ಕುಂದಗೋಳ ಪಟ್ಟಣದ ತಾಲೂಕು ಕಲ್ಯಾಣಾಧಿಕಾರಿಗಳ ಕಛೇರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅದೀನದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಕಮಡೊಳಿಯಲ್ಲಿ ಕೆಲಸ ನಿರ್ವಹಣೆ ಮಾಡುತ್ತಾ ಇದ್ದ ವಿಕಲಚೇತನ ಮಂಜುನಾಥ ಸೋಮಣ್ಣ ಅಕ್ಕಿ ಎಂಬ ಅಡುಗೆ ಸಹಾಯಕ ತಾನು ಕೆಲಸ ನಿರ್ವಹಿಸುತ್ತಿದ್ದ ಕಛೇರಿಯಲ್ಲೇ ನೇಣಿಗೆ ಶರಣಾಗಿದ್ದಾನೆ.
ಈ ಘಟನೆಗೆ ಸಂಬಂಧಿಸಿದಂತೆ ಮೃತ ಅಡುಗೆ ಸಹಾಯಕನ ಕುಟುಂಬಸ್ಥರು ಕುಂದಗೋಳ ಪಟ್ಟಣದ ತಾಲೂಕು ಕಲ್ಯಾಣಾಧಿಕಾರಿಗಳಾ ಕಛೇರಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಎದುರು ದುಃಖದ ಮಡುವಿನಲ್ಲಿ ಮೌನ ಧರಣಿ ನಡೆಸಿ ಮೃತ ಅಡುಗೆ ಸಹಾಯಕನ ಸಾವಿಗೆ ಹಾಸ್ಟೆಲ್ ಮೇಲ್ವೀಚಾರಕ ರಾಮಕೃಷ್ಣ ಮಾರುತಿ ಸಾವಂತ್ ನೀಡುತ್ತಿದ್ದ ಕಿರುಕುಳವೇ ಕಾರಣ ಎಂದು ಆರೋಪ ಮಾಡಿದ್ದಾರೆ. ಸದ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಎದುರು ಪ್ರತಿಭಟನೆ ನಡೆಸುತ್ತಿರುವ ಮೃತನ ಕುಟುಂಬಸ್ಥರು ಹಾಗೂ ಸಂಕ್ಲಿಪುರ ಗ್ರಾಮಸ್ಥರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ನ್ಯಾಯ ಕೇಳ್ತಾ ಇದ್ದಾರೆ.
ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಹಾಸ್ಟೆಲ್ ಮೇಲ್ವಿಚಾರಕ ರಾಮಕೃಷ್ಣ ಮಾರುತಿ ಸಾವಂತ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆ ಆಗಿರುವುದು ಸಂಶಯಕ್ಕೆ ಕಾರಣವಾಗಿದೆ. ಒಟ್ಟಾರೆ ಹಾಸ್ಟೆಲ್ ಮೇಲ್ವೀಚಾರಕ ರಾಮಕೃಷ್ಣ ಸಾವಂತ್ ಒಟ್ಟು ಮೂರು ಹಾಸ್ಟೆಲ್ ಗಳನ್ನು ಪ್ರಭಾರಿಯಾಗಿ ನಿರ್ವಹಿಸುತ್ತಿದ್ದರೂ ಎಂಬುದು ಸಹ ಇಲ್ಲಿ ಗಮನಿಸಬಹುದಾದ ಅಂಶ ಆಗಿದ್ದು, ಮೃತ ಅಡುಗೆ ಸಹಾಯಕ ಮಂಜುನಾಥನ ಕುಟುಂಬಸ್ಥರು ಕಛೇರಿ ಎದುರು ಶವ ಇಟ್ಟು ಧರಣಿ ನಡೆಸಲು ಸಜ್ಜಾಗಿದ್ದಾರೆ.
Post a Comment