ಕನ್ನಡಿಗರನ್ನು ನಿಂದಿಸಿ ವಿಡಿಯೋ ಮಾಡಿದ್ದ ಬಿಹಾರ ಮೂಲದ ಯುವಕನ ವಿರುದ್ಧ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರು: ಕನ್ನಡಿಗರನ್ನು ನಿಂದಿಸಿ ವಿಡಿಯೋ ಮಾಡಿದ್ದ ಬಿಹಾರ ಮೂಲದ ಯುವಕನ ವಿರುದ್ಧ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ಮೆಟ್ರೋ ನಿಲ್ದಾಣ ಬಳಿಯ ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಬಿಹಾರದ ನಿತೀಶ್ ಕುಮಾರ್ ಎಂಬ ಯುವಕ ಸ್ಥಳೀಯರಿಂದ ತನ್ನ ಮೇಲೆ ಭಾಷಾ, ಜನಾಂಗೀಯ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಏಪ್ರಿಲ್ 7 ರಂದು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ. ಬಿಹಾರಿಗಳನ್ನು ಮುಟ್ಟುವವರು ಮುಂದೆ ಬನ್ನಿ ಎಂದು, ಅವಾಚ್ಯ ಶಬ್ದ ಬಳಸಿ ಟೀಕೆ ಮಾಡಿರುವುದು ವಿಡಿಯೋದಲ್ಲಿದೆ.
ಶಾಂತಿ, ಸಾಮರಸ್ಯಕ್ಕೆ ಭಂಗ ತಂದಿರುವ ನಿತೀಶ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೂಪೇಶ್ ರಾಜಣ್ಣ ಮನವಿ ಮಾಡಿದ್ದಾರೆ. ದೂರಿನ ಪ್ರತಿಯನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿರುವ ರೂಪೇಶ್ ರಾಜಣ್ಣ, ತಮಿಳುನಾಡು ಆಯಿತು ಈಗ ಕರ್ನಾಟಕ. ಕನ್ನಡಿಗರ ಬಗ್ಗೆ ಇಲ್ಲ ಸಲ್ಲದ ಅಪ ಪ್ರಚಾರ. ಇಲ್ಲೇ ಕೆಲಸ ಮಾಡುತ್ತಿರೋ ಬಿಹಾರ ಮೂಲದ ಯುಟ್ಯೂಬರ್ ತಾನು ಫೇಮಸ್ ಆಗಲು ಕನ್ನಡಿಗರ ನಿಂದನೆ ಮಾಡಿದ್ದಾನೆ ಎಂದಿದ್ದಾರೆ.
ತಮಿಳುನಾಡಲ್ಲಿ ಬಿಹಾರಿಗಳ ಮೇಲೆ ಹಲ್ಲೆ ಆಗಿದೆ ಅಂತ ಸುಳ್ಳು ಸುದ್ದಿ ಹಬ್ಬಿಸಿದ ಮನೀಶ್ ಕಶ್ಯಪ್ ಬೆಂಬಲಿಗ ಈ ನಿತೀಶ್ ಕುಮಾರ್. ಇವನು ಅಜೆಂಡಾ ಇಟ್ಟುಕೊಂಡೆ ವಿಡಿಯೋ ಮಾಡಿದ್ದು, ಇತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
Post a Comment