ನಿವೃತ್ತರಾಗಿ ಎಂದು ಹೇಳುತ್ತಾರಲ್ಲಾ... 4 ಬಾರಿ ಸಿಎಂ, 2 ಬಾರಿ ಪ್ರಧಾನಮಂತ್ರಿಯಾಗಿರುವ ಮೋದಿಯವರು ಅಧಿಕಾರ ಬಿಟ್ಟುಕೊಡುತ್ತಾರೆಯೇ ಎಂದು ಬಿಜೆಪಿ ಮಾಜಿ ನಾಯಕ ಜಗದೀಶ್ ಶೆಟ್ಟರ್ ಅವರು ಗುರುವಾರ ಪ್ರಶ್ನಿಸಿದ್ದಾರೆ.
ಜಗದೀಶ್ ಶೆಟ್ಟರ್
ಹುಬ್ಬಳ್ಳಿ: ನಿವೃತ್ತರಾಗಿ ಎಂದು ಹೇಳುತ್ತಾರಲ್ಲಾ... 4 ಬಾರಿ ಸಿಎಂ, 2 ಬಾರಿ ಪ್ರಧಾನಮಂತ್ರಿಯಾಗಿರುವ ಮೋದಿಯವರು ಅಧಿಕಾರ ಬಿಟ್ಟುಕೊಡುತ್ತಾರೆಯೇ ಎಂದು ಬಿಜೆಪಿ ಮಾಜಿ ನಾಯಕ ಜಗದೀಶ್ ಶೆಟ್ಟರ್ ಅವರು ಗುರುವಾರ ಪ್ರಶ್ನಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಎಲ್ಲಾ ಹುದ್ದೆಗಳೂ ಸಿಕ್ಕಿದೆ. ಇನ್ನು ನಿವೃತ್ತರಾಗಿ ಎಂದು ಹೇಳುತ್ತಾರಲ್ಲಾ? ಮೋದಿಯವರು ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದಾರೆ, ಎರಡು ಬಾರಿ ಪ್ರಧಾನಮಂತ್ರಿಗಳಾಗಿದ್ದಾರೆ. ಈ ಹಂತದಲ್ಲಿ ಅವರು ಅಧಿಕಾರ ಬಿಟ್ಟುಕೊಡುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಪ್ರಹ್ಲಾದ್ ಜೋಶಿ ಅವರು ನಾನೇ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಎಂದು ಹೇಳುತ್ತಿದ್ದಾರೆ. ಈ ಹೇಳಿಕೆ ಏಣಿ ಹತ್ತಿ ನಿಚ್ಚಣಿಕೆ ತೆಗೆದು ಹಾಕಿದ್ರು ಅಂತಾರಲ್ಲಾ ಹಾಗೆ ಆಗಿದೆ ನನ್ನ ಪರಿಸ್ಥಿತಿ. ನನ್ನನ್ನು ಮುಖ್ಯಮಂತ್ರಿ ಮಾಡಿದ್ದು ಸೀನಿಯಾರಿಟಿ ಮೇಲೆ. ನನ್ನನ್ನು ಪ್ರಲ್ಹಾದ್ ಜೋಶಿ ಮಂತ್ರಿ ಎಂದು ನಾನು ಹೇಳಿಲ್ಲ. ಅವರೂ ಹೇಳಿಲ್ಲ. ಈಗ ಚುನಾವಣೆಗಾಗಿ ಹೇಳ್ತಿದ್ದಾರೆ. ಪ್ರಲ್ಹಾದ್ ಜೋಶಿ ಸುಳ್ಳು ಹೇಳೋದು ಕಲಿತಿದ್ದಾರೆಂದು ಹೇಳಿದರು.
ಬಿಜೆಪಿ ನನಗೆ ಟಿಕೆಟ್ ಕೊಡದೆ ಮೋಸ ಮಾಡಿದ್ದರಿಂದ ದೊಡ್ಡ ಪರಿಣಾಮ ಆಗುವುದು ಖಚಿತ. ನನಗೆ ಟಿಕೆಟ್ ಕೊಟ್ಟಿದ್ದರೆ ಎಲ್ಲವೂ ಸರಿ ಇರುತ್ತಿತ್ತು. ನನಗೆ ಟಿಕೆಟ್ ನೀಡದಿದ್ದರಿಂದ 15-20 ಕ್ಷೇತ್ರಗಳಲ್ಲಿ ಬಿಜೆಪಿ ಪರಿಣಾಮ ಎದುರಿಸಬೇಕಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಸಂಘಟಿತ ಪ್ರಯತ್ನದಿಂದ ಪಕ್ಷ ಅಧಿಕಾರಕ್ಕೆ ಬರಲಿದೆ. ಇಬ್ಬರೂ ನಾಯಕರು. ಸರ್ಕಾರದ ವೈಫಲ್ಯವನ್ನು ಜನರಿಗೆ ಸ್ಪಷ್ಟವಾಗಿ ಹೇಳುವ ಕೆಲಸ ಮಾಡಿದರು. ಇದು ಯಶಸ್ವಿಯಾಗಿದೆ ಎಂದರು
Post a Comment