ಹನುಮಂತನ ಭಕ್ತರು ಸಿಡಿದೆದ್ದರೆ ಕಾಂಗ್ರೆಸ್ ಬೇರು ಸಮೇತ ಕಿತ್ತು ಹೋಗುತ್ತದೆ: ಸಿಎಂ ಬೊಮ್ಮಾಯಿ

 ಹನುಮಂತನ ಭಕ್ತರು ಬಂಡಾಯವೆದ್ದರೆ ದೇಶದಿಂದ ಕಾಂಗ್ರೆಸ್ ಬೇರು ಸಮೇತ ಕಿತ್ತು ಹೋಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಹೇಳಿದ್ದಾರೆ.

                                                                    ಸಿಎಂ ಬೊಮ್ಮಾಯಿ

Posted By : Rekha.M
Source : Online Desk

ಬೆಂಗಳೂರು: ಹನುಮಂತನ ಭಕ್ತರು ಬಂಡಾಯವೆದ್ದರೆ ದೇಶದಿಂದ ಕಾಂಗ್ರೆಸ್ ಬೇರು ಸಮೇತ ಕಿತ್ತು ಹೋಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಹೇಳಿದ್ದಾರೆ.

ಬಜರಂಗದಳ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಂತಹ ಸಂಘಟನೆಗಳನ್ನು ನಿಷೇಧಿಸುವುದಾಗಿ ಪಕ್ಷ ಘೋಷಿಸಿದ ಕಾಂಗ್ರೆಸ್ ಪ್ರಣಾಳಿಕೆಯ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಬಜರಂಗದಳ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಡುವೆ ಕಾಂಗ್ರೆಸ್ ಹೋಲಿಕೆ ಮಾಡುತ್ತಿರುವುದು ಅನುಚಿತವಾಗಿದೆ ಎಂದು ಹೇಳಿದರು.

“ಹನುಮಂತನ ಭಕ್ತರು ಭಜರಂಗದಳದ ಬಜರಂಗಿಗಳು ಮತ್ತು ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸುವುದಾಗಿ ಘೋಷಿಸಿದೆ. ಹನುಮಂತನ ಭಕ್ತರು ಬಂಡಾಯವೆದ್ದರೆ ಕಾಂಗ್ರೆಸ್ ಅನ್ನು ದೇಶದಿಂದ ಕಿತ್ತೊಗೆಯಲಾಗುತ್ತದೆ ಎಂದು ತಿಳಿಸಿದರು.

ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ, ಬಜರಂಗದಳವನ್ನು ನಿಷೇಧಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.

ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ನೀಡಿರುವ ಭರವಸೆಗಳು ಅವರ ನೀತಿಯನ್ನುತೋರಿಸುತ್ತದೆ. ಸಾಮಾಜಿಕ ಮತ್ತು ಧಾರ್ಮಿಕ ಸೇವಾ ಸಂಘವಾಗಿದೆ. ಪಿಎಫ್ಐ ದೇಶದ ವಿರುದ್ಧ ಕೆಲಸ ಮಾಡಿದೆ, ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿದೆ ಮತ್ತು ಅವರ ವಿರುದ್ಧ ಅನೇಕ ಪ್ರಕರಣಗಳು ಮತ್ತು ಸಾಕ್ಷ್ಯಗಳಿವೆ. ಆದ್ದರಿಂದ, ಪಿಎಫ್ಐ ಅನ್ನು ಬಜರಂಗದಳದೊಂದಿಗೆ ಹೋಲಿಸುವುದು ಸರಿಯಲ್ಲ. ಈಗಾಗಲೇ ಪಿಎಫ್‌ಐ ನಿಷೇಧಿಸಲಾಗಿದೆ ಎಂದು ಹೇಳಿದರು.

ಯಾವುದೇ ಸಂಘಟನೆಯನ್ನು ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲದಿರುವುದರಿಂದ ಕಾಂಗ್ರೆಸ್ ಬಜರಂಗದಳವನ್ನು ನಿಷೇಧಿಸುವ ಪ್ರಶ್ನೆಯೇ ಇಲ್ಲ. ಕೇಂದ್ರದಿಂದ ಮಾತ್ರ ಅದು ಸಾಧ್ಯ ಎಂದರು. ಇದೇ ವೇಳೆ ಕಾಂಗ್ರೆಸ್ ಪ್ರಣಾಳಿಕೆಯು ಜನರನ್ನು ದಾರಿ ತಪ್ಪಿಸುವ ಪ್ರಣಾಳಿಕೆಯಾಗಿದೆ ಎಂದು ಕಿಡಿಕಾರಿದ್ದಾರೆ


Post a Comment

Previous Post Next Post