ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸಲು ಮುಖಅಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಈ ಹಿನ್ನೆಲೆ ಇಂದು ಶಿಗ್ಗಾಂವಿಗೆ ಆಗಮಿಸಲಿರುವ ನಟ ಕಿಚ್ಚ ಸುದೀಪ್ ಅವರು, ಸಿಎಂ ಬೊಮ್ಮಾಯಿ ಪರ ಪ್ರಚಾರ ನಡೆಸಲಿದ್ದಾರೆ.
ಸಂಗ್ರಹ ಚಿತ್ರ
ಬೆಂಗಳೂರು: ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸಲು ಮುಖಅಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಈ ಹಿನ್ನೆಲೆ ಇಂದು ಶಿಗ್ಗಾಂವಿಗೆ ಆಗಮಿಸಲಿರುವ ನಟ ಕಿಚ್ಚ ಸುದೀಪ್ ಅವರು, ಸಿಎಂ ಬೊಮ್ಮಾಯಿ ಪರ ಪ್ರಚಾರ ನಡೆಸಲಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದ ಮತ್ತೊಮ್ಮೆ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಇದರಂತೆ ಚಿತ್ರನಟ ಸುದೀಪ್ ಸೇರಿದಂತೆ ಹಲವು ಸಿನಿ ತಾರೆಯರು ಭಾಗಿಯಾಗಲಿದ್ದಾರೆ.
ನಾಮಪತ್ರ ಸಲ್ಲಿಕೆ ಮುಗಿದ ಬಳಿಕ ನಟ ಕಿಚ್ಚ ಸುದೀಪ್ ಅವರು ರಾಜ್ಯಾದ್ಯಂತ ಬಿಜೆಪಿ ಪರ ಪ್ರಚಾರ ನಡೆಸಲಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ನಟ ಸುದೀಪ್ ಸೇರಿದಂತೆ 10 ಕ್ಕೂ ಹೆಚ್ಚು ಸಚಿವರು ಭಾಗವಹಿಸಲಿದ್ದಾರೆ.
ಸಿಎಂ ಬೊಮ್ಮಾಯಿ ಅವರೊಂದಿಗೆ ಸುದೀಪ್ ಅವರು, ಇಂದು ಬೆಳಗ್ಗೆ 10.30ಕ್ಕೆ ಹುಬ್ಬಳ್ಳಿಯಿಂದ ಹೊರಟು ಶಿಗ್ಗಾಂವಿಗೆ 10.50ಕ್ಕೆ ತಲುಪಲಿದ್ದಾರೆ.
ಶಿಗ್ಗಾಂವಿ ಸಂತೆ ಮೈದಾನದಿಂದ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ಹಳೆ ಬಸ್ ನಿಲ್ದಾಣದ ಮಾರ್ಗವಾಗಿ ತಾಲೂಕು ಕ್ರೀಡಾಂಗಣದವರೆಗೆ ಸಾಗಲಿದ್ದಾರೆ. ಅಲ್ಲಿ 12.15 ರಿಂದ ಮಧ್ಯಾಹ್ನ 1.30 ರವರೆಗೆ ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 2 ಗಂಟೆಗೆ ಶಿಗ್ಗಾಂವಿ ತಹಸೀಲ್ದಾರ್ ಕಾರ್ಯಾಲಯಕ್ಕೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಬೊಮ್ಮಾಯಿಯವರ ಬ್ಲ್ಯೂ ಪ್ರಿಂಟ್ ಪ್ರಕಾರ ಪ್ರಚಾರ: ಸುದೀಪ್
ಶಿಗ್ಗಾಂವಿ ಕ್ಷೇತ್ರದಿಂದ ಚುನಾವಣಾ ಪ್ರಚಾರ ಶುರು ಮಾಡುತ್ತೇನೆ. ಈ ಹಿಂದೆಯೂ ನನ್ನ ಸ್ನೇಹಿತರ ಪರವಾಗಿ ಪ್ರಚಾರ ಮಾಡಿದ್ದೇನೆ. ಸಿಎಂ ಬೊಮ್ಮಾಯಿ ಅವರು ಹೇಳಿದ ಕಡೆ ನಾನು ಪ್ರಚಾರ ಮಾಡುತ್ತೇನೆ ಎಂದು ನಟ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.
ಚುನಾವಣಾ ಪ್ರಚಾರ ನನಗೇನು ಹೊಸದಲ್ಲ. ಇದು ಶಿಗ್ಗಾಂವಿ ಕ್ಷೇತ್ರದಿಂದ ಪ್ರಚಾರ ಆರಂಭ ಮಾಡುತ್ತಿದ್ದೇವೆ. ಪಾದಯಾತ್ರೆ, ರೋಡ್ ಶೋ ಎಲ್ಲವನ್ನೂ ನಡೆಸಲಾಗುತ್ತದೆ. 7ನೇ ತಾರೀಖಿನವರೆಗೂ ಪ್ರಚಾರ ನಡೆಸಲಾಗುತ್ತದೆ. ಯಾರ ಪರವಾಗಿ ಪ್ರಚಾರ ಮಾಡಬೇಕು, ಹೇಗೆ ಪ್ರಚಾರ ಮಾಡಬೇಕು ಎನ್ನುವುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಟೀಂ ಬ್ಲ್ಯೂ ಪ್ರಿಂಟ್ ರೆಡಿ ಮಾಡಿದೆ. ಆ ಬ್ಲ್ಯೂ ಪ್ರಿಂಟ್ ಪ್ರಕಾರ ಪ್ರಚಾರ ನಡೆಸಲಾಗುತ್ತದೆ ಎಂದು ಹೇಳಿದರು.
ನನಗೆ ಬೇರೆ ಕಡೆಯಿಂದಲೂ ಪ್ರಚಾರ ಮಾಡುವಂತೆ ಕೇಳುತ್ತಿದ್ದರು. ಪ್ರತಿ ಬಾರಿಯೂ ಕೇಳುತ್ತಾರೆ, ಅದರಂತೆ ಈ ಬಾರಿಯೂ ಕೇಳಿದ್ದಾರೆ. ಆದರೆ, ಈ ಸಾರಿ ನಾನು ಇದನ್ನೇ ಆಯ್ಕೆ ಮಾಡಿದ್ದೇನೆ. ಈಗಾಗಗಲೇ ಕಾರಣವನ್ನೂ ಹೇಳಿದ್ದೇನೆ ಎಂದು ತಿಳಿಸಿದರು.
Post a Comment