ಮಂಡಗದ್ದೆಯ ಫಾರೆಸ್ಟ್ ರೇಂಜರ್ ಆಫೀಸ್ ಮುಂದಿಯೇ ಅಕ್ರಮವಾಗಿ ಮರಳು ಗಣಿಗಾರಿಕೆಯನ್ನು ನವೆಸುತ್ತಿರುವುದು ನಿಜಕ್ಕೂ ಫಾರೆಸ್ಟ್ ರೇಂಜರ್ ಆಫೀಸ್ ನ ವ್ಯವಸ್ಥೆಯ ಬೇಜವಬ್ದಾರಿತನವನ್ನು ಕಾಣಬಹುದು. ಅಕ್ರಮವಾಗಿ ಬಿಲ್ ಇಲ್ಲದಂತೆ ಮರಳನ್ನು ಆಟೋ, ಬೈಕ್, ಟೆಂಪೋಗಳ ಮೂಲಕ ಸ್ಟಾಕ್ ಮಾಡಿ ತದನಂತರ ಅದನ್ನು ಲಾರಿಯಲ್ಲಿ ಲೋಡ್ ಮಾಡಲಾಗುತ್ತದೆ, ಇದೇ ರೀತಿ ದಿನಕ್ಕೆ 6 ರಿಂದ 10 ಲೋಡ್ ಆಗುತ್ತಿದೆ. ಈ ರೀತಿ ಅಕ್ರಮವಾಗಿ ಮರಳನ್ನು ಫಾರೆಸ್ಟ್ ರೇಂಜರ್ ಆಫೀಸ್ ಮುಂದೆಯೇ ನಡೆಸುತ್ತಿದ್ದರು ಅಲ್ಲಿನ ಅಧಿಕಾರಿಗಳು ಮೌನದಿಂದ ವರ್ತಿಸುತ್ತಿರುವುದು ಅಕ್ರಮ ಮರಳು ಸಾಗಾಟ ಮಾಡುವವರೆಗೆ ಇನ್ನಷ್ಟು ಬೆಂಬಲ ಸಿಕ್ಕಂತಾಗಿದೆ.
ಇದಕ್ಕೆ ಸಂಬಂಧಪಟ್ಟಂತಹ ಅಧಿಕಾರಿಗಳು ತಕ್ಷಣ ಕಾನೂನು ಕ್ರಮಕೈಗೊಳ್ಳದೆ ಸುಮ್ಮನಿದ್ದರೆ ಅವರ ಅಟ್ಟಹಾಸ ಇನ್ನಷ್ಟು ಬೆಂಬಲ ಸಿಕ್ಕಂತಾಗಿದೆ. ಇದಕ್ಕೆ ಸಂಬಂಧಪಟ್ಟಂತಹ ಅಧಿಕಾರಿಗಳು ತಕ್ಷಣ ಕಾನೂನು ಕ್ರಮಕೈಕೊಳ್ಳದೆ ಸುಮ್ಮನಿದ್ದರೆ ಅವರ ಅಟ್ಟಹಾಸ ಇನ್ನಷ್ಟು ಮಿತಿಮೀರುತ್ತದೆ. ನಾವು ಏನೇ ಮಾಡಿದರೂ ಅದನ್ನು ಕೇಳಲು ಯಾರೂ ಇಲ್ಲ ಎನ್ನುವ ಭಾವನೆ ಅಕ್ರಮ ಮರಳು ಗಣಿಗಾರಿಕೆಯನ್ನು ಮುಂದುವರೆಸಲು ಮತ್ತಷ್ಟು ಕುಮ್ಮಕ್ಕು ನೀಡಿದಂತಾಗುತ್ತದೆ. ನಾವು ಏನೇ ಮಾಡಿದರೂ ಅದನ್ನು ಯಾರೂ ಕೇಳಲು ಬರುವುದಿಲ್ಲ ಎಂದೇ ಅವರು ಅಕ್ರಮವಾಗಿ ಮರಳನ್ನು ಸಾಗಿಸುತ್ತಿರುವುದು. ಒಮ್ಮೆ ಅವರ ವಿರುದ್ದ ಕಾನೂನು ಕ್ರಮವನ್ನು ಕೈಗೊಂಡರೆ ಅದನ್ನು ನಿಲ್ಲಿಸಬಹುದಾಗಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಇದಕ್ಕೆ ಸಂಬಂಧಪಟ್ಟಂತಹ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಇರುವುದು ಎಷ್ಟರ ಮಟ್ಟಿಗೆ ಸರಿ?
ಹಲವಾರು ಜನರು ಪ್ರತಿನಿತ್ಯ ಅಲ್ಲಿ ಯಾವುದೇ ರೀತಿಯ ಭಯವಿಲ್ಲದಂತೆ ಮರಳನ್ನು ಸಾಗಿಸುತ್ತಿರುವುದು ನೋಡುತ್ತಿದ್ದರೆ ಅಧಿಕಾರಿಗಳ ಮೇಲಿನ ಭಯ ಅವರಿಗೆ ಎಷ್ಟರಮಟ್ಟಿಗೆ ಇದೆ ಎಂಬುದು ತಿಳಿಯುತ್ತಿದೆ. ಆದಷ್ಟು ಶೀಘ್ರವಾಗಿ ಅದಕ್ಕೆ ಸಂಬಂಧಪಟ್ಟಂತ ಅಧಿಕಾರಿಗಳು ಅದರ ಬಗ್ಗೆ ತನಿಖೆ ನಡೆಸಿ ಅವರ ವಿರುಧ್ಧ ಕ್ರಮಕೈಗೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ಅವರ ಅಟ್ಟಹಾಸ ಹೀಗೆ ಮುಂದುವರೆಯುವ ಮೂಲಕ ಸರ್ಕಾರಕ್ಕೆ ಸೇರಬೇಕಾದ ಹಣ ಎಲ್ಲವೂ ಅವರ ಬೊಕ್ಕಸಕ್ಕೆ ಸೇರುತ್ತದೆ.
Post a Comment