ಮತ ಹಾಕಿ ಬ್ಯಾಲೆಟ್ ಪೇಪರ್ ಜೊತೆಗೆ ಯೋಧನೊಬ್ಬ ಫೋಟೋ ತೆಗೆಸಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ.
ಮತದಾನ ಬಹಿರಂಗ ಪಡಿಸಿದ ಯೋಧ
ಮೈಸೂರು: ಮತ ಹಾಕಿ ಬ್ಯಾಲೆಟ್ ಪೇಪರ್ ಜೊತೆಗೆ ಯೋಧನೊಬ್ಬ ಫೋಟೋ ತೆಗೆಸಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ನಿಮಿತ್ತ ಮತ ಪ್ರಕ್ರಿಯಲ್ಲಿ ಪಾಲ್ಗೊಳ್ಳುವ ಸರ್ಕಾರಿ ಸಿಬ್ಬಂದಿಗಳಿಗೆ ಚುನಾವಣಾ ಆಯೋಗ ಬ್ಯಾಲೆಟ್ ಮತದಾನ ಆರಂಭಿಸಿದೆ. ಈಗಾಗಲೇ ಸಾವಿರಾರು ಸಿಬ್ಬಂದಿಗಳು ಮತದಾನ ಮಾಡಿದ್ದು, ಇಲ್ಲೋರ್ವ ಯೋಧ ತಾನು ಮತದಾನ ಮಾಡಿ ಅದರ ಬ್ಯಾಲೆಟ್ ಪೇಪರ್ ಜೊತೆ ಫೋಟೋ ತೆಗೆಸಿಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾರೆ. ಈ ಫೋಟೋ ಇದೀಗ ವ್ಯಾಪಕ ವೈರಲ್ ಆಗಿದೆ.
ಈ ಫೋಟೋ ಅಫ್ಲೋಡ್ ಮಾಡಿ ಅದರ ಜೊತೆಗೆ ಆ ಫೋಟೋದೊಂದಿಗೆ, ನಮ್ಮ “ಸಾ.ರಾ. ಬಾಸ್”ಗೆ ಮೊದಲ ಮತ. ನಮ್ಮ ದೇಶ ಕಾಯುವ ಸೈನಿಕನಿಂದ ಜೈ ಹಿಂದ್ ಎಂಬ ಅಡಿಬರಹವಿದೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಯೋಧ ಕೆ.ಆರ್.ನಗರದ ಕ್ಷೇತ್ರದ ಮತದಾರ ಎಂಬುದು ಪೋಸ್ಟ್‌ನಿಂದ ತಿಳಿದುಬಂದಿದೆ. ಕರ್ತವ್ಯದ ಹಿನ್ನಲೆಯಲ್ಲಿ ಹೊರ ರಾಜ್ಯದಿಂದ ಅಂಚೆ ಮತದಾನ ಮಾಡಿದ್ದಾರೆ ಎನ್ನಲಾಗಿದೆ.
ಸದ್ಯ ಯೋಧ ಯಾರು ಮತ್ತು ಎಲ್ಲಿಂದ ಮತ ಹಾಕಿದ್ದಾರೆ ಎಂಬುದನ್ನ ಚುನಾವಣಾಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ.
ಗೌಪ್ಯ ಮತದಾನವಾಗಿದ್ದರೂ ಮತ ಬಹಿರಂಗ ಹಿನ್ನಲೆ ಮತ ರದ್ದು ಸಾಧ್ಯತೆ
ಇನ್ನು ಗೌಪ್ಯ ಮತದಾನವಾಗಿದ್ದರೂ ತಾನು ಯಾರಿಗೆ ಮತ ಹಾಕಿದ್ದೇನೆ ಎಂದು ಯೋಧ ಬಹಿರಂಗ ಮಾಡಿರುವುದರಿಂದ ಯೋಧನ ಮತವನ್ನು ಚುನಾವಣಾಧಿಕಾರಿಗಳು ರದ್ದು ಮಾಡುವ ಸಾಧ್ಯತೆ ಇದೆ.
ಇದೇ ಮೇ 10 ರಂದು ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಿರಿಯರು, ಬೇರೆ ಬೇರೆ ಕಡೆಯಿರುವ ಸರ್ಕಾರಿ ನೌಕರರು ತಾವು ಇರುವಲ್ಲಿಂದಲೇ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಕೆ.ಆರ್.ನಗರ ಕ್ಷೇತ್ರದಲ್ಲಿ ಶಾಸಕ ಸಾ.ರಾ.ಮಹೇಶ್ (Sa.Ra.Mahesh) (ಜೆಡಿಎಸ್), ಜಿಪಂ ಮಾಜಿ ಸದಸ್ಯ ಡಿ.ರವಿಶಂಕರ್ (ಕಾಂಗ್ರೆಸ್), ಹೊಸಹಳ್ಳಿ ವೆಂಕಟೇಶ್ (ಬಿಜೆಪಿ) ಕಣದಲ್ಲಿದ್ದಾರೆ.
Post a Comment