ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿದ್ದು, ಈ ನಡುವಲ್ಲೇ ರಾಜಕೀಯ ನಾಯಕರು ಮತಕ್ಕಾಗಿ ಹಣ, ಉಡುಗೊರೆಯ ಆಮಿಷಗಳ ಒಡ್ಡುವಂತಹ ಬೆಳವಣಿಗೆಗಳು ಕಂಡು ಬರುತ್ತಿವೆ. ಇಂತಹ ಆಮಿಷಗಳ ವಿರುದ್ಧ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ಮುಂದಾಗಿದ್ದು, ದೂರುಗಳ ಸ್ವೀಕರಿಸಲು ನಿಯಂತ್ರಣ ಕೊಠಡಿಯನ್ನು ತೆರೆದಿದೆ.
ಸಂಗ್ರಹ ಚಿತ್ರಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿದ್ದು, ಈ ನಡುವಲ್ಲೇ ರಾಜಕೀಯ ನಾಯಕರು ಮತಕ್ಕಾಗಿ ಹಣ, ಉಡುಗೊರೆಯ ಆಮಿಷಗಳ ಒಡ್ಡುವಂತಹ ಬೆಳವಣಿಗೆಗಳು ಕಂಡು ಬರುತ್ತಿವೆ. ಇಂತಹ ಆಮಿಷಗಳ ವಿರುದ್ಧ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ಮುಂದಾಗಿದ್ದು, ದೂರುಗಳ ಸ್ವೀಕರಿಸಲು ನಿಯಂತ್ರಣ ಕೊಠಡಿಯನ್ನು ತೆರೆದಿದೆ.
2023 ರ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ನಡವಳಿಕೆಯನ್ನು ಹಾಳುಮಾಡಲು ಬಳಸಲಾಗುವ ನಗದು, ಚಿನ್ನಾಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳ ಸಾಗಣೆಯ ಮೇಲೆ ಕಟ್ಟುನಿಟ್ಟಿನ ನಿಗಾ ಇಡುವ ಜವಾಬ್ದಾರಿಯನ್ನು ಐಟಿ ಇಲಾಖೆಯ ವಿಭಾಗಕ್ಕೆ ಭಾರತೀಯ ಚುನಾವಣಾ ಆಯೋಗಕ್ಕೆ ನೀಡಿದೆ.
ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳುವ ಜವಾಬ್ದಾರಿ ಹೊತ್ತುಕೊಂಡಿರುವ ಐಟಿ ಇಲಾಖೆಯ ನಿಯಂತ್ರಣ ಕೊಠಡಿ ಮತದಾನ ದಿನಾಂಕದವರೆಗೆ 24*7ರಂತೆ ಕಾರ್ಯನಿರ್ವಹಿಸಲಿದೆ. ಯಾವುದೇ ವ್ಯಕ್ತಿ, ಪಕ್ಷ ಉಚಿತ ಉಡುಗೊರೆ, ನಗದು ನೀಡುತ್ತಿರುವುದು ಕಂಡು ಬಂದರೆ, ಟೋಲ್-ಫ್ರೀ ಫೋನ್ ಸಂಖ್ಯೆಗಳನ್ನು ಸಂಪರ್ಕಿಸುವ ಮೂಲಕ ಅಥವಾ ಇ-ಮೇಲ್ ಮೂಲಕ ದೂರುಗಳನ್ನು ನೀಡಬಹುದಾಗಿದೆ.
"ಮಾಹಿತಿ ಹಂಚಿಕೊಳ್ಳುವ ವ್ಯಕ್ತಿಗಳ ಹೆಸರು ಮತ್ತು ವಿವರಗಳನ್ನು ಗೌಪ್ಯವಾಗಿಡಲಾಗುತ್ತದೆ. ಎಲ್ಲಾ ನಾಗರಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಲು ಮತ್ತು ನೈಜ ಮಾಹಿತಿಯನ್ನು ಹಂಚಿಕೊಳ್ಳುವಂತೆ ವಿನಂತಿಸಲಾಗಿದೆ" ಎಂದು ಐಟಿ ಇಲಾಖೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದೂರು ನೀಡುವವರು ಟೋಲ್ ಫ್ರೀ ಸಂಖ್ಯೆ 1800-425 -2115/ 080-22861126, ಫ್ಯಾಕ್ಸ್ ಸಂಖ್ಯೆ 080-22866916, ಮೊಬೈಲ್ ಸಂಖ್ಯೆಗಳು 8277422825/ 8277413614, ಇ-ಮೇಲ್ cleankarnatakaelection@incometax.gov.in ಮೂಲಕ ದೂರು ನೀಡಬಹುದು
Post a Comment