿರುವುದು ಎಷ್ಟು ಸರಿ? ಅದನ್ನು ಪ್ರಶ್ನೆ ಮಾಡದೆ ಸುಮ್ಮನಿದ್ದರೆ ಇನ್ನೂ ಹೀಗೆ ಎಷ್ಟು ಜನ ಅಮಾಯಕರ ಬಳಿ ಹಣ ಪಡೆಯುತ್ತಾರೋ?  ಈ ವಿಷಯದ ಬಗ್ಗೆ ಗಂಭೀರವಾಗಿ ಕಾನೂನು ಕ್ರಮ ಜರುಗಿಸುವ ಅಗತ್ಯವಿದೆ. ಬಡವರಿಗಾಗಿ  ಸರ್ಕಾರ ಮಾಡಿರುವ  ಸೌಲಭ್ಯ ವನ್ನು ಈ ರೀತಿ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ನಾಚಿಕೆ ಗೇಡಿನ ವಿಷಯವಾಗಿದೆ.




 

Post a Comment

Previous Post Next Post