ತಮ್ಮ ಇಚ್ಛೆಗೆ ವಿರುದ್ಧವಾಗಿ ಇವಿಎಂ ಬಟನ್ ಒತ್ತಿಸಿದ್ದಾರೆಂದು ಆರೋಪ ಮಾಡಿರುವ 85 ವರ್ಷದ ವೃದ್ಧ ಮಹಿಳೆಯೊಬ್ಬರು, ಚುನಾವಣಾಧಿಕಾರಿಗಳ ವಿರುದ್ಧ ಪ್ರತಿಭಟನೆ ಬುಧವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನಡೆಸಿದ ವೃದ್ಧ ಮಹಿಳೆ ಮುಕ್ತುಂಬಿ ದೊಡ್ಡಮನಿ.
ಗದಗ: ತಮ್ಮ ಇಚ್ಛೆಗೆ ವಿರುದ್ಧವಾಗಿ ಇವಿಎಂ ಬಟನ್ ಒತ್ತಿಸಿದ್ದಾರೆಂದು ಆರೋಪ ಮಾಡಿರುವ 85 ವರ್ಷದ ವೃದ್ಧ ಮಹಿಳೆಯೊಬ್ಬರು, ಚುನಾವಣಾಧಿಕಾರಿಗಳ ವಿರುದ್ಧ ಪ್ರತಿಭಟನೆ ಬುಧವಾರ ಪ್ರತಿಭಟನೆ ನಡೆಸಿದರು.
ಮುಕ್ತುಂಬಿ ದೊಡ್ಡಮನಿ (85) ಪ್ರತಿಭಟನೆಗಿಳಿದ ವೃದ್ಧ ಮಹಿಳೆಯಾಗಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಮತಗಟ್ಟೆಯಲ್ಲಿ ಈ ಘಟನೆ ನಡೆದಿದೆ,
ಮತಗಟ್ಟೆಗೆ ಹೋದಾಗ ಸಿಬ್ಂಬದಿಯೊಬ್ಬು ನನ್ನನ್ನು ಇವಿಎಂ ಇರುವ ಕಡೆಗೆ ಕರೆದೊಯ್ದರು. ಈ ವೇಳೆ ನಾನು ಮತ ಚಲಾಯಿಸಲು ಬಯಸುವ ಅಬ್ಯರ್ಥಿಯ ಸಂಖ್ಯೆಯನ್ನು ತೋರಿಸಿದೆ. ಆದರೆ, ಅವರು ನನ್ನ ಕೈ ಹಿಡಿದು ಬಲವಂತವಾಗಿ ಬೇರೊಂದು ಬಟನ್ ಒತ್ತಿಸಿದರು. ಹೀಗಾಗಿ ನನ್ನ ಆಯ್ಕೆಯ ಅಭ್ಯರ್ಥಿಗೆ ಮತ ಹಾಕಲು ಅವಕಾಶ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದೆ ಎಂದು ದೊಡ್ಡಮನಿ ಅವರು ಹೇಳಿದ್ದಾರೆ.
ಉದ್ದೇಶ ಪೂರ್ವಕದಿಂದ ಬಟನ್ ಒತ್ತಲಾಗಿರಲಿಲ್ಲ. ಆಕಸ್ಮಿಕವಾಗಿ ಆಯಿತು. ಮಹಿಳೆಯ ಮನವರಿಕೆ ಮಾಡಲಾಗಿದ್ದು, ಇದೀಗ ಆಕೆಯನ್ನು ಮನೆಗೆ ಕಳುಹಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ.
Post a Comment