ಮೈಕಲ್ಲಿ ಜೋರಾಗಿ ಕೂಗಿದ್ರೆ ಮಾತ್ರ ಕೇಳುತ್ತೆ ಅಂದ್ರೆ ಅಲ್ಲನಿಗೆ ಕಿವುಡಾ! ಮುಸ್ಲಿಮರ ಓಟ್ ನಮಗೆ ಬೇಡ - ಈಶ್ವರಪ್ಪ ವಿವಾದಾತ್ಮಕ ಹೇಳಿಕೆ

 ಬಿಜೆಪಿ ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಅವರು ಮುಸ್ಲಿಂ ಸಮುದಾಯದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಝಾನ್‌ ಮೈಕ್‌ ಅಳವಡಿಕೆ ಕುರಿತು ಮಾತನಾಡುವಾಗ ಅಲ್ಲನಿಗೆ ಕಿವುಡಾ ಎಂದು ಕೇಳಿದ್ದಾರೆ.

ಮಂಗಳೂರು: ಮೈಕ್ ಹಾಕಿ ಕೂಗಿದ್ರೆ ಮಾತ್ರ ಅಲ್ಲಾಗೆ ಕಿವಿ ಕೇಳೋದಾ? ಹಾಗಾದರೆ, ಅವನಿಗೆ ಕಿವುಡಾ ಅಂತ ಹೇಳ್ಬೆಕಾಗುತ್ತದೆ ಎಂದು ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಕಾವೂರಿನಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಈಶ್ವರಪ್ಪ, ಮಸೀದಿಯ ಅಝಾನ್‌ಗೆ ಅಸಮಾಧಾನ ವ್ಯಕ್ತಪಡಿಸಿದರು. ಮೈಕ್ ಹಾಕಿ ಕೂಗಿದ್ರೆ ಮಾತ್ರ ಅಲ್ಲಾಗೆ ಕಿವಿ ಕೇಳೋದಾ? ನಮ್ಮ ದೇವಸ್ಥಾನದಲ್ಲೂ ಪೂಜೆ ಮಾಡುತ್ತೇವೆ. ಅಲ್ಲೂ ಶ್ಲೋಕ ಹೇಳ್ತೆವೆ, ಭಜನೆ ಮಾಡ್ತೇವೆ. ಆದರೆ, ಆಝಾನ್‌ ಮೈಕಲ್ಲಿ ಜೋರಾಗಿ ಕೂಗಿದ್ರೆ ಮಾತ್ರ ಅಲ್ಲನಿಗೆ ಕೇಳಿದ್ರೆ ಅವನಿಗೆ ಕಿವುಡಾ ಅಂತ ಹೇಳ್ಬೆಕಾಗುತ್ತದೆ ಎಂದರು.

ಸಿದ್ದರಾಮಯ್ಯಗೆ ರಾಷ್ಟ್ರ ಭಕ್ತರು ಬೇಡ . ಜಿನ್ನಾ ಸಂಸ್ಕೃತಿ ಯ ಜನ ಬೇಕು. ಎಲ್ಲ ಮುಸ್ಲಿಮರು ದೇಶ ದ್ರೋಹಿಗಳೆಂದು ನಾನು ಕರೆಯಲ್ಲ. ಸಿದ್ದರಾಮಯ್ಯ ಕದ್ದು ಮುಚ್ಚಿ ದೇವಸ್ಥಾನಕ್ಕೆ ಹೋಗುತ್ತಾರೆ. ಹಣೆಗೆ ಕುಂಕುಮ ಇಡಲ್ಲ ಅಂತಾ ಹೇಳ್ತಾರೆ. ಆದರೆ, ಇತ್ತೀಚೆಗೆ ಚುನಾವಣೆ ಬಂದಾಗ ಡಬಲ್ ಕುಂಕುಮ ಹಾಕಲು ಆರಂಭಿಸಿದ್ದಾರೆ. ಮುಂದುವರೆದು, ಹಿಂದೂ ಆಂತ ಹೇಳುತಿದ್ದಾರೆ . ನಾನು ಹಿಂದು ಅಂತ ಹೇಳಿದ್ರೆ ಬಾಯಲ್ಲಿ ಹುಳಾ ಬೀಳುತ್ತೆ ಎಂದು ವಾಗ್ದಾಳಿ ನಡೆಸಿದರು.

ನಮಗೆ ಮುಸ್ಲಿಮರ ಓಟ್ ಬೇಡ, ಹಿಂದೂಗಳ ಓಟಲ್ಲಿ ನಾವು ಗೆಲ್ಲುತ್ತೇವೆ

ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಇರಬೇಕಾದರೆ ಹಿಂದೂ ಯುವಕರ ಕಗ್ಗೊಲೆಯಾದವು‌. ಚಾಮುಂಡೇಶ್ವರಿಯಲ್ಲಿ ಸೋತು ಕಾಂಗ್ರೆಸ್ ನಿರ್ನಾಮ ಆಗಲು ಕೊಲೆಯಾದ ಹಿಂದೂ ಯುವಕರ ತಾಯಂದಿರ ಕಣ್ಣಿರಿನ ಶಾಪವೇ ಕಾರಣ. ಆದರೂ, ಸಿದ್ದರಾಯ್ಯನಿಗೆ ಬುದ್ದಿ ಬಂದಿಲ್ಲ. ನಾನು ಮುಸ್ಲಿಮರ ಪರವಾಗಿ ಅಂತ ಸಿದ್ದರಾಮಯ್ಯ ಪ್ರನಾಳಿಕೆಯಲ್ಲಿ ಹೇಳಲಿ ನೋಡೋಣ ಎಲ್ಲ ಮುಸ್ಲಿಂಮರ ರಕ್ಷಣೆ ಮಾಡುತ್ತೇವೆ ಹಿಂದೂ ಗಳ ಓಟ್ ಬೇಡ ಅಂತಾ ಹೇಳಲಿ ಎಂದು ಸವಾಲು ಹಾಕಿದರು. ನನಗೆ ಮುಸ್ಲಿಮರ ಓಟ್ ಬೇಡ, ಹಿಂದೂಗಳ ಓಟಲ್ಲಿ ನಾವು ಗೆಲ್ಲುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ದೇಶದಲ್ಲಿ ನಿರ್ನಾಮ

ಮೈಸೂರು - ಬೆಂಗಳೂರು ರಸ್ತೆಗೆ ಕಾಂಗ್ರೆಸ್‌ನವರು ಒಂದು ಒಂದ್ ರೂಪಾಯಿ ಹಾಕಿಲ್ಲ. ಯಾಕೆ ಹೀಗೆ ಸುಮ್ಮನೆ ಅಪಪ್ರಚಾರ ಮಾಡುತ್ತೀರಾ. ಹೀಗೆ ಅಪಪ್ರಚಾರ ಮಾಡಿ ಮಾಡಿ ಕಾಂಗ್ರೆಸ್ ದೇಶದಲ್ಲಿ ನಿರ್ನಾಮ ಅಗಿದೆ. ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಕುಟು ಕುಟು ಅಂತಾಯಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಜೀವ ಹೋಗುತ್ತೆ ಎಂದು ಕಿಡಿಕಾರಿದರು.

ಬಾಯ್ ಬಿಟ್ರೆ ಬರೀ ಸುಳ್ಳು ಮೋಸ

ಸಿದ್ದರಾಮಯ್ಯ ಬಾಯ್ ಬಿಟ್ರೆ ಬರೀ ಸುಳ್ಳು ಮೋಸ. ಅವರನ್ನು ಯಾರೂ ನಂಬಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಾಯ್ತು. ಬಾದಾಮಿ ಬಿಟ್ಟು ಈಗ ಕೋಲಾರ ಹೊರಟಿದ್ದಾರೆ. ರಾಜ್ಯದ 224 ಕ್ಷೇತ್ರದಲ್ಲಿ ಅವರು ಎಲ್ಲೇ ನಿಂತ್ರು ಈ ಬಾರಿ ಸೋಲುತ್ತಾರೆ ಎಂದು ಬರೆದು ಕೊಡುತ್ತೇನೆ ಎಂದು ಸವಾಲು ಹಾಕಿದರು.


Post a Comment

Previous Post Next Post