ದಿನಾಂಕ 12-02-2023 ರಂದು ರಾತ್ರಿ ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಜಾವಗಟ್ಟೆ ಗ್ರಾಮದ ವಾಸಿ ಶ್ರೀಕಾಂತ್ ರವರ ತಮ್ಮ ಮನೆಯ ಮುಂದಿನ ರಸ್ತೆಯಲ್ಲಿ ನಿಲ್ಲಿಸಿದ್ದ ಅಶೋಕ ಲೈಲ್ಯಾಂಡ್ ವಾಹನವನ್ನು, ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0025/2023 ಕಲಂ 379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತದೆ.
ಪ್ರಕರಣದ ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಜಿ.ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಶ್ರೀ ಶಿವಾನಂದ ಮದರಕಂಡಿ, ಪೊಲೀಸ್ ಉಪಾಧೀಕ್ಷಕರು, ಶಿಕಾರಿಪುರ ಮತ್ತು ಶ್ರೀ ರುದ್ರೇಶ್, ಪೊಲೀಸ್ ವೃತ್ತ ನಿರೀಕ್ಷರು, ಶಿಕಾರಿಪುರ ನಗರ ವೃತ್ತ ರವರ ಮೇಲ್ವಿಚಾರಣೆಯಲ್ಲಿ ಶ್ರೀ ಮಂಜುನಾಥ್ ಎಸ್ ಕುರಿ, ಪಿಎಸ್ ಐ ಶಿರಾಳಕೊಪ್ಪ ರವರ ನೇತೃತ್ವದ ಸಿಬ್ಬಂಧಿಗಳಾದ ಹೆಚ್.ಸಿ ಸಂತೋಷ್ ಕುಮಾರ್, ಬಂಗಾರಪ್ಪ, ಶಿವಮೂರ್ತಿ, ಕುಮಾರ ನಾಯ್ಕ, ಇಂದ್ರೇಶ್, ಗುರುರಾಜ್, ವಿಜಯ ಕುಮಾರ್ ಮತ್ತು ಸಿಪಿಸಿ ಸಲ್ಮಾನ್ ಖಾನ್ ಹಾಜಿ, ಕಾರ್ತಿಕ್, ನಾಗರಾಜ್, ಹರೀಶ್, ವೀರಭದ್ರಪ್ಪ, ಕಾಂತೇಶ್ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.
ತನಿಖಾ ತಂಡವು ದಿನಾಂಕ 06-03-2023 ರಂದು ಪ್ರಕರಣದ ಆರೋಪಿತನಾದ ಶಾಹೀದ್@ ಶಾಹೀದ್ ಅಹಮ್ಮದ್, 24 ವರ್ಷ, ಆಶ್ರಯ ಬಡಾವಣೆ, ಸೊರಬ ಟೌನ್ ಈತನನ್ನು ದಸ್ತಗಿರಿ ಮಾಡಿ, ಆರೋಪಿತನಾದ ಶಿರಾಳಕೊಪ್ಪ ಪೊಲೀಸ್ ಠಾಣೆಯ 032 ಪ್ರಕರಣಗಳು ಸೇರಿ ಒಟ್ಟು 04 ವಾಹನ ಕಳ್ಳತನ ಪ್ರಕರಣಗಳು ಸೇರಿ ಒಟ್ಟು 04 ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂದಿಸಿದ ಅಂದಾಜು ಮೌಲ್ಯ 4,99,000/- ರೂ ಗಳ 01 ಅಶೋಕ ಲೈಲ್ಯಾಂಡ್ ವಾಹನ ಮತ್ತು 03 ದ್ವಿ ಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.
ತನಿಖಾ ತಂಡದ ಈ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.
Post a Comment