ಯುವಕನೊಬ್ಬ ಜನನಿಬಿಡ ಪ್ರದೇಶದಲ್ಲಿ ನಿಂತುಕೊಂಡು ಪಾಕಿಸ್ತಾನ್ ಜಿಂದಾಬಾದ್ ಎಂದಿದ್ದಾನೆ. ಇದರಿಂದಾಗಿ ಗಾಬರಿಗೊಂಡ ಸ್ಥಳೀಯರು ಈತನನ್ನು ಉಗ್ರ ಎಂದುಕೊಂಡಿದ್ದಾರೆ. ಭೀತಿಗೊಳಗಾಗಿದ್ದ ಸಾರ್ವಜನಿಕರು ತಕ್ಷಣ ಪೊಲೀಸರನ್ನು ಕರೆ ಮಾಡಿದ್ದಾರೆ.
ಸಾಂದರ್ಭಿಕ ಚಿತ್ರ
ಬೆಂಗಳೂರು: ಯುವಕನೊಬ್ಬ ಜನನಿಬಿಡ ಪ್ರದೇಶದಲ್ಲಿ ನಿಂತುಕೊಂಡು ಪಾಕಿಸ್ತಾನ್ ಜಿಂದಾಬಾದ್ ಎಂದಿದ್ದಾನೆ. ಇದರಿಂದಾಗಿ ಗಾಬರಿಗೊಂಡ ಸ್ಥಳೀಯರು ಈತನನ್ನು ಉಗ್ರ ಎಂದುಕೊಂಡಿದ್ದಾರೆ. ಭೀತಿಗೊಳಗಾಗಿದ್ದ ಸಾರ್ವಜನಿಕರು ತಕ್ಷಣ ಪೊಲೀಸರನ್ನು ಕರೆ ಮಾಡಿದ್ದಾರೆ.
ಈ ಘಟನೆ ಮೈಕೋ ಲೇ ಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬಿಟಿಎಂ ಲೇಔಟ್ 2nd ಸ್ಟೇಜ್ 7th ಮೈನ್ ಬಳಿ ನಿನ್ನೆ ಬೆಳಿಗ್ಗೆ ನಡೆದಿದೆ. ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ ಯುವಕನನ್ನು ಅಂಕುಶ್ (24) ಎಂದು ಗುರುತಿಸಲಾಗಿದೆ.
ಬೆಂಗಳೂರಿನ ಪಿಜಿ ನಲ್ಲಿ ವಾಸವಾಗಿದ್ದಅಂಕುಶ್ ಮಾನಸಿಕ ಅಸ್ವಸ್ಥನ ರೀತಿಯಲ್ಲಿದ್ದು, ವಿಚಾರಣೆ ವೇಳೆ ಆತ ತಮಾಷೆಗಾಗಿ ಘೋಷಣೆ ಕೂಗಿರುವುದಾಗಿ ತಿಳಿದುಬಂದಿದೆ. ಮಾಹಿತಿ ಸಿಕ್ಕಿದ್ದೇ ಸ್ಥಳಕ್ಕೆ ಬಂದ ಮೈಕೋ ಲೇಔಟ್ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಠಾಣೆಗೆ ಕರೆದೊಯ್ದು ಆತನನ್ನು ವಿಚಾರಣೆ ಮಾಡಿದಾಗ ಮಾನಸಿಕ ಅಸ್ವಸ್ಥ ಅನ್ನುವುದು ಗೊತ್ತಾಗಿದೆ.
ಪೊಲೀಸರು ಮುಂಜಾನೆಯಿಂದ ರಾತ್ರಿವರೆಗೂ ವಿಚಾರಣೆ ಮಾಡಿದ್ದು ನಂತರ ಆತನ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಆಗ ಅವರು ಇತ್ತೀಚೆಗೆ ಮೆಂಟಲಿ ಡಿಸ್ಟರ್ಬ್ ಆಗಿದ್ದ ಅಂದಿದ್ದಾರೆ. ನಂತರ ಆತನ ಬಗ್ಗೆ ಪೂರ್ವಾಪರ ವಿಚಾರಿಸಿದ ಪೊಲೀಸರು ಆತನನ್ನು ಬಿಟ್ಟು ಕಳುಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ.
Post a Comment