ಕೋಟಿಗಟ್ಟಲೆ ಖರ್ಚು ಮಾಡಿ ದೊಡ್ಡ ಯೋಜನೆಗಳನ್ನು ನೀಡುವ ಸರ್ಕಾರಕ್ಕೆ ಶಾಲಾ ಮಕ್ಕಳಿಗೆ ಹಾಲು ಪೂರೈಸಲು ಆಗುವುದಿಲ್ಲವೇ: ಆಹಾರ ನಮ್ಮ ಹಕ್ಕು ಸದಸ್ಯರಿಂದ ಪತ್ರ

 ಹಾಲಿನ ಅಭಾವದ ವರದಿಗಳ ನಡುವೆ, ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳು ಮತ್ತು ಅಂಗನವಾಡಿಗಳಲ್ಲಿ ಹಾಲು ಸರಬರಾಜು ಮತ್ತೆ ಆರಂಭಿಸಬೇಕೆಂದು ಒತ್ತಾಯಿಸಿ ನಾಗರಿಕ ಹಕ್ಕುಗಳ ಸಂಘಟನೆಯ ಕಾರ್ಯಕರ್ತರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

                                                ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

By : Rekha.M
Online Desk

ಬೆಂಗಳೂರು: ಹಾಲಿನ ಅಭಾವದ ವರದಿಗಳ ನಡುವೆ, ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳು ಮತ್ತು ಅಂಗನವಾಡಿಗಳಲ್ಲಿ ಹಾಲು ಸರಬರಾಜು ಮತ್ತೆ ಆರಂಭಿಸಬೇಕೆಂದು ಒತ್ತಾಯಿಸಿ ನಾಗರಿಕ ಹಕ್ಕುಗಳ ಸಂಘಟನೆಯ ಕಾರ್ಯಕರ್ತರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

'ಆಹಾರ ನಮ್ಮ ಹಕ್ಕಿ'ನ ಸದಸ್ಯರು ಮಾತನಾಡಿ, 2023ರ ಜನವರಿಯಿಂದ ಶಾಲೆಗಳಿಗೆ ಕ್ಷೀರ ಭಾಗ್ಯ ಯೋಜನೆಯಡಿ ಹಾಲು ಪೂರೈಕೆ ಅನಿಯಮಿತವಾಗಿದ್ದು, ಅಪೌಷ್ಟಿಕತೆ ಪ್ರಕರಣಗಳು ಹೆಚ್ಚಿರುವ ಬಳ್ಳಾರಿ, ಬೀದರ್, ಗದಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸ್ಥಗಿತಗೊಂಡಿದೆ.

“ಮಕ್ಕಳು ಅನೇಕ ಬಾರಿ ಶಾಲೆಗೆ ಹಸಿವಿನಿಂದ ಹೋಗುತ್ತಾರೆ. ಶಾಲೆಯಲ್ಲಿ ಮಧ್ಯಾಹ್ನ ಊಟ ಮತ್ತು ರಾತ್ರಿಯ ಊಟ ನಂತರ 15-16 ಗಂಟೆಗಳ ನಂತರ ಹಾಲನ್ನು ಸೇವಿಸುತ್ತಾರೆ. ಇಂತಹ ಪ್ರಮುಖ ಯೋಜನೆಯನ್ನು ಸ್ಥಗಿತಗೊಳಿಸಿದಾಗ ಶಾಲಾ ಮಕ್ಕಳ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ಕ್ಷೀರ ಭಾಗ್ಯ ಯೋಜನೆ ಮುಖ್ಯವಾಗಿದೆ. ಮೆಟ್ರೋ ರೈಲು ಮತ್ತು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಮುಂತಾದ ಬಹುಕೋಟಿ ಯೋಜನೆಗಳನ್ನು ಉದ್ಘಾಟಿಸುವ ಸರ್ಕಾರಕ್ಕೆ ಮೂರು ತಿಂಗಳಿನಿಂದ ಶಾಲೆಗಳಿಗೆ ಹಾಲಿನ ಪುಡಿ ಪೂರೈಸಲು ಏಕೆ ವಿಫಲವಾಗಿದೆ ಎಂದು ತಮ್ಮ ಪತ್ರದಲ್ಲಿ ಸರ್ಕಾರಕ್ಕೆ ಕೇಳಿದ್ದಾರೆ. 

ನವೆಂಬರ್ 2022 ರಿಂದ ಬಾಕಿ ಉಳಿದಿರುವ ಹಾಲಿನ ರೈತರಿಗೆ ಪ್ರೋತ್ಸಾಹಧನ ನೀಡಬೇಕು ಮತ್ತು ಕರ್ನಾಟಕ ಹಾಲು ಮಹಾಮಂಡಳ (KMF) ಮತ್ತು ಶಿಕ್ಷಣ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ನಡುವಿನ ಎಲ್ಲಾ ಬಾಕಿಗಳನ್ನು ಇತ್ಯರ್ಥಪಡಿಸುವಂತೆ ಒತ್ತಾಯಿಸಿದರು. ಹಳೆಯ ದಾಸ್ತಾನುಗಳನ್ನು ಕೆಎಂಎಫ್ ನಿರ್ವಹಿಸುವಂತೆಯೂ ಅವರು ಸಲಹೆ ನೀಡಿದರು.


Post a Comment

Previous Post Next Post